ವಿದ್ಯಾರ್ಥಿನಿಯೋರ್ವಳ ಕನಸು ನನಸಾಗಲು ನೆರವಾದ ಸುಷ್ಮಾ ಸ್ವರಾಜ್

Published : Jan 06, 2018, 04:42 PM ISTUpdated : Apr 11, 2018, 12:49 PM IST
ವಿದ್ಯಾರ್ಥಿನಿಯೋರ್ವಳ ಕನಸು ನನಸಾಗಲು ನೆರವಾದ ಸುಷ್ಮಾ ಸ್ವರಾಜ್

ಸಾರಾಂಶ

17 ವರ್ಷ ವಯಸ್ಸಿನ ವಿದ್ಯಾರ್ಥಿನಿಯೋರ್ವಳ ಬಹುದೊಡ್ಡ ಕನಸನ್ನು ನನಸು ಮಾಡಲು  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೆರವಾಗಿದ್ದಾರೆ. ಎಂದಿಗೂ ಮಾನವೀಯತೆ ಮೆರೆಯುವ ಮೂಲಕ ಸದಾ ಸುದ್ದಿಯಾಗುವ  ಸುಷ್ಮಾ ಮತ್ತೊಮ್ಮೆ  ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ನವದೆಹಲಿ (ಜ.06): 17 ವರ್ಷ ವಯಸ್ಸಿನ ವಿದ್ಯಾರ್ಥಿನಿಯೋರ್ವಳ ಬಹುದೊಡ್ಡ ಕನಸನ್ನು ನನಸು ಮಾಡಲು  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೆರವಾಗಿದ್ದಾರೆ. ಎಂದಿಗೂ ಮಾನವೀಯತೆ ಮೆರೆಯುವ ಮೂಲಕ ಸದಾ ಸುದ್ದಿಯಾಗುವ  ಸುಷ್ಮಾ ಮತ್ತೊಮ್ಮೆ  ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಅಮೆರಿಕದಲ್ಲಿ ಶಿಕ್ಷಣವನ್ನು ಮುಂದುವರಿಸಲು, ವೀಸಾ ದೊರಕಿಸಲು ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ರಾಜಸ್ಥಾನದ ವಿದ್ಯಾರ್ಥಿನಿಯೋರ್ವಳಿಗೆ ಸುಷ್ಮಾ ಸಹಾಯ ಮಾಡಿದ್ದಾರೆ. ಗುರುವಾರ ಆಕೆಯ ವೀಸಾ ದೃಢಪಟ್ಟಿದೆ.  ಭಾನುಪ್ರಿಯ ಹರಿತ್ವಾಲ್ ಎಂಬ ಜಲಾಲಪುರ್ ಹಳ್ಳಿಯ  ವಿದ್ಯಾರ್ಥಿನಿ ರಾಜಸ್ಥಾನ ಸರ್ಕಾರದಿಂದ 1 ಕೋಟಿ ಸ್ಕಾಲರ್ಶಿಪ್ ಪಡೆದುಕೊಂಡಿದ್ದು,  ಕ್ಯಾಲಿಫೋರ್ನಿಯಾ ವಿವಿಯಲ್ಲಿ ಮುಂದಿನ ಶಿಕ್ಷಣ ಪಡೆಯಲು ಮುಂದಾಗಿದ್ದರು. ಕ್ಯಾಲಿಫೊರ್ನಿಯಾ ವಿವಿ ನಡೆಸಿದ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿದ್ದರು.

ಆದರೆ 2 ಬಾರಿ ಅಮೆರಿಕ ರಾಯಭಾರ ಕಚೇರಿ  ವೀಸಾ ನೀಡಲು ನಿರಾಕರಿಸಿತ್ತು. ಇದರಿಂದ ಭಾನುಪ್ರಿಯ, ಸುಷ್ಮಾ ಸ್ವರಾಜ್ ಸಂಪರ್ಕಿಸಿದ್ದರು. ಇದೀಗ ಆಕೆಗೆ ವೀಸಾ ದೊರಕಿಸಿಕೊಡಲು ಸುಷ್ಮಾ ನೆರವಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗದಗ: ಲಕ್ಕುಂಡಿಯಲ್ಲಿ ಎರಡನೇ ದಿನ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆ! ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!