ಇಂಡೋನೇಷ್ಯಾದ ಈ ಬಾಲಕ ಕೋಳಿಯಂತೆ ಮೊಟ್ಟೆ ಇಡ್ತಾನೆ!

By Suvarna Web DeskFirst Published Feb 23, 2018, 9:20 AM IST
Highlights

ಪ್ರಕೃತಿಯಲ್ಲಿ ಆಗಾಗ ವಿಸ್ಮಯಗಳನ್ನು ಕೇಳುತ್ತಿರುತ್ತೇವೆ. ಇಲ್ಲೊಂದು ಅಂತಹುದೇ ವಿಸ್ಮಯಕಾರಿ, ವೈದ್ಯಲೋಕಕ್ಕೇ ಸವಾಲೆಸೆಯುವ ಸಂಗತಿ ನಡೆದಿದೆ.

ಜಕಾರ್ತಾ: ಪ್ರಕೃತಿಯಲ್ಲಿ ಆಗಾಗ ವಿಸ್ಮಯಗಳನ್ನು ಕೇಳುತ್ತಿರುತ್ತೇವೆ. ಇಲ್ಲೊಂದು ಅಂತಹುದೇ ವಿಸ್ಮಯಕಾರಿ, ವೈದ್ಯಲೋಕಕ್ಕೇ ಸವಾಲೆಸೆಯುವ ಸಂಗತಿ ನಡೆದಿದೆ. ಇಂಡೋನೇಷ್ಯಾದ ಬಾಲಕನೊಬ್ಬ ಮೊಟ್ಟೆಗಳನ್ನಿಡುತ್ತಿರುವ ಅಚ್ಚರಿದಾಯಕ ವಿಷಯ ವರದಿಯಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭವೇ ಎರಡು ಮೊಟ್ಟೆಗಳನ್ನಿಟ್ಟು ಆಶ್ಚರ್ಯ ಮೂಡಿಸಿದ್ದಾನೆ. ಈತ ಎರಡು ವರ್ಷಗಳಲ್ಲಿ 20 ಮೊಟ್ಟೆಯಿಟ್ಟಿದ್ದಾನೆ ಎನ್ನಲಾಗಿದೆ.

ಇಂಡೋನೇಷ್ಯಾದ ಗೊವಾದಲ್ಲಿನ ಶೇಖ್‌ ಯೂಸಫ್‌ ಆಸ್ಪತ್ರೆಗೆ 14ರ ವರ್ಷದ ಅಕ್ಮಲ್‌ ಎಂಬಾತ ಬಂದಿದ್ದ. ಆತ ತಾನು 2016ರಿಂದ ಮೊಟ್ಟೆಗಳನ್ನಿಡುತ್ತಿರುವ ಬಗ್ಗೆ ವೈದ್ಯರಿಗೆ ತಿಳಿಸಿದ್ದಾನೆ. ಈ ಸಂಬಂಧ ಬಾಲಕನನ್ನು ಆಸ್ಪತ್ರೆಗೆ ಹಲವು ಬಾರಿ ದಾಖಲಿಸಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರ ಸಮ್ಮುಖದಲ್ಲೇ ಅಕ್ಮಲ್‌ ಮೊಟ್ಟೆಯಿಟ್ಟಿದ್ದಾನೆ ಎನ್ನಲಾಗಿದೆ.

ಆದರೆ, ಬಾಲಕ ಮತ್ತು ಆತನ ಹೆತ್ತವರ ಪ್ರತಿಪಾದನೆಯನ್ನು ಒಪ್ಪದ ವೈದ್ಯರು, ಮಾನವ ದೇಹದೊಳಗೆ ಮೊಟ್ಟೆಸೃಷ್ಟಿಯಾಗಲು ಸಾಧ್ಯವಿಲ್ಲ. ಬಾಲಕನ ಗುದನಾಳಕ್ಕೆ ಉದ್ದೇಶಪೂರ್ವಕವಾಗಿ ಮೊಟ್ಟೆತಳ್ಳಲಾಗಿದೆ. ಆದರೆ, ತಾವು ಇದನ್ನು ನೇರವಾಗಿ ನೋಡಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಕ್ಮಲ್‌ ತಂದೆ ಇದನ್ನು ನಿರಾಕರಿಸಿದ್ದಾರೆ. ಕೆಲವು ಮೊಟ್ಟೆಗಳಲ್ಲಿ ಸಂಪೂರ್ಣ ಹಳದಿ ಅಥವಾ ಬಿಳಿ ಅಂಶ, ಕೆಲವು ಮೊಟ್ಟೆಗಳಲ್ಲಿ ಎರಡೂ ಅಂಶಗಳು ಪತ್ತೆಯಾಗಿವೆಯಂತೆ.

click me!