ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!

Published : Jun 23, 2019, 06:17 PM ISTUpdated : Jun 23, 2019, 06:21 PM IST
ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!

ಸಾರಾಂಶ

ಕನ್ನಡದ ಹೆಮ್ಮೆಯ ನಟ ವೈಜ್ಯನಾಥ್ ಬಿರಾದರ್ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಸಹ ಅರ್ಹ ವ್ಯಕ್ತಿಯನ್ನು ಕರೆಸಿದ್ದೀರಿ ಎಂದು ಹೇಳಿದೆ. ಹಾಗಾದರೆ ಬಿರಾದರ್ ಎದುರಿಸಿ ನಿಂತ ಸವಾಲುಗಳು ಏನು? 

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಬಿರಾದಾರ್ ನಡುವೆ ಒಪ್ಪಂದ ಒಂದು ಆಗಿತ್ತಂತೆ. ಅಂದು ಉಪೇಂದ್ರ ಬರಹಗಾರರಾಗಿದ್ದರು, ಬಿರಾದಾರ್ ನಾಟಕಗಳಲ್ಲಿ ಅಭಿನಯಿಸುತ್ತ ಸಿನಿಮಾ ಅವಕಾಶಕ್ಕೆ ಹುಡುಕುತ್ತಿದ್ದರು.

ಒಮ್ಮೆ ಆಕಸ್ಮಿಕವಾಗಿ ಭೇಟಿಯಾದ ಈ ಇಬ್ಬರು ಮಹಾನ್ ಕಲಾವಿರ ನಡುವೆ ಒಪ್ಪಂದ ಒಂದು  ಆಗಿತ್ತಂತೆ. ಇದನ್ನು ಸ್ವತಃ ಬಿರಾದಾರ್ ಅವರೆ ತೆರೆದು ಇಟ್ಟಿದ್ದಾರೆ. ಸಂಕೇತ್ ಸ್ಟುಡಿಯೋದಲ್ಲಿ ಭೇಟಿಯಾದ ನಟ, ನಿರ್ದೇಶಕ ಉಪೇಂದ್ರ ಹಾಗೂ ಬಿರಾದರ್ ಇಬ್ಬರು ಪರಸ್ಪರ ಒಂದು ಮಾತು ಹೇಳಿಕೊಂಡಿದ್ದರು. ‘ನಾನು ಉಪೇಂದ್ರ, ಗುರುರಾಜ್ ಹೊಸಕೋಟೆ ಅವರ ತಂಡದಲ್ಲಿ ನಿಮ್ಮನ್ನು ನೋಡಿದ್ದೇನೆ, ನೀವು ಮಾಡುವ ಸಿನಿಮಾಕ್ಕೆ ಬರಹಗಾರರು ಬೇಕಾದರೆ ನನಗೆ ತಿಳಿಸಿ ಎಂದು ಉಪೇಂದ್ರ ಹೇಳಿದ್ದರು.

ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

ಇದಕ್ಕೆ ಪ್ರತಿಯಾಗಿ ನಾನು ನಾಟಕದಲ್ಲಿ ಅಭಿನಯಿಸುತ್ತೇನೆ. ಹೊಸ ಸಿನಿಮಾಕ್ಕೆ ಹಾಸ್ಯ ನಟರು ಬೇಕಾದರೆ ತಿಳಿಸಿ ಎಂದು ಉಪ್ಪಿಗೆ ಬಿರಾದಾರ್ ಮನವಿ ಮಾಡಿಕೊಂಡಿದ್ದರು.  ವರನಟ ಡಾ.ರಾಜ್ ಕುಮಾರ್ ಅವರನ್ನು ಹುಡುಕಿಕೊಂಡು ಮದ್ರಾಸ್ ಗೆ ತೆರಳಿದ್ದು,,, ಅಲ್ಲಿಂದ ಬಸ್ ಜಾರ್ಜ್ ಗೆ 30 ರೂ. ಪಡೆದು ವಾಪಸ್ ಬೆಂಗಳೂರಿಗೆ ಬಂದಿದ್ದು.. ಈ ರೀತಿ ಅನೇಕ ವಿಚಾರಗಳನ್ನು ಬಿರಾದಾರ್ ಹಂಚಿಕೊಂಡರು.

ಇದಾದ ಮೇಲೆ ಬಿರಾದಾರ್ ಗೆ ಉಪೇಂದ್ರ ಅವರ ಗುರು ಕಾಶಿನಾಥ್ ಅವಕಾಶ ಮಾಡಿಕೊಡುತ್ತಾರೆ. ‘ಕನಸೆಂಬೋ ಕುದುರೆಯನ್ನೇರಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಬಿರಾದಾರ್ ಪಡೆದುಕೊಳ್ಳುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?