ಲೋಕಲ್‌ ವೈನ್‌ ಶಾಪ್‌ನಲ್ಲಿ ಎಣ್ಣೆ ಖರೀದಿಸಿದ ಅಲ್ಲು ಅರ್ಜುನ್‌, 'ವೈರಲ್‌' ವಿಡಿಯೋ ಬಗ್ಗೆ ಏನಂದ್ರು ಸ್ಟೈಲಿಶ್‌ ಸ್ಟಾರ್‌?

By Santosh Naik  |  First Published Nov 14, 2024, 7:13 PM IST

ಪುಷ್ಪ 2 ಸಿನಿಮಾದ ಪ್ರಚಾರ ಆರಂಭಿಸಲು ಸಿದ್ದವಾಗಿರುವ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌, ಅನ್‌ಸ್ಟ್ರಾಪೆಬಲ್‌ ವಿತ್‌ ಎನ್‌ಬಿಕೆ ಎಪಿಸೋಡ್‌ನಲ್ಲಿ 7  ವರ್ಷದ ಹಿಂದಿನ ವೈರಲ್‌ ವಿಡಿಯೋ ಬಗ್ಗೆ ಮಾತನಾಡಿದ್ದಾರೆ.


2017ರಲ್ಲಿ ಪುಷ್ಪ-2 ನಟ, ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌, ಗೋವಾದ ಲೋಕಲ್‌ ಶಾಪ್‌ನಲ್ಲಿ ಲಿಕ್ಕರ್‌ ಖರೀದಿ ಮಾಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋ ಬಗ್ಗೆ ಭಿನ್ನ ಅಭಿಪ್ರಾಯಗಳು ಬಂದಿದ್ದವು. ಅಲ್ಲು ಅರ್ಜುನ್‌ ಅಭಿಮಾನಿಗಳು ನಟನ ಸರಳತೆಯನ್ನು ಶ್ಲಾಘನೆ ಮಾಡಿದ್ದರೆ, ಇನ್ನೂ ಕೆಲವರು ರೋಲ್‌ ಮಾಡೆಲ್‌ ಆಗಿರುವ ವ್ಯಕ್ತಿ ಈ ರೀತಿಯಾಗಿ ಸಾರ್ವಜನಿಕವಾಗಿ ಲಿಕ್ಕರ್‌ ಖರೀದಿ ಮಾಡಿದ್ದು ತಪ್ಪು ಎಂದು ದೂಷಣೆ ಮಾಡಿದ್ದರು. ಇದರ ನಡುವೆ ಇನ್ನೂ ಹಲವರು ಈ ವಿಡಿಯೋದಲ್ಲಿರುವ ಅಲ್ಲು ಅರ್ಜುನ್‌ ಅಲ್ಲವೇ ಅಲ್ಲ, ಅವರ ರೀತಿಯಲ್ಲಿಯೇ ಇರುವ ಬೇರೊಬ್ಬ ವ್ಯಕ್ತಿ ಎಂದೂ ಮಾತನಾಡಿದ್ದರು. ಏಳು ವರ್ಷಗಳ ಬಳಿಕ ಅಲ್ಲು ಅರ್ಜುನ್‌ ಈ ವಿಡಿಯೋ ಬಗ್ಗೆ  ಅನ್‌ಸ್ಟ್ರಾಪೆಬಲ್‌ ವಿತ್‌ ಎನ್‌ಬಿಕೆ ಎಪಿಸೋಡ್‌ನಲ್ಲಿ ಮೌನ ಮುರಿದಿದ್ದಾರೆ. ಮುಂದಿನ ಪುಷ್ಪ-2 ಸಿನಿಮಾದ ಪ್ರಚಾರಕ್ಕಾಗಿ ಅನ್‌ಸ್ಟ್ರಾಪೆಬಲ್‌ ವಿತ್‌ ಎನ್‌ಬಿಕೆ ವೇದಿಕೆಗೆ ಹೋಗಿದ್ದ ಅಲ್ಲು ಅರ್ಜುನ್‌ ಈ ವಿಡಿಯೋ ಬಗ್ಗೆ ಮಾತನಾಡಿದ್ದು ಅದು ವೈರಲ್‌ ಆಗಿದೆ.

ಇಂದು ಎಪಿಸೋಡ್‌ ಪ್ರಸಾರವಾಗಲಿದೆ. ಈ ವೇಳೆ ಈ ವಿಡಿಯೋದಲ್ಲಿರೋದು ನಾನೇ ಎಂದು ಸ್ವತಃ ಅಲ್ಲ ಅರ್ಜುನ್‌ ಹೇಳುವ ಮೂಲಕ ವೈರಲ್‌ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೆ, ಲಿಕ್ಕರ್‌ ನನಗಾಗಿ ಖರೀದಿ ಮಾಡಿರಲಿಲ್ಲ. ನನ್ನ ಸ್ನೇಹಿತನಿಗಾಗಿ ಖರೀದಿ ಮಾಡಿದ್ದೆ. ಅಲ್ಲದೆ ಇದೇ ಚಾಟ್‌ ಶೋನಲ್ಲಿ ಆ ಸ್ನೇಹಿತ ಹಾಗೂ ನಟ ಕೂಡ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

Tap to resize

Latest Videos

undefined

ನ.14ರಂದು ಸಂಜೆ 7ಕ್ಕೆ ಈ ಎಪಿಸೋಡ್‌ ಒಟಿಟಿ ವೇದಿಕೆ ಆಹಾದಲ್ಲಿ ಪ್ರಸಾರವಾಗಲಿದೆ. ವಿಶೇಷ ಎಪಿಸೋಡ್‌ ಎರಡು ಭಾಗವಾಗಿ ರಿಲೀಸ್‌ ಆಗಲಿದೆ. ಎಪಿಸೋಡ್‌ನ ತುಣುಕುಗಳನ್ನು ಒಳಗೊಂಡ ಐದು ನಿಮಿಷಗಳ ಅವಧಿಯ ಟೀಸರ್‌ಅನ್ನು ತಯಾರಕು ಬಿಡುಗಡೆ ಮಾಡಿದ್ದಲ್ಲದೆ, ಬಹಳಷ್ಟು ಮನರಂಜನೆಯ ಭರವಸೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಅವರ ತಾಯಿ ನಿರ್ಮಲಾ ಅಲ್ಲು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಏಪ್ರಿಲ್‌-ಅಕ್ಟೋಬರ್‌ ಬಂಪರ್‌!

ಈ ಕಾರ್ಯಕ್ರಮದೊಂದಿಗೆ ಭಾರತದಾದ್ಯಂತ ಪುಷ್ಪ2 ಸಿನಿಮಾದ ಪ್ರಚಾರಗಳು ಆರಂಭವಾಗಿದೆ. ಪುಷ್ಪ2 ಸಿನಿಮಾದ ಟ್ರೇಲರ್‌ ನವೆಂಬರ್‌ 17 ರಂದು ಪಾಟ್ನಾದಲ್ಲಿ ರಿಲೀಸ್‌ ಮಾಡಲಾಗುತ್ತದೆ. ಸುಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಫಹಾಸ್‌ ಫಾಸಿಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021ರಲ್ಲಿ ರಿಲೀಸ್‌ ಆಗಿದ್ದ ಪುಷ್ಪ: ದ ರೈಸ್‌ ಸಿನಿಮಾದ ಮುಂದುವರಿದ ಭಾಗ ಇದಾಗಿದೆ. ಇದು ಅಲ್ಲು ಅರ್ಜುನ್‌ ಹಾಗೂ ಫಹಾಸ್‌ ಫಾಸಿಲ್‌ ನಡುವಿನ ವೈರತ್ವದ ಕಥೆಯನ್ನು ಹೊಂದಿದೆ.

 ₹67,538 ಕೋಟಿ ಮೌಲ್ಯದ ಅಮೆಜಾನ್‌ ಷೇರು ಮಾರಾಟ ಮಾಡಿದ ಜೆಫ್‌ ಬೆಜೋಸ್‌ ಮಾಜಿ ಪತ್ನಿ!

 

click me!