
ಕನ್ನಡ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣನ್ (Supritha Sathyanarayan) ಅವರ ಎಂಗೇಜ್‌ಮೆಂಟ್ ಆಗಿದ್ದು ಗೊತ್ತೇ ಇದೆ. ಕಳೆದ ಮಾರ್ಚ್ ತಿಂಗಳು ಆಗಿರೋ ಈ ಎಂಗೇಜ್‌ಮೆಂಟ್ ಸುದ್ದಿ ಇಗಾಗಲೇ ಸಾಕಷ್ಟು ವೈರಲ್ ಅಗಿದೆ. ಚಂದನ್ ಶೆಟ್ಟಿ (Chandan Shetty) ಎಂಬ ಐಟಿ ಉದ್ಯೀಗಿಯೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಸುಪ್ರೀತಾ ಸತ್ಯನಾರಾಯಣನ್. ಗುಟ್ಟಾಗಿ ಎಂಗೇಜ್ ಮಾಡಿಕೊಂಡು, ಕೆಲವು ದಿನಗಳ ಬಳಿಕ ಅವರೇ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಹೌದು, ‘ಸೀತಾ ವಲ್ಲಭ’ ಧಾರಾವಾಹಿಯಲ್ಲಿ ಮೈಥಿಲಿ ಪಾತ್ರ ಮಾಡ್ತಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಎಂಗೇಜ್ ಆಗಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಗುಟ್ಟಾಗಿ ಎಂಗೇಜ್ ಆಗಿರೋ ಸುಪ್ರೀತಾ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ಕೊಟ್ಟ ಮಾಹಿತಿ ಇಲ್ಲಿದೆ.
'ನನ್ನ ಜೀವನದ ಹೊಸ ಚಾಪ್ಟರ್ ಇಲ್ಲಿಂದ ಶುರು. ಹೆಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ? ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯು. ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯು ಕಂದ. ನನ್ನ ಹೃದಯ ನಿನ್ನದು.
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ'
ಎಂದು ಸುಪ್ರೀತಾ ಬರೆದುಕೊಂಡಿದ್ದರು.
ಯಾರು ಈ ಚಂದನ್ ಶೆಟ್ಟಿ ಯಾರು?
ಸುಪ್ರೀತಾ ಸತ್ಯನಾರಾಯಣ್ ಅವರು ಚಂದನ್ ಶೆಟ್ಟಿ ಎನ್ನುವವರನ್ನು ಮದುವೆಯಾಗಲಿದ್ದಾರೆ. ಚಂದನ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡಿಜಿಟಲ್ ಕ್ರಿಯೇಟರ್, ಸಾಫ್ಟ್‌ವೇರ್ ಉದ್ಯೋಗಿ ಎಂದು ಬರೆದುಕೊಂಡಿದ್ದಾರೆ. ಕೊಡಗಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ ಎನ್ನಲಾಗಿದೆ.
ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್?
ಇವರಿಬ್ಬರದ್ದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್? ಈ ಬಗ್ಗೆ ಸಿಕ್ಕ ಮಾಹಿತಿ ಪ್ರಕಾರ, ಅದು ಅರೇಂಜ್ಡ್ ಮ್ಯಾರೇಜ್. ಆದ್ರೆ ಎಲ್ಲಾ ಅರೇಂಜ್ ಆದ್ಮೇಲೆ ಅವರಿಬ್ಬರ ಮಧ್ಯೆ ಪ್ರೀತಿ ಉಕ್ಕಿ ಹರಿಯುತ್ತಿದೆ. ತುಂಬ ಖಾಸಗಿಯಾಗಿ ಈ ನಿಶ್ಚಿಯಾರ್ಥ ನಡೆದಿದೆ. ಎಂಗೇಜ್ ಆಗಿ ಹಲವು ದಿನಗಳ ಬಳಿಕ ಸುಪ್ರೀತಾ ಅವರೇ ಈ ವಿಷಯ ರಿವೀಲ್ ಮಾಡಿದ್ದಾರೆ. ಇನ್ನು ಮದುವೆ ಯಾವಾಗ, ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಈಗ ಹೊರಬಿದ್ದಿದ್ದು ಇದೇ ತಿಂಗಳು, ಅಂದರೆ ಮೇದಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ.
ಅಂದಹಾಗೆ, ಈ ನಟಿ ಸುಪ್ರೀತಾ ಸತ್ಯನಾರಾಯಣ ಅವರು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆರಂಭದಲ್ಲಿ ʼಸೀತಾ ವಲ್ಲಭʼ ಧಾರಾವಾಹಿಯಲ್ಲಿ ನಟಿಸಿದ್ದ ಸುಪ್ರೀತಾ ಅವರು ಆ ನಂತರದಲ್ಲಿ ʼಸರಸುʼ ಧಾರಾವಾಹಿ ಮಾಡಿದರು. ಇದಾದ ನಂತರದಲ್ಲಿ ಸಿನಿಮಾ ಕಡೆಗೆ ಮುಖ ಮಾಡಿದರು. ʼಮೆಲೋಡಿ ಡ್ರಾಮಾʼ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಆದರೆ, ಸಿನಿಮಾ ಇವರಿಗೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ತಂದುಕೊಡಲಿಲ್ಲ. ಸದ್ಯ ಮದುವೆ ಆಗುತ್ತಿರುವ ನಟಿ ಸುಪ್ರೀತಾ ಅವರು ಮುಂದೆ ಸಿನಿಮಾಗಳಲ್ಲಿ ನಟಿಸ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.