ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ: ರಾಜ್ಯಾದ್ಯಂತ ಸಕಲ ಸಿದ್ಧತೆ

By Suvaran Web DeskFirst Published Feb 28, 2018, 9:40 PM IST
Highlights

ಪ್ರಸಕ್ತ ಸಾಲಿನಲ್ಲಿ 3 ಲಕ್ಷದ52ಸಾವಿದ290 ಬಾಲಕರು ಹಾಗೂ3 ಲಕ್ಷದ37 ಸಾವಿರದ860 ಬಾಲಕಿಯರು ಸೇರಿದಂತೆ ಒಟ್ಟು 6 ಲಕ್ಷದ90ಸಾವಿರದ150 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.

ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು ಪ್ರಾರಂಭಗೊಳ್ಳುತ್ತಿವೆ..ನಾಳೆಯಿಂದ ಮಾರ್ಚ್ 17  ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ನಡೆಸಲು ಪಿಯು ಮಂಡಳಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.ಇನ್ನು ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ,ಪರೀಕ್ಷಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನ ಈ ಭಾರಿ ಪರೀಕ್ಷಾ ಮಂಡಳಿ ಕೈಗೊಂಡಿದೆ.

ನಾಳೆ ಬೆಳಿಗ್ಗೆ 10.15 ಕ್ಕೆ ಶುರುವಾಗುವ ಎಕಾನಾಮಿಕ್ಸ್ ಹಾಗೂ ಭೌತಶಾಸ್ತ್ರ ಪರೀಕ್ಷೆಗೆ ಚಾಲನೆ ಸಿಗಲಿದೆ. ಪ್ರಸಕ್ತ ಸಾಲಿನಲ್ಲಿ 3 ಲಕ್ಷದ 52ಸಾವಿದ 290 ಬಾಲಕರು ಹಾಗೂ3 ಲಕ್ಷದ37 ಸಾವಿರದ 860 ಬಾಲಕಿಯರು ಸೇರಿದಂತೆ ಒಟ್ಟು 6 ಲಕ್ಷದ 90ಸಾವಿರದ 150 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಪ್ರತಿ ಬಾರಿ ಹಲವು ಅಕ್ರಮಗಳಿಗೆ ಸಾಕ್ಷಿಯಾಗ್ತಿದ್ದ ಪಿಯು ಪರೀಕ್ಷೆಗಳು ಈ ಬಾರಿ ಪಾರದರ್ಶಕಾಗಿ ನಡೆಸಲು ಪಿಯು ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇನ್ನೇನು ವಿದ್ಯಾರ್ಥಿಗಳು ಟೆನ್ಯನ್ ಬಿಟ್ಟು ಕೂಲ್ ಆಗಿ ಪರೀಕ್ಷೆ ಬರೆಯುವಂತೆ ಎಲ್ಲಾ ರೀತಿಯಲ್ಲಿ ಪಿಯು ಮಂಡಳಿ ವ್ಯವಸ್ಥೆ ಮಾಡಿಕೊಟ್ಟಿದೆ.

click me!