ಛೇ..ಬಿಡುಗಡೆ ದಿನವೇ ಪೈಲ್ವಾನ್ ಫುಲ್ ಮೂವಿ ಲೀಕ್..

By Web Desk  |  First Published Sep 13, 2019, 12:00 AM IST

ಬಿಡುಗಡೆ ದಿನವೇ ಪೈಲ್ವಾನ್ ಲೀಕ್/ ಆನ್ ಲೈನ್ ನಲ್ಲಿ ಇಡೀ ಚಿತ್ರ ಹರಿದಾಡುವಂತೆ ಮಾಡಿದ ಹ್ಯಾಕರ್ಸ್/ ಚಿತ್ರತಂಡದ ಮನವಿಗೂ ಬೆಲೆ ಇಲ್ಲ


ಬೆಂಗಳೂರು[ಸೆ. 12]  ಲೀಕರ್ಸ್ ಮತ್ತು ಹ್ಯಾಕರ್ಸ್ ಗಳ ಕಾಟದಿಂದ ಸೈಬರ್ ಪ್ರಪಂಚ ಒಂದೆಲ್ಲಾ ಒಂದು ಸಮಸ್ಯೆ ಕಾಣುತ್ತಲೇ ಇದೆ. ಬಹುನಿರೀಕ್ಷಿತ ಚಿತ್ರ ಕನ್ನಡದ ಪೈಲ್ವಾನ್ ಚಿತ್ರವನ್ನು ಹ್ಯಾಕರ್ಸ್ ಗಳು ಲೀಕ್ ಮಾಡಿದ್ದಾರೆ. ಮೊದಲ ದಿನವೇ ಪೈಲ್ವಾನ್ ಪೈರಸಿಯಾಗಿದ್ದು ಅಭಿಮಾನಿಳು ಆಕ್ರೋಶ ಹೊರ ಹಾಕಿದ್ದಾರೆ.

ಚಿತ್ರದ ನಿರ್ದೇಶಕ ಕೃಷ್ಣ  ಪೈರಸಿ ಬಗ್ಗೆ ಟ್ವೀಟ್ ಮಾಡಿದ್ದರು. ಪೈರಸಿ ಆಗಿರುವುದು ನಿಮಗೆ ಕಂಡು ಬಂದರೆ, antipiracy@aiplex.com ಮೇಲ್ ಐಡಿಗೆ ಕಳುಹಿಸಿ ಎಂದು ತಿಳಿಸಿದ್ದರು. ಆದರೂ ಕೆಲ ಕಿಡಿಗೇಡಿಗಳು ಚಿತ್ರವನ್ನು ಲೀಕ್ ಮಾಡಿದ್ದಾರೆ.

Tap to resize

Latest Videos

ಪೈಲ್ವಾನ್ ತಮಿಳು ವರ್ಸನ್ ಸಿನಿಮಾ ಲೀಕ್ ಆಗಿದೆ.  ಕಿಡಿಗೇಡಿಗಳ ಕೃತ್ಯಕ್ಕೆ ಸುದೀಪ್ ಅಭಿಮಾನಿಗಳು ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!