ಮೂತ್ರಪಿಂಡ ವೈಫಲ್ಯ: ಮಹಾಭಾರತ ಖ್ಯಾತಿಯ ನಟ ರಸಿಕ್ ದೇವ್ ನಿಧನ

Published : Jul 30, 2022, 11:42 AM ISTUpdated : Jul 30, 2022, 11:44 AM IST
ಮೂತ್ರಪಿಂಡ ವೈಫಲ್ಯ: ಮಹಾಭಾರತ ಖ್ಯಾತಿಯ ನಟ ರಸಿಕ್ ದೇವ್ ನಿಧನ

ಸಾರಾಂಶ

ಹಿರಿಯ ನಟ ರಸಿಕ್ ಡೇವ್ ಮೂತ್ರಪಿಂಡ ವೈಫಲ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ ಕೇತ್ಕಿ ಡೇವ್ ಹಾಗೂ ಮಗಳು ರಿದ್ಧಿ ಡೇವ್ ಅವರನ್ನು ಅಗಲಿದ್ದಾರೆ.

ಮುಂಬೈ: ಹಿರಿಯ ನಟ ರಸಿಕ್ ಡೇವ್ ಮೂತ್ರಪಿಂಡ ವೈಫಲ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ ಕೇತ್ಕಿ ಡೇವ್ ಹಾಗೂ ಮಗಳು ರಿದ್ಧಿ ಡೇವ್ ಅವರನ್ನು ಅಗಲಿದ್ದಾರೆ. ನಟ ಹಾಗೂ ನಿರ್ಮಾಪಕ ಜೆಡಿ ಮಜೇಥಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಸಿಕ್ ಡೇವ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಸಿಕ್ ಡೇವ್ ಅವರ ಅಕಾಲಿಕ ಮರಣದ ಬಗ್ಗೆ ಕೇಳಿ ತೀವ್ರ ದುಃಖವಾಗಿದೆ. ಬೇಗ ಹೋದೆ ಅಣ್ಣ. ದೇವರು ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ಕಷ್ಟವನ್ನು ಭರಿಸುವ ಶಕ್ತಿ ನೀಡಲಿ ಓಂ ಶಾಂತಿ ಎಂದು ಜೆಡಿ ಮಜೇಥಿಯಾ ಬರೆದುಕೊಂಡಿದ್ದಾರೆ. 

ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಕೂ ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಟಿವಿ ಮತ್ತು ಚಲನಚಿತ್ರಗಳಲ್ಲಿ ಬಹುಮುಖ ನಟರಾಗಿದ್ದ ಆತ್ಮೀಯ ಸ್ನೇಹಿತ ರಸಿಕ್ ಡೇವ್‌ ಅವರ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಅವರ ಪತ್ನಿ ಕೇತಕಿ ಡೇವ್ ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪಗಳು.ರಸಿಕ್ ಡೇವ್‌ ಸದಾ ನೆನಪಿನಲ್ಲಿ ಉಳಿಯುತ್ತಾರೆ ಓಂ ಶಾಂತಿ ಎಂದು ಅಶೋಕ್ ಪಂಡಿತ್ ಬರೆದುಕೊಂಡಿದ್ದಾರೆ.

ದುಲ್ಖರ್ ಸಲ್ಮಾನ್ ಜೊತೆ ನಟಿಸ್ತಾರಾ ಗಟ್ಟಿಮೇಳದ ನಟಿ ನಿಶಾ ಮಿಲನ?

ETimes ವರದಿಯ ಪ್ರಕಾರ, ಕಿಡ್ನಿ ವೈಫಲ್ಯವಾದ ಹಿನ್ನೆಲೆ ಡೇವ್ ಕಳೆದ ಎರಡು ವರ್ಷಗಳಿಂದ ಡಯಾಲಿಸಿಸ್‌ಗೆ ಒಳಗಾಗಿದ್ದರು ಮತ್ತು ಕಳೆದ ತಿಂಗಳು ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ರಸಿಕ್ ತನ್ನ ನಟನಾ ವೃತ್ತಿಯನ್ನು ಗುಜರಾತಿ ಸಿನಿಮಾ ಪುತ್ರ ವಧು ಮೂಲಕ ಪ್ರಾರಂಭಿಸಿದರು. ಅವರು ಹಲವಾರು ನಾಟಕಗಳಲ್ಲಿ ಕೂಡ ನಟಿಸಿದ್ದರು. ಅಲ್ಲದೇ ಪೌರಾಣಿಕ ಟಿವಿ ಧಾರವಾಹಿ ಮಹಾಭಾರತದಲ್ಲಿ ನಂದಾ (ನಕುಲ)ನ  ಪಾತ್ರವನ್ನು ನಿರ್ವಹಿಸಿದರು. ಅವರು 2006 ರಲ್ಲಿ ತಮ್ಮ ಪತ್ನಿ ಕೇತ್ಕಿ ಅವರೊಂದಿಗೆ ಹಿಂದಿಯ ಖ್ಯಾತ ಡಾನ್ಸ್‌ ರಿಯಾಲಿಟಿ ಶೋ ನಚ್ ಬಲಿಯೆಯಲ್ಲಿ ಕೂಡ ಭಾಗವಹಿಸಿದರು. ಇಂದು ಮುಂಬೈನಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

ರಸಿಕ್ ದವೆ ಅವರ ಪತ್ನಿ ಕೇತ್ಕಿ ದವೆ ಟಿವಿ ಶೋ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಯಲ್ಲಿ ದಕ್ಷ ವಿರಾಣಿ ಪಾತ್ರಕ್ಕಾಗಿ ಜನಪ್ರಿಯರಾಗಿದ್ದಾರೆ. 

ಪತ್ನಿಗೆ ಡೈವೋರ್ಸ್‌ ಕೊಟ್ಟ 'ಮಹಾಭಾರತದ ಯುಧಿಷ್ಠಿರ', 16 ವರ್ಷದ ದಾಂಪತ್ಯ ಬದುಕು ಅಂತ್ಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?