ಇಂದಿರಾ ಕ್ಯಾಂಟೀನ್ ಕ್ಯಾಶಿಯರ್’ಗೆ ಮೇಲಾಧಿಕಾರಿ ಲೈಂಗಿಕ ಕಿರುಕುಳ

Published : Jan 06, 2018, 04:00 PM ISTUpdated : Apr 11, 2018, 12:51 PM IST
ಇಂದಿರಾ ಕ್ಯಾಂಟೀನ್ ಕ್ಯಾಶಿಯರ್’ಗೆ ಮೇಲಾಧಿಕಾರಿ ಲೈಂಗಿಕ ಕಿರುಕುಳ

ಸಾರಾಂಶ

ಇಂದಿರಾ ಕ್ಯಾಂಟೀನ್ ಮೇಲಾಧಿಕಾರಿಯೋರ್ವರು ಕ್ಯಾಶಿಯರ್’ಗೆ ಕಿರುಕುಳ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸತೀಶ್ ಎಂಬ ಮೇಲಾಧಿಕಾರಿ ತಮಗೆ  ಕಿರುಕುಳ ನೀಡುತ್ತಿದ್ದುದಾಗಿ ಆರೋಪ ಮಾಡಿದ್ದಾರೆ.

ಬೆಂಗಳೂರು(ಜ.06) : ಇಂದಿರಾ ಕ್ಯಾಂಟೀನ್ ಮೇಲಾಧಿಕಾರಿಯೋರ್ವರು ಕ್ಯಾಶಿಯರ್’ಗೆ ಕಿರುಕುಳ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸತೀಶ್ ಎಂಬ ಮೇಲಾಧಿಕಾರಿ ತಮಗೆ  ಕಿರುಕುಳ ನೀಡುತ್ತಿದ್ದುದಾಗಿ ಮಹಿಳಾ ಕ್ಯಾಶಿಯರ್ ಆರೋಪ ಮಾಡಿದ್ದಾರೆ.

ಈ ಸಂಬಂಧ ಮಹಿಳೆಯು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಲಸದಲ್ಲಿ ಮುಂದುವರಿಯಬೇಕಾದರೆ ತಮ್ಮೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಮೇಲಾಧಿಕಾರಿ ಸತೀಶ್ ಮಾನಸಿಕ ಹಾಗೂ ದೈಹಿಕವಾಗಿ ನಿರಂತರವಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆ. ರಾತ್ರಿ ವೇಳೆ ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಪೊಲೀಸರು ಮೇಲಾಧಿಕಾರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Keralam Election Results: ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?
ಬಾಗಲಕೋಟೆ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಯಾರಿಗೆ ವಿಜಯ ಮಾಲೆ?