
ಬೆಂಗಳೂರು(ಫೆ.23): ಶಾಸಕನ ಪುತ್ರ ಹ್ಯಾರಿಸ್ ಪತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಶಾಂತಿನಗರದ ಶಾಸಕನ ಪುಂಡ ಪುತ್ರನಿಗೆ ಜಯಲಾ ಬೇಲಾ ಎನ್ನುವುದನ್ನು ಕಾದು ನೋಡಬೇಕಿದೆ.
ನಲಪಾಡ್ ಪರ ಖ್ಯಾತ ವಕೀಲ ಟಾಮಿ ಸೆಬೆಸ್ಟಿಯನ್ ವಾದ ಮಂಡನೆ ಮಾಡಲಿದ್ದು, ನಿನ್ನೆ ರಾತ್ರಿ ವಿದ್ವತ್ ಆರೋಗ್ಯ ವಿಚಾರಿಸಿದ ಹ್ಯಾರಿಸ್ ದಂಪತಿ ಬಳಿಕ ಆತನ ತಂದೆ ಲೋಕನಾಥನ್ ಬಳಿ, ಕೋರ್ಟ್'ನಲ್ಲಿ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಬೇಡಿ’ ಎಂದು ಮನವಿ ಮಾಡಿಕೊಂಡರೆನ್ನಲಾಗಿದೆ.
ಆದರೆ, ಹ್ಯಾರಿಸ್ ದಂಪತಿಯ ಮನವಿಗೆ ಪ್ರತಿಕ್ರಿಯೆ ನೀಡದ ಲೋಕನಾಥನ್, ‘ವೈದ್ಯರು ಕರೆಯುತ್ತಿದ್ದಾರೆ’ ಎಂದು ಹೇಳಿ ಆ ಸ್ಥಳದಿಂದ ಹೊರಟು ಹೋಗಿದ್ದಾರೆ. ಕೆಲಹೊತ್ತಾದರೂ ಲೋಕನಾಥನ್ ವಾಪಸ್ ಬರದೆ ಇದ್ದುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಹ್ಯಾರಿಸ್ ದಂಪತಿ ಸಪ್ಪೆಯಾಗಿ ಹೊರಟು ಹೋದರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.