ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆ ತಯಾರಿ ನಡೆಯುತ್ತಿದ್ದರೂ, ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಮದುವೆಯ ನಂತರ ನಾಗಚೈತನ್ಯ ಅವರ ಫ್ಲ್ಯಾಟ್‌ನಲ್ಲಿ ವಾಸಿಸಲು ಶೋಭಿತಾ ನಿರಾಕರಿಸಿದ್ದಾರೆ, ಏಕೆಂದರೆ ಅದು ಸಮಂತಾ ಅವರ ನೆನಪುಗಳಿಂದ ತುಂಬಿದೆ ಎಂದು ಅವರು ಭಾವಿಸುತ್ತಾರೆ.
ನಟಿ ಸಮಂತಾ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಅವರ ಬದುಕಿನಲ್ಲಿ ಹೊಸ ಭರವಸೆಗಳು ಬರಲು ಆರಂಭಿಸಿದೆ. ಸಮಂತಾ ಬಿಟ್ಟುಹೋದ ಬಳಿಕ ಖಿನ್ನರಾಗಿದ್ದ ನಾಗಚೈತನ್ಯ ಬಾಳಿನಲ್ಲಿ ಬಂದಿದ್ದು, ಶೋಭಿತಾ ಧೂಳಿಪಾಲ. ಶೋಭಿತಾ ಜೊತೆ ಬಹಳ ಕಾಲ ರಿಲೇಷನ್‌ಷಿಪ್‌ನಲ್ಲಿದ್ದ ಈ ನೋಡಿ ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಅವರ ಮದುವೆ ತಯಾರಿಗಳು ಜೋರಾಗಿ ನಡೆಯುತ್ತಿದೆ. ಈ ಎಲ್ಲದರ ನಡುವೆ ಇವರಿಬ್ಬರ ನಡುವೆ ಸಂಬಂಧ ಹಳಸಿದೆ ಎನ್ನುವ ಸುದ್ದಿ ಅಕ್ಕಿನೇನಿ ಕುಟುಂಬಕ್ಕೆ ಬಿಗ್ ಶಾಕ್ ನೀಡಿದೆ. ಅಷ್ಟಕ್ಕೂ ಹೊಸ ಜೋಡಿಯ ಮನಸ್ಸಿನಲ್ಲಿ ಆಗಿದ್ದು ಏನು ಅನ್ನೋದರ ಬಗ್ಗೆ ಚರ್ಚೆ ಆರಂಭವಾಗಿದೆ. ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ನಾಗಚೈತನ್ಯ ಅವರ ಸಿನಿಮಾ ಕೆರಿಯರ್ ಕೂಡ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ. ಈ ನಡುವೆ ಶೋಭಿತಾ ಜೊತೆಗಿನ ಖಾಸಗಿ ಪಾರ್ಟಿಗಳ ಫೋಟೋಗಳುಸ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಕಳೆದ ಆಗಸ್ಟ್ 9 ರಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಇತ್ತೀಚೆಗೆ ಶೋಭಿತಾ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಅರಿಶಿನ ಶಾಸ್ತ್ರವನ್ನೂ ಮಾಡಿದ್ದಾರೆ. ಆ ಬಳಿಕ ಇವರಿಬ್ಬರ ಮದುವೆ ಅತಿ ಶೀಘ್ರದಲ್ಲಿಯೇ ಇದೆ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೂ ಮುನ್ನ 2025ರಲ್ಲಿ ರಾಜಸ್ಥಾನದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂದು ವರದಿಯಾಗಿದ್ದವು. ಆದರೆ, ಎರಡೂ ಕುಟುಂಬಗಳು ಆದಷ್ಟು ಶೀಘ್ರವಾಗಿ ಮದುವೆ ಕಾರ್ಯ ಮುಗಿಸುವ ಪ್ಲ್ಯಾನ್ ಮಾಡಿದೆ. ಅದಕ್ಕೆ ಕಾರಣ, ಇವರಿಬ್ಬರ ನಡುವೆ ನಡೆದಿದ್ದ ಒಂದು ವಿಚಾರದ ಜಗಳ.
ಹೌದು.. ಮದುವೆಯ ಬಳಿಕ ನಾಗಚೈತನ್ಯ ತನ್ನ ಫ್ಲ್ಯಾಟ್‌ನಲ್ಲಿ ಒಟ್ಟಿಗೆ ಬಾಳೋಣ ಎಂದು ಶೋಭಿತಾಗೆ ತಿಳಿಸಿದ್ದರಂತೆ. ಆದರೆ, ಶೋಭಿತಾಗೆ ಇದು ಮಾತ್ರ ಸುತಾರಾಂ ಇಷ್ಟವಾಗಿರಲಿಲ್ಲ. ಇದೇ ವಿಚಾರದಲ್ಲಿ ಅವರಿಬ್ಬರ ನಡುವೆ ಮನಸ್ತಾಪ ನಡೆದಿದೆ ಎನ್ನುವ ವರದಿಗಳಿವೆ. ಸಮಂತಾ ಜೊತೆ ಮದುವೆಯಾದ ಬಳಿಕ ನಾಗಚೈತನ್ಯ ಬಹಳ ಇಷ್ಟಪಟ್ಟು ಈ ಫ್ಲ್ಯಾಟ್‌ಅನ್ನು ಖರೀದಿ ಮಾಡಿದ್ದರು. ಗಂಡ-ಹೆಂಡತಿ ಸೇರಿ ಮನೆಯ ಇಂಚಿಂಚನ್ನೂ ವಿನ್ಯಾಸ ಮಾಡಿದ್ದರು. ಎಲ್ಲಿಯವರೆಗೂ ಸಮಂತಾ ಹಾಗೂ ನಾಗಚೈತನ್ಯ ಬೇರೆ ಬೇರೆಯಾದರೂ, ಅಲ್ಲಿಯವರೆಗೂ ಇಬ್ಬರೂ ಮನೆಯಲ್ಲಿ ವಾಸವಿದ್ದರು.
ಇನ್ನು ಶೋಭಿತಾ ವಾದ ಏನೆಂದರೆ, ಇಡೀ ಮನೆಯ ಸಮಂತಾ ಹಾಗೂ ನಾಗಚೈತನ್ಯ ಅವರು ಅಭಿರುಚಿಗೆ ತಕ್ಕಂತೆ ಇದೆ. ಈಗ ಆಕೆ ಅಲ್ಲಿ ಇಲ್ಲದೇ ಇರಬಹುದು. ಆದರೆ, ಮನೆಯೆ ಪ್ರತಿ ಹೆಜ್ಜೆಯಲ್ಲೂ ಆಕೆಯ ನೆನಪುಗಳು ಇರುತ್ತದೆ. ನನ್ನ ಮದುವೆಯಾದ ಬಳಿಕ ನಾಗಚೈತನ್ಯಗೆ ಮತ್ತೆ ಸಮಂತಾ ನೆನಪು ಮರುಕಳಿಸಬಹುದು. ಇದು ನನ್ನ ಸಾಂಸಾರಿಕ ಜೀವನಕ್ಕೆ ಅಡ್ಡಿಯಾಗಬಹುದು. ಇದೇ ಮುನ್ನೆಚ್ಚರಿಕೆಯಿಂದ ಫ್ಲ್ಯಾಟ್‌ನಲ್ಲಿ ಒಟ್ಟಿಗೆ ಬದುಕಲು ನಿರಾಕರಿಸಿದ್ದಾರೆ.
ದುಬಾರಿ ಪೊರ್ಶೆ 911 GT3 ಕಾರು ಖರೀಸಿದ ನಟ ನಾಗಚೈತನ್ಯ, ಇದರ ಬೆಲೆ ಎಷ್ಟು?
ಇದೆ ವಿಚಾರವಾಗಿ ಇವರಿಬ್ಬರ ನಡುವೆ ಸಂಬಂಧ ಹಳಸಿತ್ತು. ಕೊನೆಗೆ ನಾಗಚೈತನ್ಯ ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಇಬ್ಬರನ್ನೂ ಸಮಾಧಾನ ಮಾಡಿದ್ದು ಮಾತ್ರವಲ್ಲದೆ, ಶೀಘ್ರದಲ್ಲಿಯೇ ಮದುವೆ ಕಾರ್ಯ ಮುಗಿಸಿಬಿಡೋಣ ಅನ್ನೋ ತಯಾರಿಯಲ್ಲಿದ್ದಾರಂತೆ. ಹಾಗಂತ ಅಕ್ಕಿನೇನಿ ಕುಟುಂಬದ ಆಪ್ತರಾಗಲಿ, ಶೋಭಿತಾ ಕುಟುಂಬದ ಆಪ್ತರಾಗಲಿ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಭರ್ಜರಿಯಾಗಿ ಈ ಸುದ್ದಿಗಳು ವೈರಲ್ ಆಗುತ್ತಿದೆ.
ಶೋಭಿತಾಗೂ ಕೈಕೊಟ್ರಾ ನಾಗಚೈತನ್ಯ? ಹೊಸಬಳ ಜೊತೆ ನಟನ ಮದ್ವೆ! ಯಾರೀ ಚೆಲುವೆ?