ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಸ್ಯಾಂಡಲ್‌ವುಡ್‌ ಈ ನಟ

Published : Feb 27, 2019, 05:44 PM IST
ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಸ್ಯಾಂಡಲ್‌ವುಡ್‌ ಈ ನಟ

ಸಾರಾಂಶ

ಆರ್ಥಿಕ ಸಂಕಷ್ಟದಲ್ಲಿದ್ದಾರೆ ಸ್ಯಾಂಡಲ್‌ವುಡ್ ನಟ ನಟರಾಜ್ | ಎಂಬತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ | ಸಹಾಯಕ್ಕಾಗಿ ಅಂಗಲಾಚಿದ್ದಾರೆ ನಟರಾಜ್ 

ಬೆಂಗಳೂರು (ಫೆ. 27):  ಎಂಬತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಸ್ಯಾಂಡಲ್ ವುಡ್ ನಟ ನಟರಾಜ್  ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. 

ಪುಲ್ವಾಮ ದಾಳಿ: ಹುತಾತ್ಮ ಯೋಧರ ಕುಟುಂಬಗಳಿಗೆ ಲತಾ ಮಂಗೇಶ್ಕರ್ ನೆರವು

ವಿಷ್ಣುವರ್ಧನ್ ,ಅಂಬರೀಶ್ ,ಶಿವರಾಜ್ ಕುಮಾರ್ ,ದರ್ಶನ್,ಶರಣ್ ಸೇರಿದಂತೆ ಜೊತೆ ಸಾಕಷ್ಟು ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.  ಏಕದಂತ ,ಸಂತ, ರಾಜರಾಜೇಂದ್ರ, ಕೋಲಾರ , ಜಠಾಯು, ವಿಕ್ಟರಿ - 2  ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟಿಂಗ್ ಮಾಡಿದ ದರ್ಶನ್

ನಟರಾಜ್ ರವರು  ಸ್ಟ್ರೋಕ್ ನಿಂದ ಬಳಲುತ್ತಿದ್ದು ದುಡಿಯೋ ಶಕ್ತಿ ಇಲ್ಲದೇ ಸಹಾಯಕ್ಕೆ ಅಂಗಲಾಚಿದ್ದಾರೆ.   ಆಸ್ಪತ್ರೆ ವೆಚ್ಚ ಭರಿಸಲು, ಮನೆ ಬಾಡಿಗೆ ಕಟ್ಟಲು ಹರಸಾಹಸಪಡುತ್ತಿದ್ದಾರೆ. 

ಸದ್ಯ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ನಟರಾಜ್ ವಾಸವಾಗಿದ್ದಾರೆ.  ಕಲಾವಿದರ ಸಂಘಕ್ಕೆ ಸಹಾಯ ಕೇಳಿದ್ರೆ ಮೆಂಬರ್ ಶಿಪ್ ಕಾರ್ಡ್ ಇಲ್ಲ ಅನ್ನುವ ನೆಪ ಹೇಳಲಾಗಿದೆ.  ಅವಕಾಶ ಇಲ್ಲದೇ ಇದ್ದಾಗ ಡ್ರೈವಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರು.ಈಗ ಅದಕ್ಕೂ ಆಗದೇ ಪರದಾಡುತ್ತಿದ್ದಾರೆ.  ಹೆಂಡತಿ ದುಡಿದು ಸಾಕುತ್ತಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೂ ಕಾಸಿಲ್ಲ ಅಂತ  ನಟರಾಜ್ ಕಣ್ಣೀರು ಹಾಕಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?