
ಮುಂಬೈ (ಫೆ. 27): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಗಾಯಕಿ ಲತಾ ಮಂಗೇಶ್ಕರ್ ಹಣಕಾಸಿನ ಸಹಾಯ ಮಾಡಲು ಮುಂದಾಗಿದ್ದಾರೆ.
ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟಿಂಗ್ ಮಾಡಿದ ದರ್ಶನ್
ದೇಶಕ್ಕಾಗಿ ಮಡಿದ ನಮ್ಮ ಹೆಮ್ಮೆಯ ಯೋಧರ ಕುಟುಂಬಗಳಿಗೆ ನೆರವಾಗಲು 1 ಕೋಟಿ ರೂ ಹಣವನ್ನು ನೀಡಲಿದ್ದಾರೆ. ಏ. 24 ರಂದು ಲತಾ ಮಂಗೇಶ್ಕರ್ ತಂದೆ ದೀನಾನಾಥ್ ಮಂಗೇಶ್ಕರ್ ಪುಣ್ಯತಿಥಿಯಂದು 1 ಕೋಟಿ ರೂ ಮೊತ್ತವನ್ನು ನೀಡಲಿದ್ದಾರೆ.
ಹೌ ಈಸ್ ದಿ ಜೋಷ್? ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತುಗಳನ್ನು ಕೇಳಿ
‘ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಚಿತ್ರರಂಗದ ಸಾಕಷ್ಟು ಮಂದಿ ಸಹಾಯ ಮಾಡುತ್ತಲೇ ಬಂದಿದ್ದಾರೆ. ನಾವು ಕೂಡಾ ನಮ್ಮ ಕಡೆಯಿಂದ ಸಹಾಯ ಮಾಡಲು ಮುಂದಾಗಿದ್ದೇವೆ’ ಎಂದು ಹೇಳಿದ್ದಾರೆ. ದೀನಾನಾಥ್ ಮಂಗೇಶ್ಕರ್ ಪ್ರತಿಷ್ಠಾನ ಕೂಡಾ ಸೈನಿಕರಿಗೆ 5 ಲಕ್ಷ ರೂ ಕೊಡಲು ವಾಗ್ದಾನ ಮಾಡಿದೆ.
ಈ ಹಿಂದೆ ಲತಾ ಮಂಗೇಶ್ಕರ್, ನನ್ನ ಹುಟ್ಟುಹಬ್ಬದಂದು ಬೊಕ್ಕೆ, ಗಿಫ್ಟ್ ಕಳುಹಿಸುವ ಬದಲು ಅದೇ ಹಣವನ್ನು ಸೈನಿಕರ ನಿಧಿಗೆ ಹಾಕುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.