ಕೋಲ್ಕತ್ತಾದಲ್ಲಿ ರಣಬೀರ್ ಕಪೂರ್‌ ಭಾರೀ ಎಡವಟ್ಟು! ಪಬ್ಲಿಕ್‌ ಮುಂದೆ 'ರಾಮಾಯಣ'ದ ರಾಮನ ಬಾಯಿಂದ ಈ ಮಾತು!?

Published : Oct 21, 2026, 08:36 PM IST
Ranbir Kapoor

ಸಾರಾಂಶ

ಅಕ್ಟೋಬರ್ 20ರಂದು ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರತಂಡದ ಪ್ರಮುಖ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಣಬೀರ್ ಹಿಂದಿಯಲ್ಲಿ ಮಾತನಾಡುತ್ತಾ, ‘ಜೈ ಶ್ರೀರಾಮ್’ ಎಂದು ಭಾಷಣ ಆರಂಭಿಸಿದರು. ಬಳಿಕ ‘ಆ ಯಡವಟ್ಟು’ ಮಾಡಿದ್ದಾರೆ. ಏನದು ನೋಡಿ..

ಕೋಲ್ಕತ್ತಾ ದಸರಾ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಎಡವಟ್ಟು! ವೈರಲ್ ಆಯ್ತು ‘ರಾಮ’ನ ಭಾಷಣದ ವಿಡಿಯೋ

‘ರಾಮಾಯಣ’ ಸಿನಿಮಾದ ಮೂಲಕ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಇದೀಗ ತಮ್ಮ ಭಾಷಣದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರು ಹೇಳಿದ ಒಂದು ಮಾತು ಚರ್ಚೆಗೆ ಕಾರಣವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಕ್ಟೋಬರ್ 20ರಂದು ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರತಂಡದ ಪ್ರಮುಖ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಣಬೀರ್ ಹಿಂದಿಯಲ್ಲಿ ಮಾತನಾಡುತ್ತಾ, ‘ಜೈ ಶ್ರೀರಾಮ್’ ಎಂದು ಭಾಷಣ ಆರಂಭಿಸಿದರು. ಬಳಿಕ ಕೋಲ್ಕತ್ತಾದ ಪವಿತ್ರ ಭೂಮಿಯಲ್ಲಿ ದಸರಾ ಆಚರಿಸಲು ಅವಕಾಶ ಸಿಕ್ಕಿರುವುದು ಸಂತೋಷ ಮತ್ತು ಗೌರವದ ವಿಷಯ ಎಂದು ತಿಳಿಸಿ, ಅಲ್ಲಿದ್ದ ಗಣ್ಯರಿಗೆ ಧನ್ಯವಾದ ಅರ್ಪಿಸಿದರು.

ಒಂದು ಪದದಿಂದಲೇ ಶುರುವಾಯ್ತು ಚರ್ಚೆ!

ದಸರಾ ಹಬ್ಬದ ಮಹತ್ವದ ಕುರಿತು ಮಾತನಾಡಿದ ರಣಬೀರ್, ದುಷ್ಟತನ ಎಷ್ಟೇ ಬಲಿಷ್ಠವಾಗಿದ್ದರೂ ಕೊನೆಗೆ ಸದ್ಗುಣ ಮತ್ತು ಪ್ರಾಮಾಣಿಕತೆ ನಾಶವಾಗುತ್ತದೆ ಎಂಬ ಅರ್ಥ ಬರುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ. ಅವರು ಹೇಳಬೇಕಾಗಿದ್ದ ಸಂದೇಶಕ್ಕೆ ವಿರುದ್ಧವಾದ ಅರ್ಥ ವ್ಯಕ್ತವಾದ ಕಾರಣ, ಈ ಮಾತು ಗಮನ ಸೆಳೆದಿದೆ. ಸಾಮಾನ್ಯವಾಗಿ ದುಷ್ಟತನದ ಮೇಲೆ ಸದ್ಗುಣವೇ ಜಯ ಸಾಧಿಸುತ್ತದೆ ಎಂಬುದೇ ದಸರಾ ಹಬ್ಬದ ಸಂದೇಶ.

ಆ ಬಳಿಕ ಪ್ರೀತಿ ಮತ್ತು ಸಂತೋಷವನ್ನು ಹರಡಬೇಕು, ಸದಾ ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದು ಹೇಳಿ, ‘ರಾಮಾಯಣ’ ತಂಡದ ಪರವಾಗಿ ಎಲ್ಲರಿಗೂ ದಸರಾ ಶುಭಾಶಯ ಕೋರಿದರು. ಆದರೆ ಭಾಷಣದ ಆ ಒಂದು ಭಾಗದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

‘ರಾಮಾಯಣ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ!

ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಮತ್ತೊಂದು ಪ್ರಮುಖ ಬೆಳವಣಿಗೆಯೂ ನಡೆದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೆಂದು ಅಧಿಕಾರಿ, ‘ರಾಮಾಯಣ’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಿರುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಶ್ರೀಕೃಷ್ಣ, ಅರ್ಜುನ ಮತ್ತು ಮಹಾಭಾರತದಂತಹ ಪೌರಾಣಿಕ ಕಥೆಗಳನ್ನಾಧರಿಸಿದ ಸಿನಿಮಾಗಳನ್ನೂ ನೋಡಬಹುದು ಎಂದು ಅವರು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಚಿತ್ರದ ಮೊದಲ ಭಾಗ ನವೆಂಬರ್ 5ರಂದು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027ರಲ್ಲಿ ತೆರೆಗೆ ಬರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲರೂ ಬಾಯಿಗೆ ಬಂದಷ್ಟು ಹೇಳ್ತಿದ್ದಾರೆ: ರಜನಿಕಾಂತ್ 'ಜೈಲರ್ 2' ಅಸಲಿ ಕಲೆಕ್ಷನ್ ಇಷ್ಟೇ ನೋಡಿ!
ಶಿರಸಿಯಲ್ಲಿ 'ಗುಡ್ಡದ ಭೂತ'.. ಬೆಂಗಳೂರಿಂದ ಹೋದ ಹೀರೋ ಮೈಮೇಲೆ ದೆವ್ವದ ಆಟ, ಪಾಠ, ಕಾಟವೇ? ಏನಿದು ಶಾಕಿಂಗ್ ನ್ಯೂಸ್?