ಫೋಟೋದಲ್ಲಿ ಮೇಲಿನ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಂತಿರುವ ಈ ಯುವತಿ ಗುಲಾಬಿ ಬಣ್ಣದ ಸೀರೆ ಧರಿಸಿ ತುಂಬಾ ಸಿಂಪಲ್ಲಾಗಿ ಕಾಣುತ್ತಿದ್ದಾರೆ. ಆದರೆ ಇಂದು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಫೋಟೋದಲ್ಲಿ ಸರಳತೆಯ ಪ್ರತಿರೂಪದಂತೆ ಕಾಣುವ ಈ ಯುವತಿ ಇಂದು ಗ್ಲಾಮರ್ ಮತ್ತು ಸ್ಟೈಲ್‌ಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿಯೂ ತನ್ನ ಛಾಪು ಮೂಡಿಸುತ್ತಿರುವ ಈ ನಟಿ ಎಲ್ಲಾ ವಯಸ್ಸಿನ ಜನರಿಗೂ ಫೇವರಿಟ್. 'ಪುಷ್ಪ' ಚಿತ್ರದ 'ಊ ಅಂಟಾವಾ' ಹಾಡಿನ ಮೂಲಕ ಪ್ರೇಕ್ಷಕರಕ್ಕೆ ಹೃದಯಕ್ಕೆ ಇನ್ನು ಹತ್ತಿರವಾದ ಈ ನಟಿಯನ್ನು ನೀವು ಇನ್ನೂ ಯಾರೆಂದು ಗುರುತಿಸಲು ಸಾಧ್ಯವಾಗದಿದ್ದರೆ ನಾವೇ ಹೇಳ್ತೀವಿ ಬಿಡಿ. ಆ ನಟಿ ಬೇರಾರೂ ಅಲ್ಲ, ಸಮಂತಾ ರುತ್ ಪ್ರಭು. ಇದು ಅವರ ಕಾಲೇಜ್ ಡೇಸ್ ಫೋಟೋ.
ಮಾಡೆಲಿಂಗ್‌ನೊಂದಿಗೆ ಪ್ರಾರಂಭ
ಬಾಲ್ಯದಲ್ಲಿ ತುಂಬಾ ಸಿಂಪಲ್ಲಾಗಿ ಕಾಣುತ್ತಿದ್ದ ಸಮಂತಾ, ಯಾವಾಗಲೂ ಗ್ಲಾಮರ್ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಮಾಡೆಲಿಂಗ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಈ ಸಮಯದಲ್ಲಿ ಸಮಂತಾ ಮನೆಯ ಖರ್ಚುಗಳನ್ನು ಭರಿಸಲು ಅರೆಕಾಲಿಕ ಕೆಲಸಗಳನ್ನು ಸಹ ಮಾಡುತ್ತಿದ್ದರು. ಮಾಡೆಲಿಂಗ್ ಮಾಡುವಾಗ ಅವರಿಗೆ 'ಯೇ ಮಾಯಾ ಚೆಸಾವೇ' ಚಿತ್ರದ ಆಫರ್ ಸಿಕ್ಕಿತು. ನಂತರ ಅವರ ಮೊದಲ ಚಿತ್ರವೇ ಬಿಗ್ ಹಿಟ್ ಎಂದು ಪ್ರೂವ್ ಆಯ್ತು. ಈ ಸಿನಿಮಾಕ್ಕಾಗಿ ಸಮಂತಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಯನ್ನು ಸಹ ಪಡೆದರು.
ಊಟ ಮಾಡೋದಕ್ಕೂ ಹಣವಿರಲಿಲ್ಲ
ಸಮಂತಾ ಸಂದರ್ಶನವೊಂದರಲ್ಲಿ ತಾನು ಓದುವುದರಲ್ಲಿ ನಿಪುಣಳಾಗಿದ್ದೆ, ಆದರೆ ತನ್ನ ಪೋಷಕರ ಬಳಿ ಉನ್ನತ ಶಿಕ್ಷಣ ಕೊಡಿಸಲು ಸಾಕಷ್ಟು ಹಣವಿರಲಿಲ್ಲ ಎಂದು ಹೇಳಿದ್ದಾರೆ. ಸಮಂತಾ ಹೇಳುವಂತೆ "ತನ್ನ ಪೋಷಕರು ಯಾವಾಗಲೂ ಬಹಳಷ್ಟು ಓದು, ಓದಿದ ನಂತರವೇ ದೊಡ್ಡದನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಸಮಂತಾ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಮೊದಲ ಚಿತ್ರ ಮಾಡುವ ಮೊದಲು ಸಮಂತಾ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆಕೆಯ ಬಳಿ ತಿನ್ನಲು ಕೂಡ ಹಣವಿರಲಿಲ್ಲ.
ಚೆನ್ನಾಗಿ ಗಳಿಸಿದ ಹೆಸರು
ಸಮಂತಾ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತ್ತು ನಾನಿ ಅವರಂತಹ ದಕ್ಷಿಣದ ದೊಡ್ಡ ತಾರೆಯರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ತಾರೆಯರು ಸಹ ಸಮಂತಾ ಅವರನ್ನು ತುಂಬಾ ಲಕ್ಕೀ ಎಂದು ಪರಿಗಣಿಸುತ್ತಾರೆ. ಸಮಂತಾ ದಕ್ಷಿಣದ ಸೂಪರ್ ಸ್ಟಾರ್ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರನ್ನು ವಿವಾಹವಾದರು. ಆದರೆ ಇಬ್ಬರೂ ಕೆಲವು ವರ್ಷಗಳಲ್ಲಿ ದೂರವಾದರು. ಸಮಂತಾ ಈಗ ದಕ್ಷಿಣದ ಜೊತೆಗೆ ಹಿಂದಿ ಪ್ರೇಕ್ಷಕರಿಗೂ ಇಷ್ಟವಾಗಿದ್ದು, ಬಹಳ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನಿರ್ಮಾಪಕರು ಮತ್ತು ನಿರ್ದೇಶಕರು ಸಹ ತಮ್ಮ ಚಿತ್ರಗಳಿಗಾಗಿ ಸಮಂತಾ ಅವರನ್ನು ಸಂಪರ್ಕಿಸುತ್ತಿದ್ದಾರೆ.
ಕನ್‌ಫರ್ಮ್ ಮಾಡ್ತರಾ?
ಸಮಂತಾ ರುತ್ ಪ್ರಭು ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿದ್ದಾರೆ. ಸ್ವಲ್ಪ ಸಮಯದಿಂದ ನಟಿಯ ಹೆಸರು 'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಕೇಳಿಬರುತ್ತಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ಆಗಾಗ್ಗೆ ಅವರಿಬ್ಬರ ಫೋಟೋಗಳು ಸಹ ರಿವೀಲ್ ಆಗುತ್ತಲೇ ಇರುತ್ತದೆ. ಅವರ ರಿಲೇಶನ್‌ಶಿಪ್ ಬಗ್ಗೆಯೂ ಕನ್‌ಫರ್ಮ್ ಬೇಕಿದೆ. ಆದರೆ ರಾಜ್ ಈಗಾಗಲೇ ಮದುವೆಯಾಗಿದ್ದಾರೆ. ಪ್ರಸ್ತುತ, ಅವರ ಅಭಿಮಾನಿಗಳು ಸಮಂತಾ ಅವರ ಸಂಬಂಧವನ್ನು ಕನ್‌ಫರ್ಮ್ ಮಾಡಲು ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.