ಅಲ್ಲು ಕುಟುಂಬದಿಂದ ಪುಷ್ಪ 2 ಸಂತ್ರಸ್ತನ ಭೇಟಿ, ಕಾಲ್ತುಳಿತದಲ್ಲಿ ಗಾಯಗೊಂಡ ಶ್ರೀತೇಜ್​​ ಹೆಸರಲ್ಲಿ 2 ಕೋಟಿ ಠೇವಣಿ!

Published : May 09, 2026, 06:41 PM IST
Allu Arjun

ಸಾರಾಂಶ

'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ, ಅಲ್ಲು ಅರ್ಜುನ್ ಮತ್ತು ಅವರ ಕುಟುಂಬವು ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಿ, ಗಾಯಗೊಂಡ ಬಾಲಕನ ಹೆಸರಲ್ಲಿ 2 ಕೋಟಿ ಠೇವಣಿ ಇಟ್ಟಿದೆ.

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೈಲು ಸೇರಿದ್ದು ಗೊತ್ತೇ ಇದೆ. ಪುಷ್ಪ-2 ಬಿಡುಗಡೆ ಆದಾ ಸಡಗರಲ್ಲಿದ್ದ ಅಲ್ಲು ಅರ್ಜುನ್​ಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಯಾಕಂದ್ರೆ ಪುಷ್ಪರಾಜ್​ನ ನೋಡಲು ಬಂದಿದ್ದ ಮಹಿಳೆ ಒಬ್ರು ಕಾಲ್ತುಳಿತದಿಂದ ಚಿತ್ರಮಂದಿರದಲ್ಲೇ ಸಾವನ್ನಪ್ಪಿದ್ರು. ಈಗ ಆ ಮಹಿಳೆ ಕುಟುಂಬಕ್ಕೆ ನೆರವಿಗೆ ಬಂದಿದೆ ಅಲ್ಲು ಇಡೀ ಕುಟುಂಬ.

ಪುಷ್ಪ2 ಸಕ್ಸಸ್ ಸಂಭ್ರಮದಲ್ಲಿದ್ದ ಅಲ್ಲುಗೆ ಶಾಕ್ ಕೊಟ್ಟಿತ್ತು ಖಾಕಿ ಪಡೆ!

ಬಾಕ್ಸಾಫೀಸ್​​​​ನಲ್ಲಿ ಆಲ್ ಟೈಂ ರೆಕಾರ್ಡ್ ಕ್ರಿಯೇಟ್ ಮಾಡಿ 1642 ಕೋಟಿಗೂ ಅಧಿಕ ಕಲಕ್ಷನ್ ಮಾಡಿದ ಸಿನಿಮಾ ಪುಷ್ಪ-2. ಇಡೀ ಭಾರತೀಯ ಸಿನಿರಂಗದಲ್ಲಿ ಯಾವ ತಾರೆಯೂ ಮಾಡದ ದಾಖಲೆ ಮಾಡಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಆಗಸದಲ್ಲಿ ತೇಲ್ತಾ ಇದ್ರು. ಆದ್ರೆ ಅಂದು ಆಗಸದಲ್ಲಿದ್ದ ಅಲ್ಲು ಅರ್ಜುನ್​ ನ ಧುತ್ ಅಂತ ಧರೆಗಿಳಿಸಿ ಜೈಲಿಗಟ್ಟಿತ್ತು ತೆಲಂಗಾಣ ಖಾಕಿ ಪಡೆ.

ಪುಷ್ಪ-2 ಸಿನಿಮಾ ಡಿಸೆಂಬರ್ 5 ಕ್ಕೆ ವರ್ಲ್ಡ್ ವೈಡ್ ತೆರೆಗೆ ಬಂದಿತ್ತು. ಅದರ ಮುನ್ನಾದಿನವೇ ಅನೇಕ ಕಡೆಗೆ ಪ್ರೀಮೀಯರ್ ಶೋಗಳು ಅರೇಂಜ್ ಆಗಿದ್ವು. ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕೂಡ ಶೋ ಅರೇಂಜ್ ಆಗಿತ್ತು. ಈ ಶೋಗೆ ಅಚಾನಕ್ ಅಗಿ ಎಂಟ್ರಿ ಕೊಟ್ಟು ಫ್ಯಾನ್ಸ್​​ ಮಧ್ಯೆ ಸಿನಿಮಾ ನೋಡಿದ್ರು ಅಲ್ಲು ಅರ್ಜುನ್.

ಮೊದಲೇ ಪುಷ್ಪ-2 ಸಿನಿಮಾ ಬಗ್ಗೆ ಇದ್ದ ಕ್ರೇಜ್ ಗೆ ಥಿಯೇಟರ್ ನಲ್ಲಿ ಸೀಟ್ ಗಿಂತ ನಾಲ್ಕು ಪಟ್ಟು ಹೆಚ್ಚು ಜನ ಸೇರಿದ್ರು. ಅಲ್ಲು ಅರ್ಜುನ್ ಬೇರೆ ಬಂದಿದ್ದನ್ನ ನೋಡಿ ಅಭಿಮಾನಿಗಳು ಮುಗಿಬಿದ್ರು. ಈ ತಳ್ಳಾಟದಲ್ಲಿ ಕಾಲ್ತುಳಿತ ಸಂಭವಿಸಿ 35 ವರ್ಷದ ರೇವತಿ ಅನ್ನೋ ಮಹಿಳೆಯ ಪ್ರಾಣವೇ ಹೊರಟು ಹೋಗಿತ್ತು. ಆಕೆಯ ಮಗ ತೇಜಸ್​​​​​ ಸಾವು ಬದುಕಿನ ಮಧ್ಯೆ ಹೋರಾಡಿ ಆಸ್ಪತ್ರೆ ಸೇರಿದ್ದ. ಈ ವಿಚಾರದಲ್ಲಿ ಕೇಸ್ ದಾಖಲಿಸಿಕೊಂಡ ಚಿಕ್ಕಡಪಲ್ಲಿ ಪೊಲೀಸರು ಥಿಯೇಟರ್ ಮಾಲಿಕರು, ಮ್ಯಾನೇಜರ್, ಅಲ್ಲು ಅರ್ಜುನ್ ಮೇಲೆ ಎಫ್. ಐ ಆರ್ ಹಾಕಿದ್ರು. ಕೊನೆಗೆ ಅಲ್ಲು ಮನೆಗೆ ನುಗ್ಗಿದ್ದ ಪೊಲೀಸರು ಸ್ಟೈಲೀಶ್​ ಸ್ಟಾರ್​​ನ ಸ್ಟೈಲ್​ ಆಗಿ ಅರೆಸ್ಟ್ ಮಾಡಿದ್ರು.

ಕಾಲ್ತುಳಿತ ಸಂತ್ರಸ್ತ ಕುಟುಂಬಕ್ಕೆ ಅಲ್ಲು ಫ್ಯಾಮಿಲಿ ಅಭಯ!

ಬೇಲ್ ಪಡೆದು ಹೊರ ಬಂದಿದ್ದ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ 25 ಲಕ್ಷ ಪರಿಹಾರ ಕೂಡೋದಾಗಿ ಹೇಳಿದ್ರು. ಇದೀಗ ಕಾಲ್ತುಳಿತದಿಂದ ಗಾಯಗೊಂಡ ಶ್ರೀತೇಜ್‌ನ ಮನೆಗೆ ಅಲ್ಲು ಅರ್ಜುನ್ ಕುಟುಂಬ ಭೇಟಿ ನೀಡಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ತಂದೆ ಅಲ್ಲು ಅರವಿಂದ್ ಬಾಲಕನ ಆರೋಗ್ಯ ವಿಚಾರಿಸಿ, ಚಿಕಿತ್ಸೆ, ಶಿಕ್ಷಣಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ.

ಕಾಲ್ತುಳಿತದಲ್ಲಿ ಗಾಯಗೊಂಡ ಶ್ರೀತೇಜ್​​ ಹೆಸರಲ್ಲಿ 2 ಕೋಟಿ ಠೇವಣಿ!

ಈ ಕಾಲ್ತುಳಿತದಲ್ಲಿ ಶ್ರೀತೇಜ್​​​​​​ ಗಂಭೀರ ಗಾಯ ಆಗಿತ್ತು, ಮೆದುಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಇದರಿಂದ ಕೋಮಾಕ್ಕೆ ಹೋಗಿದ್ದ ಶ್ರೀತೇಜ್​​​​​​​​ ಇನ್ನೂ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಈಗ ಶ್ರೀತೇಜ್‌ಗೆ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದ್ದು, ತಿಂಗಳಿಗೆ ₹1.5 ಲಕ್ಷ ಬಡ್ಡಿ ಸಿಗಲಿದೆ. ಅಲ್ಲು ತಂದೆ ಅಲ್ಲು ಅರವಿಂದ್ ಶ್ರೀತೇಜ್‌ನ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿಯ್ನನೂ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲು ಅರ್ಜುನ್ ಮೇಲಿನ ಅತಿರೇಕದ ಅಭಿಮಾನಕ್ಕೆ ಪರಿಹಾರ ಹುಡುಕೋ ಕೆಲಸ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Love BreakUp: ಜಗತ್ತನ್ನೇ ಶೇಕ್ ಮಾಡಿದ ಈ ಜೋಡಿ ಲವ್-ಬ್ರೇಕ್‌ಅಪ್‌ ಸುದ್ದಿ.. 85 ವರ್ಷದ ತಾತನ ಅನುಮಾನ ಏನು?
OMG: ಒಂದೇ ಒಂದು ಫೋಟೋ ಹಣೆಬರಹ ಬದಲಿಸಿತು.. ಇಂದು 100 ಕೋಟಿ ಬಂಗ್ಲೆ, ಪ್ರೈವೇಟ್‌ ಜೆಟ್‌, 3000 ಕೋಟಿ ಆಸ್ತಿಗೆ ಒಡತಿ!