ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗುವಿನ ನಾಮಕರಣ ಮುಗಿದಿದೆ. ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದು ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ.
ಬೆಂಗಳೂರು[ಜೂ. 23] ದಿ ಮೋಸ್ಟ್ ಅವೈಟೆಡ್ ನೇಮಿಂಗ್ ಸೆರಮನಿ ಅಂದ್ರೆ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಪುತ್ರಿಯದು. ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಲಿಟಲ್ ಪ್ರಿನ್ಸೆಸ್ ಅನ್ನು ‘ಐರಾ’ ಎಂದು ಕರೆದಿದ್ದಾರೆ.
ಜೂನ್ 23 ರಂದು ನಾಮಕರಣ ಮಾಲಾಗುತ್ತದೆ ಎಂದು ಅಭಿಮಾನಿಗಳಿಗೆ ರಾಧಿಕಾ ಮೊದಲೆ ತಿಳಿಸಿದ್ದರು. ಬೇಬಿ YR ಗೆ ಬೆಳಗ್ಗೆ 11 ಗಂಟೆಯಿಂದ ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಮಾಡಲಾಗಿದೆ. ಯಶ್ ಮತ್ತು ರಾಧಿಕಾ ಇಬ್ಬರ ಹೆಸರನ್ನು ಸೇರಿಸಿ ಐರಾ ಎಂದು ನಾಮಕರಣ ಮಾಡಲಾಗಿದೆ. ಐರಾ ಎಂದರೆ ಗೌರವಾನ್ವಿತ ಎಂದು ನಿಘಂಟು ಅರ್ಥ ಹೇಳುತ್ತದೆ.
ರಾಕಿಂಗ್ ದಂಪತಿ ಮುದ್ದಾದ ಮಗಳ ಪೋಟೋವನ್ನು ಮೊದಲ ಸಾರಿ ಅಕ್ಷಯ ತೃತೀಯದಂದು ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹೆಸರಿಗೆ ಪ್ರತಿಕ್ರಿಯೆ ಸೂಚಿಸುತ್ತಿದ್ದಾರೆ.
Introducing our lil angel.. ♥️ #radhikapandit #nimmaRP
A post shared by Radhika Pandit (@iamradhikapandit) on Jun 23, 2019 at 7:13am PDT