ಮನೆಯಲ್ಲೇ ಕುಸಿದುಬಿದ್ದ ಬಾಲಿವುಡ್‌ನಲ್ಲಿ ಹವಾ ಎಬ್ಬಿಸಿದ್ದ ಕನ್ನಡದ ನಿರ್ದೇಶಕ

Published : Jan 27, 2020, 08:17 PM ISTUpdated : Jan 27, 2020, 08:38 PM IST
ಮನೆಯಲ್ಲೇ ಕುಸಿದುಬಿದ್ದ ಬಾಲಿವುಡ್‌ನಲ್ಲಿ ಹವಾ ಎಬ್ಬಿಸಿದ್ದ ಕನ್ನಡದ ನಿರ್ದೇಶಕ

ಸಾರಾಂಶ

ಆಸ್ಪತ್ರೆಗೆ ದಾಖಲಾದ ಮಿಷನ್ ಮಂಗಲ್ ನಿರ್ದೇಶಕ/ ಸ್ನೇಹಿತರೊಂದಿಗೆ ಮಾತನಾಡುತ್ತಲೇ ಕುಸಿದು ಬಿದ್ದ/ ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತ

ಮುಂಬೈ[ಜ. 27]  ಜಗತ್ತೇ ಮೆಚ್ಚಿಕೊಂಡ ಸಿನಿಮಾ 'ಮಿಷನ್ ಮಂಗಲ್'. ಈ ಚಿತ್ರದ ನಿರ್ದೆಶಕ ಜಗನ್ ಶಕ್ತಿ ನಮ್ಮ ಕನ್ನಡದವರು. ಆದರೆ ಅದೇ ನಿರ್ದೇಶಕ ಇಂದು ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಸೀರಿಯಸ್ ಕಂಡಿಶನ್ ನಲ್ಲಿದ್ದ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇನ್ನೊಂದು ಮೂಲದ ಪ್ರಕಾರ ಸ್ನೇಹಿರೊಂದಿಗೆ ಮಾತನಾಡುತ್ತ ಇದ್ದಾಗಲೇ ನಿರ್ದೇಶಕ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕುಟುಂಬದವರ ನೆರವಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಮಗು ಬೇಕೆಂದಾಗ ಮದುವೆ ಆಗ್ತೇನೆ ಎಂದ ಬಾಲಿವುಡ್ ಬ್ಯೂಟಿ

ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಮಂಗಳಯಾನ ಕುರಿತು 'ಮಿಷನ್ ಮಂಗಲ್' ವಿವರಿಸುವ ಕತೆ ಹೊಂದಿತ್ತು. ಭಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಚಿತ್ರ ಕೆಲವೇ ದಿನದಲ್ಲಿ 200 ಲೋಟೊ ಗಳಿಸಿತ್ತು.

ಕನ್ನಡದ ಹಿರಿಯ ನಟ ದತ್ತಣ್ಣ, ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.  
ಮಿಶನ್ ಮಂಗಲ್ ಚಿತ್ರ ನಿರ್ದೇಶಕ ಹಿಂದೊಮ್ಮೆ ನಮ್ಮ ಕನ್ನಡದ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದರು. ಚಿತ್ರವನ್ನು ಹಾಡಿ ಹೊಗಳಿದ್ದ ನಿರ್ದೇಶಕ ಯಶ್ ಗೆ ಮೆಚ್ಚುಗೆ ಸೂಚಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?