
ಬೆಂಗಳೂರು(ಡಿ. 27) ಸ್ಟಾಪ್ ಪೈರಸಿ ಎಂದು ಪದೇ ಪದೇ ಹೇಳುತ್ತಲೇ ಇರುತ್ತೇವೆ. ಆದರೆ ಕಿಡಿಗೇಡಿಗಳು ಮಾತ್ರ ತಮ್ಮ ಕುಕೃತ್ಯ ನಿಲ್ಲುವುದೇ ಇಲ್ಲ.
ಕರ್ನಾಟಕ ಸೇರಿ ವಿವಿಧ ಕಡೆ ಬಿಡುಗಡೆಯಾಗಿರುವ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಾ ಇತ್ತು. ಆದರೆ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ ಸಂದರ್ಶನ
ಎಂದಿನಂತೆ ಈ ಬಾರಿಯೂ ಚಿತ್ರ ಲೀಕ್ ಆಗಿರುವುದು ತಮಿಳ್ ರಾಕರ್ಸ್ ನಿಂದ.ಪೈಲ್ವಾನ್ ಚಿತ್ರ ಸಹ ಲೀಕ್ ಆಗಿದ್ದು ದೊಡ್ಡ ಸುದ್ದಿಯಾಗಿತ್ತು.
ಕನ್ನಡದ ಅವತರಿಣಿಕೆ ಸಾಮಾನ್ಯವಾಗಿ ಲೀಕ್ ಆಗುವುದಿಲ್ಲ. ತಮಿಳು ಅಥವಾ ತೆಲುಗಿನ ಅವತರಿಣಿಕೆ ಲೀಕ್ ಆಗುತ್ತದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂನಲ್ಲಿಯೂ ಸಿನಿಮಾ ರಿಲೀಸ್ ಆಗಿತ್ತು. ಇದೀಗ ತಮಿಳು ಅವತರಿಣಿಕೆ ಲೀಕ್ ಆಗಿದ್ದು ಮತ್ತೊಮ್ಮೆ ಕುಚೇಷ್ಟೆಯ ಪರಮಾವಧಿಯನ್ನು ಎತ್ತಿ ತೋರಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.