
ಭಾಗ್ಯಲಕ್ಷ್ಮಿಯ ಪೂಜಾಳ ಮದುವೆ ಕೊನೆಗೂ ಸುಸೂತ್ರವಾಗಿ ನೆರವೇರಿದೆ. ಆದಿಗೆ ತಾನು ಮಾಡಿದ್ದು ತಪ್ಪು ಎಂದು ತಿಳಿದು ಭಾಗ್ಯ ಮತ್ತು ಆಕೆಯ ಮನೆಯವರಿಗೆ ಕ್ಷಮೆ ಕೋರಿದ್ದಾನೆ. ಇನ್ನೇನು ಭಾಗ್ಯ ಮತ್ತು ಆದಿ ಒಂದಾಗುವುದನ್ನು ವೀಕ್ಷಕರು ಎದುರು ನೋಡುತ್ತಿದ್ದಾರಷ್ಟೇ. ಅತ್ತ ಪೂಜಾಳಿಗೆ ಯಾವುದೇ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಆದಿ ಮಾತು ಕೊಟ್ಟಿದ್ದಾನೆ. ಇನ್ನು ಕನ್ನಿಕಾ ಮತ್ತು ಮೀನಾಕ್ಷಿ ಪೂಜಾಳಿಗೆ ಯಾವ ರೀತಿ ತೊಂದರೆ ಕೊಡುತ್ತಾರೋ ಎನ್ನುವ ಭಯದಲ್ಲಿದ್ದಾರೆ ವೀಕ್ಷಕರು. ಇವೆಲ್ಲವುಗಳ ನಡುವೆಯೇ, ಪೂಜಾಳ ಮದುವೆಯ ವೇಳೆ ಭಾಗ್ಯಳ ತಂಗಿ ಲಕ್ಷ್ಮೀಯ ಎಂಟ್ರಿ ಕೂಡ ಆಗಿತ್ತು. ಅವಳ ಕೈಯಲ್ಲಿ ಮಗು ಹಿಡಿದುಕೊಂಡಿದ್ದಳು. ಲಕ್ಷ್ಮೀ ಬಾರಮ್ಮಾ ಸೀರಿಯಲ್ ಪ್ರಕಾರ ಈ ಮಗು ಲಕ್ಷ್ಮೀ ಮತ್ತು ವೈಷ್ಣವ್ದ್ದು. ಆದರೆ ನಿಜವಾಗಿಯೂ ಈ ಮಗು ಯಾರದ್ದು?
ಅಷ್ಟಕ್ಕೂ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್ ಅವರು ಇನ್ನೂ ಅವಿವಾಹಿತೆ. ಹಾಗಿದ್ದರೆ ಈ ಮಗು ಯಾರದ್ದು ಎನ್ನುವ ಪ್ರಶ್ನೆ ಹಲವು ವೀಕ್ಷಕರನ್ನು ಕಾಡಿದ್ದು ಇದೆ. ಸೀರಿಯಲ್‌ನಲ್ಲಿ ಇದು ಲಕ್ಷ್ಮಿಯ ಮಗು ಆಗಿದ್ದರೂ ರಿಯಲ್ ಆಗಿ ಇದು ಯಾರದ್ದು, ಲಕ್ಷ್ಮಿ ಪಾತ್ರಧಾರಿ ಭೂಮಿಕಾದ್ದಂತು ಅಲ್ಲ. ಹಾಗಿದ್ದರೆ ಯಾರದ್ದು ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಕಮೆಂಟ್ನಲ್ಲಿ ಹಾಕಿದ್ದು ಇದೆ. ಆದರೆ ಇದರ ಪ್ರೊಮೋ ರಿಲೀಸ್ ಮಾಡಿದಾಗ, ಅಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಏಕೆಂದರೆ ಇಲ್ಲಿ ವಾಹಿನಿ ಸೀರಿಯಲ್ ಪ್ರೊಮೋ ಬಿಡುಗಡೆ ಮಾಡಿರುತ್ತದೆಯಷ್ಟೇ. ನೆಟ್ಟಿಗರೇ ಪ್ರಶ್ನೋತ್ತರ ಮಾಡಿಕೊಳ್ಳಬೇಕೇ ವಿನಾ ಅಧಿಕೃತವಾಗಿ ಉತ್ತರ ಸಿಗುವುದಿಲ್ಲ.
ಆದರೆ, ಇದೀಗ ಈ ಪಾಪು ಜೊತೆ ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್ ಅವರು ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೀರಿನಲ್ಲಿ ಪಾಪುವಿನ ಕಾಲವನ್ನು ಮುಳುಗಿಸುತ್ತಾ ಅದು ನಗುವಂತೆ ಮಾಡಿದ್ದಾರೆ. ಈ ಕ್ಯೂಟ್ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಮಗು ಅಸಲಿಗೆ ಯಾರದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಸುಷ್ಮಾಕೆ. ರಾವ್ ಅವರು ನೆಟ್ಟಿಗರು ಕೇಳುವ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಇದರಿಂದಾಗಿಯೇ ಸಹಜವಾಗಿ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ತಮ್ಮ ಪ್ರಶ್ನೆಗೆ ನಟಿ ಉತ್ತರ ಕೊಡುವುದಕ್ಕೆ ನೆಟ್ಟಿಗರು ತುಂಬಾ ತುಂಬಾ ಸಂತೋಷ ಪಡುತ್ತಾರೆ.
ಅದೇ ರೀತಿ ಈ ಮಗುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಅವಳ ಸಹೋದರನದ್ದು ಎಂದು ಸುಷ್ಮಾ ಉತ್ತರಿಸಿದ್ದಾರೆ. ಅಲ್ಲಿಗೆ ಈ ಮಗು ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್ ಅವರ ಸಹೋದರನದ್ದು ಎನ್ನುವುದು ತಿಳಿಯುತ್ತದೆ. ಬಹುದಿನಗಳಿಂದ ವೀಕ್ಷಕರಲ್ಲಿ ಕಾಡ್ತಿದ್ದ ಪ್ರಶ್ನೆಗೆ ಕೊನೆಗೂ ನಟಿ ಈ ಮೂಲಕ ಉತ್ತರ ನೀಡಿದ್ದಾರೆ. ಇನ್ನು ನಟಿ ಭೂಮಿಕಾ ಕುರಿತು ಹೇಳುವುದಾದರೆ, ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.