ಜಿಡಿಪಿಗೆ ಮೋದಿಯ ಶೈಲಿಯಲ್ಲಿ ಹೆಸರು ಕೊಟ್ಟ ರಾಹುಲ್

Published : Jan 06, 2018, 04:14 PM ISTUpdated : Apr 11, 2018, 12:59 PM IST
ಜಿಡಿಪಿಗೆ ಮೋದಿಯ ಶೈಲಿಯಲ್ಲಿ ಹೆಸರು ಕೊಟ್ಟ ರಾಹುಲ್

ಸಾರಾಂಶ

ನಿನ್ನೆಯಷ್ಟೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2017-18ನೇ ಪ್ರಸಕ್ತ ಸಾಲಿನ ಜಿಡಿಪಿಯು 6.5 ರಷ್ಟಿದ್ದು ಇದು ಕಳೆದ 4 ವರ್ಷಗಳಲ್ಲಿಯೇ ಅತೀ ಕಡಿಮೆಯಾಗಿದೆ.

ನವದೆಹಲಿ(ಜ.06): ಭಾರತದ ರಾಜಕೀಯ ನಾಯಕರ ಭಾಷಣಗಳಲ್ಲಿ ವ್ಯಾಖ್ಯಾನಗಳಿಗೇನು ಬರವಿಲ್ಲ. ಪ್ರಧಾನಿ ನರೇಂದ್ರ ಮೋದಿಯ ಮಾತುಗಳಲ್ಲಿ ಹಲವು ವ್ಯಾಖ್ಯಾನಗಳನ್ನು ಕೇಳಿರುತ್ತೀರಿ. ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಡಿಪಿಗೆ ತಮ್ಮದೇ ಶೈಲಿಯ ಹೊಸ ಹೆಸರೊಂದನ್ನು ಕೊಟ್ಟಿದ್ದಾರೆ.

ಮಾಮೂಲಿ ಅರ್ಥದಲ್ಲಿ ಜಿಡಿಪಿ ಎಂದರೆ ಒಟ್ಟು ದೇಶೀಯ ಉತ್ಪನ್ನ. ಆದರೆ ರಾಹುಲ್ ಗಾಂಧಿ ಜಿಡಿಪಿಯನ್ನು ನರೇಂದ್ರ ಮೋದಿಯವರ 'ಒಟ್ಟು ವಿಭಜನೆಗೊಳಿಸುವ ನೀತಿ' ಎಂದು ಟ್ವೀಟ್ ಮಾಡಿದ್ದಾರೆ. ನಿನ್ನೆಯಷ್ಟೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2017-18ನೇ ಪ್ರಸಕ್ತ ಸಾಲಿನ ಜಿಡಿಪಿಯು 6.5 ರಷ್ಟಿದ್ದು ಇದು ಕಳೆದ 4 ವರ್ಷಗಳಲ್ಲಿಯೇ ಅತೀ ಕಡಿಮೆಯಾಗಿದೆ. ಕಳೆದ ವರ್ಷದ 2016-17ನೇ ಸಾಲಿನಲ್ಲಿ ಜಿಡಿಪಿಯು 7.1ರಷ್ಟಿತ್ತು' ಎಂದು  ಟೀಕಿಸಿದ್ದಾರೆ.

ಮುಂದಿನ ತಿಂಗಳು ಫೆಬ್ರವರಿ 1ರಂದು ಕೇಂದ್ರ ಸರ್ಕಾರದ ಆಯವ್ಯಯ ಮಂಡನೆಯಾಗಲಿದ್ದು ಮೋದಿಯವರ ವಿಭಜನೆಗೊಳಿಸುವ ನೀತಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪ್ರತಿಭೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತದೆ' ಎಂದಿದ್ದಾರೆ. ನಿನ್ನೆಯಷ್ಟೆ  2013ರ ಲೋಕಾಪಾಲ ಹಾಗೂ ಲೋಕಾಯುಕ್ತ ಕಾಯಿದೆ ಮಸೂದೆಯಾಗಲು ತಡವಾಗುವುದಕ್ಕೆ  ಆಕ್ರೋಶ ವ್ಯಕ್ತಪಡಿಸಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು