ಬಾಲಿವುಡ್ ನಟಿ ಸನ್ನಿ ಲಿಯೋನ್ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ. ಹಬ್ಬ ಆಚರಣೆ ಸಂಭ್ರಮದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ[ಆ. 16] ರಕ್ಷಾ ಬಂಧನ ಸಂಭ್ರಮದ 9 ಚಿತ್ರಗಳನ್ನು ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಸನ್ನಿ ಕಾಣಿಸಿಕೊಂಡಿದ್ದ ರಿಯಾಲಿಟಿ ಶೋ ಜಡ್ಜ್ ರಣವಿಜಯ್ ಸಂಘಾ ಅವರಿಗೆ ರಾಖಿ ಕಟ್ಟುತ್ತಿರುವ ಚಿತ್ರವೂ ಇದೆ. ಇನ್ನೊಂದು ಚಿತ್ರದಲ್ಲಿ ಸನ್ನಿ ಮಗಳು ನಿಶಾ ರಾಖಿ ಕಟ್ಟುವುದಕ್ಕೆ ನೆರವಾಗುತ್ತಿದ್ದಾರೆ.
ಪಿಂಕ್ ಕಲರ್ ಉಡುಪು ಧರಸಿ ಮಕ್ಕಳು ಹಬ್ಬವನ್ನು ಸಂಭ್ರಮಿಸಿದ್ದಾರೆ. ಸನ್ನಿ ಲಿಯೋನ್ ಅಭಿಮಾನಿಗಳು ಸಹ ನಟಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನೀವು ಎಂಥ ಅತ್ಯುತ್ತಮ ಮಹಿಳೆ ಎಂದು ಕೊಂಡಾಡಿದ್ದಾರೆ. ಅಣ್ಣ-ತಂಗಿ ಇಬ್ಬರಿಗೂ ರಕ್ಷಾ ಬಂಧನದ ಶುಭಾಶಯ.. ಇಂದಿನ ದಿನಕ್ಕೆ ಇದಕ್ಕಿಂತ ಅತ್ಯುತ್ತಮವಾದ ಪೋಟೋ ಮತ್ತೊಂದಿಲ್ಲ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.
ಉತ್ತರ ಕರ್ನಾಟಕ ಪ್ರವಾಹಕ್ಕೆ ಸನ್ನಿ ಲಿಯೋನ್‌ರಿಂದ 2 ಕೋಟಿ, ಸತ್ಯವೇ?
ಮೋಸ್ಟ್ ಗೂಗಲ್ಡ್ ಅಂದರೆ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿ ಎಂಬ ಸ್ಥಾನದಲ್ಲಿ ಸನ್ನಿ ಲಿಯೋನ್ ಮೊದಲಿಗರಾಗಿ ಹೊರಹೊಮ್ಮಿದ್ದರು. ಸನ್ನಿ ತಮ್ಮ ಅಭಿಮಾನಿಗಳಿಗೆ ಸಹಸ್ರ ಸಹಸ್ರ ಧನ್ಯವಾದ ಹೇಳಲು ಮರೆತಿಲ್ಲ.
undefined