
ಬೆಂಗಳೂರು[ನ.23]: ವಕೀಲ ಎಂದು ಹೇಳಿಕೊಂಡು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಕನ್ನಡ ಸಹಿತ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ಪಾರ್ವತಿ ದೂರು ದಾಖಲಿಸಿದ್ದಾರೆ.
ವಕೀಲ ಕಿಶೋರ್ ಎಂದು ಸೋದರನಿಗೆ ಪರಿಚಯಿಸಿಕೊಂಡು ವ್ಯಕ್ತಿಯೊಬ್ಬ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ದ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಫೇಸ್ಬುಕ್ ಮೆಸೆಂಜರ್ ಮೂಲಕ ಕಿರುಕುಳ ನೀಡುತ್ತಿದ್ದು, ನಾನು ಇರುವ ಸ್ಥಳದ ಬಗ್ಗೆ ನನ್ನ ಸಹೋದರನಿಗೆ ಸುಳ್ಳು ಮಾಹಿತಿ ನೀಡಿದ್ದಾನೆ. ನನ್ನ ಜತೆ ಸಂಬಂಧ ಹೊಂದಿರುವುದಾಗಿಯೂ ಹೇಳಿಕೊಂಡಿದ್ದಾನೆ ಎಂದು ಪಾರ್ವತಿ ದೂರಿದ್ದಾರೆ. ಜತೆಗೆ ಆತನ ಮೆಸೇಜುಗಳ ಸ್ಕ್ರೀನ್ ಶಾಟ್‌ಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕನ್ನಡದ ಮಿಲನ, ಪೃಥ್ವಿ, ಅಂದರ್ ಬಾಹರ್, ಮಳೆ ಬರಲಿ ಮಂಜು ಇರಲಿ ಸಿನಿಮಾಗಳಲ್ಲಿ ಪಾರ್ವತಿ ನಟಿಸಿದ್ದಾರೆ.
'ಮಿಲನ' ಚೆಲುವೆ ಪಾರ್ವತಿ ಮೆನನ್ ಈಗ ಹೇಗಾಗಿದ್ದಾರೆ ನೋಡಿ!
ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಭಾರತೀಯ ದಂಡ ಸಂಹಿತೆಯ 354ಡಿ ಹಾಗೂ 120ಒ ವಿಧಿಯಡಿ ಪ್ರಕರಣ ದಾಖಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.