ಕಿಚ್ಚನ ಜೊತೆ ಸೇರಿದ 'ದಾಸ'ನ ಬಳಗ; ಸುದೀಪ್ ಜೊತೆ ದರ್ಶನ್ ಗೆಳತಿ ದೋಸ್ತಿ! ಮುಂದೇನು ಕಥೆ?

Published : Nov 27, 2025, 04:45 PM IST
Kichcha Sudeep Rakshitha Prem Umapathy Darshan

ಸಾರಾಂಶ

ಈಗ ನೋಡಿದ್ರೆ ಉಮಾಪತಿ, ಸುದೀಪ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ರಕ್ಷಿತಾ ಸೋದರನ ಪಬ್​ನಲ್ಲಿ ಕಿಚ್ಚನ ಜೊತೆ ಕುಳಿತು ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ದಾಸನ ಬಳಗ , ಕಿಚ್ಚನ ಗ್ಯಾಂಗ್​ನಲ್ಲಿ ಮಿಂಚ್ತಾ ಇದೆ. ಇದೆನ್ನೆಲ್ಲಾ ನೋಡ್ತಾ ಕಾಲಾಯ ತಸ್ಮೈನಮಃ ಅಂತಿದ್ದಾರೆ ಗಾಂಧಿನಗರ ಮಂದಿ..! ಮುಂದೇನು?

ಏನಾಗ್ತಿದೆ ಸ್ಯಾಂಡಲ್‌ವುಡ್‌ನಲ್ಲಿ?

ನಟ ದರ್ಶನ್ ತೂಗುದೀಪ (Darshan Thoogudeepa) ಜೈಲುಪಾಲಾದ ಮೇಲೆ ಅವರ ಆಪ್ತವಲಯದಲ್ಲಿ ಇದ್ದ ಅನೇಕರು ದಾಸನ ಸಂಪರ್ಕ ಕಡಿದುಕೊಂಡಿದ್ರು. ದರ್ಶನ್ ಜೊತೆಗೆ ನಿಂತುಕೊಂಡವರು ಕೆಲವೇ ಕೆಲವು ಮಂದಿ. ಅದ್ರಲ್ಲೂ ಕೆಲವರು ಈಗ ಕಿಚ್ಚನ ಗ್ಯಾಂಗ್ ಸೇರಿಬಿಟ್ರಾ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಕಿಚ್ಚನ ಜೊತೆ ಸೇರಿದ ದಾಸನ ಬಳಗ..!

ಯೆಸ್ ದರ್ಶನ್ ಮತ್ತು ಸುದೀಪ್ ನಡುವೆ ಸ್ನೇಹ ಸಂಬಂಧ ಮುರಿದು ಬಿದ್ದು 7 ವರ್ಷಗಳೇ ಕಳೆದವು. ಒಂದ್ ಕಾಲದಲ್ಲಿ ಕುಚಿಕು ಕುಚಿಕು ಗೆಳೆಯರಾಗಿದ್ದ ಸುದೀಪ್ ಅಂಡ್ ದರ್ಶನ್ ಈಗ ಎಂದಿಗೂ ಒಂದಾಗದಷ್ಟು ದೂರ ಉಳಿದಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಒಂದು ಹಂತದಲ್ಲಿ ಹೇಗಾಗಿಬಿಟ್ಟಿತ್ತು ಅಂದ್ರೆ ದರ್ಶನ್ ಜೊತೆಗಿರುವವರು, ಸುದೀಪ್ ಜೊತೆ ಸೇರಂಗಿಲ್ಲ. ಕಿಚ್ಚನ ಗ್ಯಾಂಗ್ ನವರು ದಾಸನ ಕಡೆ ಬರಂಗಿಲ್ಲ ಅನ್ನೋ ವಾತಾವರಣ ನಿರ್ಮಾಣ ಆಗಿತ್ತು. ಇದು ಸಹಜವಾಗೇ ಇಬ್ಬರಿಗೂ ಆಪ್ತವಾಗಿದ್ದ ಅನೇಕರಿಗೆ ಕಿರಿ ಕಿರಿ ತಂದಿತ್ತು.

ಸುದೀಪ್ ಜೊತೆ ದಾಸನ ಗೆಳತಿ ದೋಸ್ತಿ..!

ರಕ್ಷಿತಾ ಪ್ರೇಮ್, ದರ್ಶನ್ ಪಾಲಿಗೆ ಅಚ್ಚುಮೆಚ್ಚಿಗೆ ಗೆಳತಿ. ದರ್ಶನ್ ಜೈಲಿನಲ್ಲಿದ್ದಾಗ ಹೋಗಿ ರಕ್ಷಿತಾ ಧೈರ್ಯ ತುಂಬಿ ಬಂದಿದ್ರು. ಜೈಲಿನಿಂದ ಹೊರಬಂದ ಮೇಲೆ ರಕ್ಷಿತಾ ಸೋದರ ರಾಣಾ ಮದುವೆಗೆ ದರ್ಶನ್ ಹಾಜರಾಗಿದ್ರು.

ಇದೀಗ ರಕ್ಷಿತಾ ಸೋದರ ರಾಣಾ ಒಡೆತನದ ಪಬ್ ಉದ್ಘಾಟನೆಗೆ ಸುದೀಪ್ ಹಾಜರಾಗಿದ್ದಾರೆ. ರಕ್ಷಿತಾ ಮತ್ತು ರಾಣಾ ಸಾಹಸಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಸುದೀಪ್-ರಕ್ಷಿತಾ ಸ್ನೇಹ ಸ್ಯಾಂಡಲ್​ವುಡ್​ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಅಸಲಿಗೆ ರಕ್ಷಿತಾ ಮತ್ತು ಸುದೀಪ್ ನಡುವೆ ಮೊದಲಿಂದಲೂ ಸ್ನೇಹ ಸಲುಗೆ ಇದೆ. ರಕ್ಷಿತಾ-ಸುದೀಪ್ ಧಮ್, ಹುಬ್ಬಳ್ಳಿ ನಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟನೆ ಮಾಡಿದ್ರು. ಇನ್ನೂ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಕಿಚ್ಚ ಌಕ್ಟ್ ಮಾಡಿದ್ರು.

ಕಾಟೇರ ಬಳಿಕ ಪ್ರೇಮ್ ಮತ್ತು ದರ್ಶನ್ ನಡುವೆ ಸಂಧಾನ ಮಾಡಿಸಿದ್ದ ರಕ್ಷಿತಾ, ಇಬ್ಬರ ಕಾಂಬಿನೇಷನ್​ನಲ್ಲಿ ಒಂದು ಸಿನಿಮಾ ಮಾಡೋದಕ್ಕೂ ಮುನ್ನುಡಿ ಬರೆಸಿದ್ರು. ಆದ್ರೆ ದರ್ಶನ್ ಜೈಲು ಪಾಲಾದ ಮೇಲೆ ಆ ಪ್ರಾಜೆಕ್ಟ್ ನಿಂತುಹೋಯ್ತು. ಈಗ ನೋಡಿದ್ರೆ ರಕ್ಷಿತಾ ಌಂಡ್ ಪ್ರೇಮ್ ಕಿಚ್ಚನ ಅಡ್ಡಾದೆಡೆಗೆ ಬಂದಿದ್ದಾರೆ.

ಸುದೀಪ್ ಸ್ನೇಹ ಬೆಳೆಸಿದ ಉಮಾಪತಿ

ಹೌದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕೂಡ ಕಿಚ್ಚನ ಜೊತೆಗೆ ಸ್ನೇಹ ಬೆಳೆಸಿದ್ದಾರೆ. ಅಸಲಿಗೆ ಉಮಾಪತಿ ಮೊದಲು ಸುದೀಪ್ ಬಳಗದಲ್ಲೇ ಇದ್ದವರು. ಕಿಚ್ಚನ ಹೆಬ್ಬುಲಿ ಸಿನಿಮಾವನ್ನ ನಿರ್ಮಾಣ ಮಾಡಿದ್ದೇ ಉಮಾಪತಿ ಗೌಡ.

ಆದ್ರೆ ಹೆಬ್ಬುಲಿ ರಿಲೀಸ್ ಟೈಂನಲ್ಲೇ ಸುದೀಪ್ - ದರ್ಶನ್ ನಡುವೆ ಸಂಬಂಧ ಹಳಸಿ ಹೋಯ್ತು. ಮುಂದೆ ಕಿಚ್ವನ ಕ್ಯಾಂಪ್ ಬಿಟ್ಟ ಉಮಾಪತಿ ದರ್ಶನ್ ಜೊತೆ ರಾಬರ್ಟ್ ಸಿನಿಮಾ ಮಾಡಿದ್ರು.

ಮುಂದೆ ದರ್ಶನ್ ಜೊತೆಗೂ ಉಮಾಪತಿ ಸಂಬಂಧ ಕಿತ್ತುಹೋಗಿತ್ತು. ಇಬ್ಬರ ನಡುವೆ ವಾದ-ವಿವಾದ ಜೋರಾಗಿ ನಡೆದಿದ್ವು. ದರ್ಶನ್ ಉಮಾಪತಿಯನ್ನ ತಗಡು ಅಂತ ಕರೆದ್ರೆ, ದಾಸ ಜೈಲು ಪಾಲಾದಾಗ ಉಮಾಪತಿ, ಯಾರು ತಗಡು ನೀವೇ ಹೇಳಿ ಅಂತ ಟಾಂಗ್ ಕೊಟ್ಟಿದ್ರು.

ಈಗ ನೋಡಿದ್ರೆ ಉಮಾಪತಿ, ಸುದೀಪ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ರಕ್ಷಿತಾ ಸೋದರನ ಪಬ್​ನಲ್ಲಿ ಕಿಚ್ಚನ ಜೊತೆ ಕುಳಿತು ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ದಾಸನ ಬಳಗ , ಕಿಚ್ಚನ ಗ್ಯಾಂಗ್​ನಲ್ಲಿ ಮಿಂಚ್ತಾ ಇದೆ. ಇದೆನ್ನೆಲ್ಲಾ ನೋಡ್ತಾ ಕಾಲಾಯ ತಸ್ಮೈನಮಃ ಅಂತಿದ್ದಾರೆ ಗಾಂಧಿನಗರ ಮಂದಿ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!