ಮಾ.1ರಿಂದ ಚುನಾವಣಾ ಬಾಂಡ್‌ ಮಾರಾಟ

By Suvarna Web DeskFirst Published Feb 23, 2018, 9:09 AM IST
Highlights

ರಾಜಕೀಯ ಪಕ್ಷಗಳ ಅಕ್ರಮ ದೇಣಿಗೆಗೆ ಕಡಿವಾಣ ಹಾಕಲಿದೆ ಎಂದೇ ಬಣ್ಣಿಸಲಾಗಿರುವ ಚುನಾವಣಾ ಬಾಂಡ್‌ಗಳ ಮೊದಲ ಹಂತದ ಮಾರಾಟ ಮಾ.1-10ರವರೆಗೂ ಭಾರತೀಯ ಸ್ಟೇಟ್‌ ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ನವದೆಹಲಿ: ರಾಜಕೀಯ ಪಕ್ಷಗಳ ಅಕ್ರಮ ದೇಣಿಗೆಗೆ ಕಡಿವಾಣ ಹಾಕಲಿದೆ ಎಂದೇ ಬಣ್ಣಿಸಲಾಗಿರುವ ಚುನಾವಣಾ ಬಾಂಡ್‌ಗಳ ಮೊದಲ ಹಂತದ ಮಾರಾಟ ಮಾ.1-10ರವರೆಗೂ ಭಾರತೀಯ ಸ್ಟೇಟ್‌ ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

 ಈ ಚುನಾವಣಾ ಬಾಂಡ್‌ಗಳು ಮೊದಲಿಗೆ ದೇಶದ ನಾಲ್ಕು ಮಹಾನಗರಗಳಾದ ಚೆನ್ನೈ, ಕೋಲ್ಕತ್ತಾ, ಮುಂಬೈ ಮತ್ತು ದೆಹಲಿಯಲ್ಲಿರುವ ಎಸ್‌ಬಿಐನ ಮುಖ್ಯ ಶಾಖೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತೀಯ ನಾಗರೀಕ ಅಥವಾ ಯಾವುದೇ ವ್ಯಕ್ತಿಯು ಏಕಾಂಗಿ ಅಥವಾ ಜಂಟಿಯಾಗಿ ಈ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದಾಗಿದೆ.

ಕಳೆದ ಲೋಕಸಭಾ ಅಥವಾ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಶೇ.1ಕ್ಕಿಂತ ಹೆಚ್ಚು ಮತಗಳನ್ನು ಪಡೆದ ಪಕ್ಷಗಳು ಈ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ಅರ್ಹವಾಗಿರುತ್ತವೆ ಎಂದು 2017-18ನೇ ಬಜೆಟ್‌ ವೇಳೆ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಘೋಷಿಸಿದ್ದರು.

ವಿತರಣೆಯಾದ ಬಾಂಡ್‌ಗಳ ಸಲ್ಲಿಕೆಗೆ 15 ದಿನಗಳ ಕಾಲಾವಕಾಶವಿದ್ದು, ಅದರ ನಂತರ ಠೇವಣಿ ಮಾಡಿದ ಬಾಂಡ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಇದರಿಂದ ಇಂಥ ಬಾಂಡ್‌ಗಳ ಮೂಲಕ ಠೇವಣಿ ಮಾಡಿದ ಹಣವು ಯಾವುದೇ ರಾಜಕೀಯ ಪಕ್ಷಕ್ಕೆ ವರ್ಗಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

click me!