
ಅರ್ಜುನ್ ಕಪೂರ್ 'ಪಾಣಿಪತ್' ಸಿನಿಮಾಗೆ ಸಂಕಷ್ಟ ಎದುರಾಗಿದೆ. ಬಾಕ್ಸಾಫೀಸ್ ಕಲಕ್ಷನ್ ಕೂಡಾ ಹೇಳಿಕೊಳ್ಳುವ ಹಾಗಿಲ್ಲ. ಬಿಜೆಪಿ ಎಂಎಲ್‌ಎ ವಿಶ್ವೇಂದ್ರ ಸಿಂಗ್ ಈ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲ ನೀಡಿದ್ದಾರೆ.
'ಪಾಣಿಪತ್' ನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಜಾಟ್ ಸಮುದಾಯದ ಧೀರ ನಾಯಕ ಎಂದೆನಿಸಿಕೊಂಡ ಮಹಾರಾಜ ಸೂರಜ್ ಮಾಲ್‌ರನ್ನು ಈ ಸಿನಿಮಾದಲ್ಲಿ ಲಘುವಾಗಿ ಪರಿಗಣಿಸಲಾಗಿದೆ. ಇತಿಹಾಸವನ್ನು ತಿರುಚಿದ್ದು ದುರಾದೃಷ್ಟಕರ. ಹರ್ಯಾಣ, ರಾಜಸ್ತಾನ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜಾಟ್ ಸಮುದಾಯದವರು ಪ್ರತಿಭಟನೆ ನಡೆಸಲಿದ್ದೇವೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು' ಎಂದು ಹೇಳಿದ್ದಾರೆ.
ಪಾಣಿಪತ್: ಅರ್ಜುನ್ ನಲ್ಲಿ ಧಮ್ ನಹೀ ಅಂತಿದ್ದಾರೆ ನೆಟ್ಟಿಗರು
ಮಹಾರಾಜ ಸೂರಜ್‌ಮಲ್‌ರನ್ನು ನಿರ್ದೇಶಕ ಆಶುತೋಶ್ ಗೋವಾರಿಕರ್ ತಪ್ಪಾಗಿ ಬಿಂಬಿಸಿದ್ದಾರೆ. ನಿಷ್ಠಾವಂತ, ದೈವಭಕ್ತ, ಉತ್ತಮ ಪ್ರಜಾಪಾಲಕ ಮಹಾರಾಜನನ್ನು ತಪ್ಪಾಗಿ ಬಿಂಬಿಸಿರುವುದು ಖಂಡನೀಯ ಎಂದು ವಸುಂಧರಾ ರಾಜೆ ಟ್ವೀಟ್ ಮಾಡಿದ್ದಾರೆ.
'ಪಾಣಿಪತ್' ಸಿನಿಮಾದಲ್ಲಿ ಅರ್ಜುನ್ ಕಪೂರ್ ಸದಾಶಿವ್ ರಾವ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೂನ್ ಪಾರ್ವತಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಅಹ್ಮದ್ ಶಾ ಅಬ್ದಾಲಿ ಪಾತ್ರವನ್ನು ಮಾಡಿದ್ದಾರೆ. ಆಶುತೋಷ್ ನಿರ್ದೇಶನ ಮಾಡಿದ್ದಾರೆ. ಡಿಸಂಬರ್ 06 ರಂದು ಚಿತ್ರ ತೆರೆ ಕಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.