ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಡಾ.ವಿಷ್ಣುವರ್ಧನ್ ನಿವಾಸ| ವಿಷ್ಣು ನಿವಾಸ ನವೀಕರಣ| 45 ವರ್ಷ ಹಳೆಯ ಮನೆಗೆ ಹೊಸ ರೂಪ|
ಬೆಂಗಳೂರು[ಡಿ.11]: ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಡಾ.ವಿಷ್ಣುವರ್ಧನ್ ನಿವಾಸ ನವೀಕರಣಗೊಳ್ಳುತ್ತಿದೆ. ಸೋಮವಾರದಿಂದಲೇ ಮನೆ ನವೀಕರಣದ ಕಾರ್ಯ ಭರದಿಂದ ಆರಂಭವಾಗಿದೆ.
ಸುಮಾರು 45 ವರ್ಷಗಳ ಇತಿಹಾಸವುಳ್ಳ ಮನೆ ಇದು. ವಿಷ್ಣುವರ್ಧನ್ ಅವರು ಬಹುಕಾಲ ವಾಸವಿದ್ದ ಮನೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹಲವು ನೆನಪುಗಳ ಆಲಯ. ವಿಷ್ಣುವರ್ಧನ್ ಅವರು ಸ್ಟಾರ್ ಆಗಿ ಪ್ರವರ್ಧಮಾನಕ್ಕೆ ಬಂದ ದಿನಗಳಲ್ಲಿ ನಿವೇಶನ ಖರೀದಿಸಿ, ಕಟ್ಟಿಸಿದ ಮನೆ. ಆ ದಿನಗಳಲ್ಲಿ ಮನೆಯ ರೂಪರೇಷೆ ಹೀಗೆ ಇರಬೇಕೆಂದು ತಾವೇ ಹೆಚ್ಚಿನ ಮುತುವರ್ಜಿ ವಹಿಸಿ ಕಟ್ಟಿಸಿದ್ದರು. ಈಗ ಅದು ನವೀಕರಣಗೊಳ್ಳುತ್ತಿದೆ. ಸದ್ಯಕ್ಕೆ ಮನೆ ಒಡೆಯುತ್ತಿದ್ದು, ಹೊಸತಾಗಿ ನಿರ್ಮಿಸಲಾಗುತ್ತಿದೆ.
undefined
ವರನಟ ಡಾ.ರಾಜ್‌ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಗಳು ನವೀಕರಣಗೊಂಡ ನಂತರ ಈಗ ದಿ.ವಿಷ್ಣುವರ್ಧನ್ ಅವರ ನಿವಾಸದ ಸರದಿ. ಈ ಮೂಲಕ ಕನ್ನಡದ ಹಿರಿಯ ನಟರ ನಿವಾಸಗಳೆಲ್ಲ ನವೀಕರಣಗೊಂಡಂತಾಗಿದೆ.
‘ಮನೆ ನಿರ್ಮಾಣವಾಗಿ ತುಂಬಾ ವರ್ಷಗಳೇ ಕಳೆದಿದ್ದರಿಂದ ಅದನ್ನು ತೆರವುಗೊಳಿಸಿ ಹೊಸ ವಿನ್ಯಾಸದೊಂದಿಗೆ ಹೊಸ ಮನೆ ನಿರ್ಮಾಣ ಮಾಡಬೇಕೆನ್ನುವುದು ಅಪ್ಪಾಜಿ (ವಿಷ್ಣುವರ್ಧನ್) ಅವರ ಆಸೆಯೂ ಆಗಿತ್ತು. ಆದರೆ ಅವರಿದ್ದ ದಿನಗಳಲ್ಲಿ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಮೇಲಾಗಿ ಆ ಮನೆ ಜತೆಗೆ ಅವರದ್ದೇ ಭಾವನಾತ್ಮಕ ಸಂಬಂಧ ಇದ್ದಿದ್ದರಿಂದ ಇರಲಿ ಬಿಡಿ, ನೋಡೋಣ ಅಂತಿದ್ದರು. ಅದರ ನವೀಕರಣಕ್ಕೆ ಈಗ ಸಮಯ ಕೂಡಿಬಂದಿದೆ. ಅವರು ಬಯಸಿದಂತೆಯೇ ಹೊಸ ವಿನ್ಯಾಸದೊಂದಿಗೆ ಮನೆಯ ನವೀಕರಣ ನಡೆಯಲಿದೆ’ ಎನ್ನುತ್ತಾರೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್‌್ಧ.