
ಬೆಂಗಳೂರು[ಜೂ. 26] ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಯಶ್ -ರಾಧಿಕಾ ದಂಪತಿ ತಮ್ಮ ಮಗುವಿನ ಮೂಲಕವೇ ಹೇಳಿಸಿದ್ದಾರೆ. ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ ಎಂದು ಐರಾ ಮೂಲಕವೇ ಪೋಸ್ಟ್ ಮಾಡಿಸಿದ್ದಾರೆ. ರಾಧಿಕಾ ಪಂಡಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ರಾಕಿಂಗ್ ಸ್ಟಾರ್ ದಂಪತಿ ಎರಡನೇ ಮಗು ಹೊಂದಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಗು ಐರಾ ಪೋಟೋಗಳನ್ನು ಒಳಗೊಂಡ ವಿಡಿಯೋ ಹಂಚಿಕೊಂಡಿದ್ದು ತಮ್ಮ/ತಂಗಿ ಆಗಮನವನ್ನು ಮಗುವಿನ ಹತ್ತಿರವೇ ಹೇಳಿಸಿದ್ದಾರೆ. ನಮ್ಮ ಕುಟುಂಬದ ಮೇಲೆ ಅಭಿಮಾನಿಗಳ ಹಾರೈಕೆ ಇರಲಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ.
ಯಶ್-ರಾಧಿಕಾ ಮಗಳ ನಾಮಕರಣ ಹೇಗಿತ್ತು? ಚಿತ್ರಲೋಕ
ಕಳೆದ ಭಾನುವಾರ ತಮ್ಮ ಮೊದಲ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದರು. ಮೊದಲನೆ ಮಗುವಿಗೆ 7 ತಿಂಗಳು ತುಂಬುತ್ತಿದ್ದು ಇನ್ನು 5 ತಿಂಗಳ ಅವಧಿಯಲ್ಲಿ ಮತ್ತೊಂದು ಮಗು ಯಶ್ ಕುಟುಂಬ ಸೇರಿಕೊಳ್ಳಲಿದೆ.
ರಾಧಿಕಾ-ಯಶ್ ಮಗಳು 'AYRA'; ಏನೀ ಹೆಸರಿನ ಅರ್ಥ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.