ಆಸ್ಪತ್ರೆಯಲ್ಲಿರುವ ಸ್ಟಾರ್ ಗಾಯಕಿ ಆತ್ಮ*ಹತ್ಯೆಗೆ ಯತ್ನಿಸಿದ್ರಾ? ಮಗಳು ಬಿಚ್ಚಿಟ್ಟ ಸತ್ಯವಿದು!

Published : Mar 05, 2025, 04:22 PM ISTUpdated : Mar 05, 2025, 04:30 PM IST
ಆಸ್ಪತ್ರೆಯಲ್ಲಿರುವ ಸ್ಟಾರ್ ಗಾಯಕಿ ಆತ್ಮ*ಹತ್ಯೆಗೆ ಯತ್ನಿಸಿದ್ರಾ? ಮಗಳು ಬಿಚ್ಚಿಟ್ಟ ಸತ್ಯವಿದು!

ಸಾರಾಂಶ

ಪ್ರಸಿದ್ಧ ಗಾಯಕಿ ಕಲ್ಪನಾ ಅವರು ಅತಿಯಾದ ನಿದ್ರೆ ಮಾತ್ರೆ ಸೇವಿಸಿ ಪ್ರಜ್ಞಾಹೀನರಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಪನಾ ಆತ್ಮಹತ್ಯೆಗೆ ಯತ್ನಿಸಿಲ್ಲ, ನಿದ್ರಾಹೀನತೆಗಾಗಿ ವೈದ್ಯರ ಸಲಹೆಯಂತೆ ಮಾತ್ರೆ ತೆಗೆದುಕೊಂಡಿದ್ದರು ಎಂದು ಮಗಳು ದಯಾ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ, ಕಲ್ಪನಾ ಆರೋಗ್ಯ ಸ್ಥಿರವಾಗಿದೆ ಮತ್ತು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಕೆ ತಿಳಿಸಿದ್ದಾರೆ.

ತಮಿಳುನಾಡು: ಪ್ರಸಿದ್ಧ ಹಿನ್ನೆಲೆ ಗಾಯಕಿ ಕಲ್ಪನಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಂಬ  ಮಾಹಿತಿ ಹೊರಬಿದ್ದಿದೆ. ಮಂಗಳವಾರದಂದು ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡ ಪೊಲೀಸರು, ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಯಿತು. ಆದರೆ ಕಲ್ಪನಾ ಆತ್ಮಹತ್ಯೆಗೆ ಯತ್ನಿಸಿದರು ಎಂದು ಎಲ್ಲರೂ ಭಾವಿಸಿದ್ದರು. ನಿದ್ರೆ ಮಾತ್ರೆಗಳನ್ನು ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಪ್ರಾಥಮಿಕವಾಗಿ ತಿಳಿಸಿದರು.

ಕಲ್ಪನಾ ಪ್ರಜ್ಞಾಹೀನರಾಗಲು ಕಾರಣವೇನು?:
ಚೆನ್ನೈನಲ್ಲಿದ್ದ ಅವರ ಪತಿ ಪ್ರಸಾದ್ ಅವರನ್ನು ಕರೆಸಿ ವಿಚಾರಣೆ ನಡೆಸಿದರು. ಗಾಯಕಿ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅತಿಯಾದ ಮಾತ್ರೆಗಳೇ ಕಾರಣ ಎಂದು ಕಲ್ಪನಾ ಮಗಳು ದಯಾ ಪ್ರಸಾದ್ ಹೇಳಿದರು. ಅವರು ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರದಿಂದ ನೋಡಿಕೊಳ್ಳುತ್ತಿದ್ದಾರೆ. ಆಗ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಡೆದದ್ದನ್ನು ಬಹಿರಂಗಪಡಿಸಿದರು. ಕಲ್ಪನಾ ಆತ್ಮಹತ್ಯೆಗೆ ಯತ್ನಿಸಲಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಅವರು ನಿದ್ರಾಹೀನತೆ ಕಾಯಿಲೆಯಿಂದ ಬಳಲುತ್ತಿರುವುದರಿಂದ, ವೈದ್ಯರ ಸಲಹೆಯಂತೆ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವುಗಳ ಪ್ರಮಾಣ ಹೆಚ್ಚಾದ ಕಾರಣ, ಅತಿಯಾದ ಔಷಧಿಗಳ ಕಾರಣದಿಂದ ಅವರ ತಾಯಿ ಪ್ರಜ್ಞಾಹೀನರಾದರು ಎಂದು ಹೇಳಿದರು .

Singer Kalpana: ಆತ್ಮಹತ್ಯೆಗೆ ಯತ್ನಿಸಿದ್ರಾ ಸ್ಟಾರ್ ಗಾಯಕಿ? ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆ

ಚ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ:
ಕಲ್ಪನಾ ಮಗಳು ದಯಾ ಪ್ರಸಾದ್ ತಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ನಾವೆಲ್ಲರೂ ಸಂತೋಷವಾಗಿದ್ದೇವೆ ಎಂದು ತಿಳಿಸಿದ್ದಾರೆ. ಅಮ್ಮನ ಆರೋಗ್ಯದ ಬಗ್ಗೆ ತಪ್ಪು ಸುದ್ದಿಗಳನ್ನು ಹರಡಬೇಡಿ ಎಂದೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದೂ ಹೇಳಿದರು. ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಕಲ್ಪನಾ ಮಗಳು ದಯಾ ಪ್ರಸಾದ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ತಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದೂ, ಅತಿಯಾದ ಮಾತ್ರೆಗಳ ಕಾರಣದಿಂದಲೇ  ಹೀಗಾಗಿದೆ ಎಂದು ಮಗಳು ತಿಳಿಸಿದ್ದು, ಇದರಿಂದ ಅಭಿಮಾನಿಗಳು ನಿರಾಳರಾಗಿದ್ದಾರೆ.

ಶ್ರೇಯಾ ಘೋಷಾಲ್ ಮೊಟ್ಟಮೊದಲು ಹಾಡಿದ್ದು ಹೇಗೆ? ಅಲ್ಲಿ ಈ ಗಾಯಕಿ ಬಗ್ಗೆ ಏನಂತ ಹೇಳಿದ್ರು?

ಗಾಯಕಿ ಕಲ್ಪನಾ ಆರೋಗ್ಯ ಹೇಗಿದೆ?:
ಕಲ್ಪನಾ ಅವರ ಆರೋಗ್ಯದ ಬಗ್ಗೆ ವೈದ್ಯರು ಅಭಿಪ್ರಾಯ ತಿಳಿಸಿದರು. ಪ್ರಸ್ತುತ ಕಲ್ಪನಾ ಅವರ ಆರೋಗ್ಯ ಸ್ಥಿರವಾಗಿದೆ ಎಂದೂ, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಿದ್ದೇವೆ ಎಂದೂ ತಿಳಿಸಿದರು. ಈಗ ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಎರಡು ಮೂರು ದಿನಗಳಲ್ಲಿ ಕಲ್ಪನಾ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದೂ, ಚಿಂತಿಸಬೇಕಾಗಿಲ್ಲ ಎಂದೂ ತಿಳಿಸಿದರು. ಆಸ್ಪತ್ರೆಯಲ್ಲಿ ಕಲ್ಪನಾ ಚಲಿಸುವ ವಿಡಿಯೋ ಒಂದು ಬಿಡುಗಡೆಯಾಗಿದೆ. ಇದರಲ್ಲಿ ಅವರ ಆರೋಗ್ಯ ಸ್ಥಿರವಾಗಿರುವಂತೆ ಕಾಣುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು