
ಮುಂಬೈ (ಜ. 27): ತಮ್ಮ ಮನೆಯಲ್ಲಿ ಧರ್ಮದ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ತಮ್ಮ ಮಕ್ಕಳು ಧರ್ಮ ಎಂಬ ಕಾಲಂನಲ್ಲಿ ಇಂಡಿಯನ್ ಎಂದು ಬರೆಯುತ್ತಾರೆ ಎಂದು ನಟ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.
ವೇದಿಕೆ ಮೇಲೆ ಪತ್ನಿಯ ಸೆರಗು ಹಿಡಿದ ಬಾಲಿವುಡ್ 'ಜೆಂಟಲ್‌ಮ್ಯಾನ್'!
ಗಣರಾಜ್ಯೋತ್ಸವದ ಮುನ್ನಾ ದಿನ ಪ್ರಸಾರವಾದ ಡ್ಯಾನ್ಸ್ ಶೋವೊಂದರಲ್ಲಿ ಮಾತನಾಡಿದ ಶಾರುಖ್, ಯಾರು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತಲೂ ನಮ್ಮ ಮನೆಯಲ್ಲಿ ‘ಭಾರತೀಯ’ ಎನ್ನುವುದಕ್ಕೇ ಹೆಚ್ಚು ಮಹತ್ವವಿದೆ.
‘ನಾವು ಹಿಂದು- ಮುಸ್ಲಿಂ ಎನ್ನುವ ಬಗ್ಗೆ ಮಾತನಾಡುವುದಿಲ್ಲ. ನನ್ನ ಪತ್ನಿ ಹಿಂದು, ನಾನು ಮುಸ್ಲಿಂ, ನನ್ನ ಮಕ್ಕಳು ಹಿಂದುಸ್ತಾನದವರು. ಅವರು ಶಾಲೆಗೆ ಹೋಗುವಾಗ ತಮ್ಮ ಧರ್ಮದ ಹೆಸರನ್ನು ಬರೆಯಬೇಕಾಗುತ್ತದೆ. ಒಮ್ಮೆ ನನ್ನ ಮಗಳು ಸುಹಾನಾ ಶಾಲೆಯಲ್ಲಿ ಅರ್ಜಿಯೊಂದರಲ್ಲಿ ಧರ್ಮವನ್ನು ನಮೂದಿಸಬೇಕಾಗಿ ಬಂದಾಗ ನನ್ನಲ್ಲಿ ಬಂದು ನಮ್ಮ ಧರ್ಮ ಯಾವುದು ಎಂದು ಕೇಳಿದಳು. ಆಗ ನಾನು ಅವಳ ಅರ್ಜಿಯಲ್ಲಿ ನಾವು ಭಾರತೀಯರು ನಮಗೆ ಒಂದು ಧರ್ಮ ಇಲ್ಲ ಎಂದು ಬರೆದಿದ್ದೆ’ ಎಂದು ಹೇಳಿದ್ದಾರೆ. ಶಾರುಖ್ ಅವರ ಈ ಹೇಳಿಕೆ ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.