ಕೆಬಿಸಿಯಲ್ಲಿ 25 ಲಕ್ಷ ರೂ. ಗೆದ್ದ ಸುಧಾ ಮೂರ್ತಿ!| ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್‌ಬನೇಗಾ ಕರೋಡ್‌ಪತಿ
ಮುಂಬೈ[ಡಿ.01]: ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್‌ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಇಸ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 25 ಲಕ್ಷ ರು. ಬಹುಮಾನ ಗೆದ್ದುಕೊಂಡಿದ್ದಾರೆ.
ಸತತ ಎರಡು ಬಾರಿ ಫಿಲ್ಮಂ ಫೇರ್ ಪ್ರಶಸ್ತಿ ಪಡೆದ ನಟಿ ಯಾರು? ಎಂದು ಕೇಳಲಾದ 50 ಲಕ್ಷ ರು.ನ ಪ್ರಶ್ನೆಗೆ ಉತ್ತರಿಸಲು ಸುಧಾಮೂರ್ತಿ ವಿಫಲವಾದರು. ವಿಶೇಷವೆಂದರೆ ಈ ಪ್ರಶ್ನೆ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರಿಗೆ ಸಂಬಂಧಿಸಿದ್ದಾಗಿತ್ತು.
A post shared by Sony Entertainment Television (@sonytvofficial) on Nov 29, 2019 at 4:38am PST
ಸುಧಾಮೂರ್ತಿ ಉತ್ತರದಿಂದ ನಿರಾಶರಾದ ಅಮಿತಾಭ್, ‘ನಾನು ಮನೆಗೆ ಹೋದರೆ ಹೊಡೆತ ತಿನ್ನುವುದು ಗ್ಯಾರಂಟಿ’ ಎಂದು ಹಾಸ್ಯಚಟಾಕಿ ಹಾರಿಸಿದರು.