AT Raghu ಮಂಡ್ಯದ ಗಂಡು ಸಿನಿಮಾದ ನಿರ್ದೇಶಕ ಎಟಿ ರಘು ನಿಧನ

ಕನ್ನಡದ ಹಿರಿಯ ನಿರ್ದೇಶಕ ಎಟಿ ರಘು, 76 ವರ್ಷ ವಯಸ್ಸಿನಲ್ಲಿ ನಿಧನರಾದರು. ಅವರು ಅಂಬರೀಷ್ ಅವರ 27 ಸಿನಿಮಾಗಳನ್ನು ನಿರ್ದೇಶಿಸಿದ್ದರು ಮತ್ತು 'ಮಂಡ್ಯದ ಗಂಡು' ಬಿರುದನ್ನು ನೀಡಿದ್ದರು. ಅವರ ಅಂತ್ಯಕ್ರಿಯೆ ಇಂದು ಹೆಬ್ಬಾಳದಲ್ಲಿ ನಡೆಯಲಿದೆ.

Mandyada Gandu Fame Kannada film Director AT Raghu Passes Away san

ಬೆಂಗಳೂರು (ಮಾ.21): ಕನ್ನಡದ ಹಿರಿಯ ನಟ ದಿವಂಗತ ಅಂಬರೀಷ್‌ ಅವರ 27ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಅವರ ಪಾಲಿಗೆ ಚಿರಕಾಲ ಉಳಿಯುವಂಥ 'ಮಂಡ್ಯದ ಗಂಡು' ಎನ್ನುವ ಬಿರುದು ನೀಡಿದ ಅದೇ ಹೆಸರಿನ ಸಿನಿಂಆದ ನಿರ್ದೇಶಕ ಎಟಿ ರಘು ಗುರುವಾರ ರಾತ್ರಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ 5-6 ವರ್ಷಗಳಿಂದಲೂ ಅನಾರೋಗ್ಯದಿಂದ ಎಟಿ ರಘು ಬಳಲುತ್ತಿದ್ದರು. ಮಂಡ್ಯದ ಗಂಡು ಸೇರಿದಂತೆ 55 ಚಿತ್ರಗಳನ್ನು ಇವರು ನಿರ್ದೇಶನ ಮಾಡಿದ್ದರು. ಇದರಲ್ಲಿ ರೆಬಲ್‌ಸ್ಟಾರ್‌ ಅಂಬರೀಷ್‌ ಅವರಿಗೆ 27 ಸಿನಿಮಾಗಳನ್ನು ಡೈರೆಕ್ಟ್‌ ಮಾಡಿದ್ದರು. ರಜನೀಕಾಂತ್ ನಟನೆಯ ಬಾಲಿವುಡ್ ಚಿತ್ರ ಮೇರಿ ಅದಾಲತ್ ಸಿನಿಮಾಗೂ ಎಟಿ ರಘು ನಿರ್ದೇಶನ ಮಾಡಿದ್ದರು. ಇವ ನಿರ್ದೇಶನದಲ್ಲಿ ಅವಳ ನೆರಳು, ಮಂಡ್ಯದ ಗಂಡು, ಕಾಡಿನ ರಾಜ , ಮೈಸೂರು ಜಾಣ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದವು. ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯ ಮನೆಯಲ್ಲಿ ರಘು ಅವರ ಪಾರ್ಥಿವ ಶರೀರ ಇಡಲಾಗಿದ್ದು. ಶುಕ್ರವಾರ ಮಧ್ಯಾಹ್ನ  2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಎಟಿ ರಘು ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶನ ಮಾಡಿದ್ದರು. ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲೂ ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಕನ್ನಡ ಸಿನಿಮಾರಂಗ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರ. ತೀವ್ರ ಅನಾರೋಗ್ಯದಿಂದ ರಘು ಬಳಲುತ್ತಿದ್ದ ಎಟಿ ರಘು, ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

Latest Videos

ಎ.ಟಿ ರಘು ಹುಟ್ಟಿದ್ದು ಕೊಡಗಿನಲ್ಲಿ. ಕೊಡವ ಆಪಾಡಂಡ ಸಮುದಾಯಕ್ಕೆ ಸೇರಿದ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಡಿದ್ದರು. 1980 ರಲ್ಲಿ ಬಿಡುಗಡೆಯಾದ 'ನ್ಯಾಯ ನೀತಿ ಧರ್ಮ' ಅವರ ನಿರ್ದೇಶನದ ಮೊದಲ ಸಿನಿಮಾ. ಅಂಬರೀಷ್, ಆರತಿ, ದ್ವಾರಕೀಶ್ ಈ ಚಿತ್ರದಲ್ಲಿ ನಟಿಸಿದರು. 

ರಾಜೇಂದ್ರ ಭೂಪತಿ ಮಗಳು ಅಜ್ಜಯ್ಯನ ಮನೆ ಸೇರಿದ್ದೇಗೆ? ಪಾತ್ರ ಬದಲಾಗ್ತಿದ್ದಂತೆ ಬದಲಾಯ್ತು ಮಲ್ಲಿ ಅದೃಷ್ಟ!

ಈ ಸಿನಿಮಾ ಮೂಲಕ ಅಂಬರೀಷ್ ಜೊತೆ ರಘು ಅವರಿಗೆ ಒಳ್ಳೆಯ ಸ್ನೇಹ ಬೆಳೆದಿತ್ತು. ಆ ಬಳಿಕ ಅಂಬರೀಷ್ ನಟನೆಯ 'ಆಶಾ', 'ಅವಳ ನೆರಳು', 'ಮಂಡ್ಯದ ಗಂಡು', 'ಮಿಡಿದ ಹೃದಯಗಳು' ಸೇರಿ 27 ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು . ಅಂಬರೀಷ್‌ ನಟನೆಯ'ಆಶಾ' ಚಿತ್ರವನ್ನು ಅವರು ಹಿಂದಿಗೆ 'ಮೇರಿ ಅದಾಲತ್' ಹೆಸರಿನಲ್ಲಿ ರಿಮೇಕ್ ಮಾಡಿದರು. ಇದರಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 1984 ರಲ್ಲಿ ರಿಲೀಸ್‌ ಆಗಿತ್ತು.

ಸುಪ್ರೀಂ ಕೋರ್ಟ್ ಹೇಳಿದೆ.. ಬೆಟ್ಟಿಂಗ್ ಆ್ಯಪ್ ವಿವಾದದ ಬಗ್ಗೆ ವಿಜಯ್ ದೇವರಕೊಂಡ ಟೀಮ್ ಕಾಮೆಂಟ್ಸ್!

vuukle one pixel image
click me!