ಪುಟ್ಟ ಬಾಲಕನ ಜಾನಪದ ಹಾಡಿಗೆ ಪೊಲೀಸರು ಫಿದಾ: ವಿಡಿಯೋ ವೈರಲ್

By Suvarna News  |  First Published Jul 29, 2022, 7:21 PM IST

ಸಂಗೀತಾದ ಗಂಧ ಗಾಳಿಯೇ ಇಲ್ಲದ ಕೆಲ ಪುಟ್ಟ ಮಕ್ಕಳು ಸೊಗಸಾಗಿ ಹಾಡುವ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ಪುಟ್ಟ ಬಾಲಕನೋರ್ವ ಪೊಲೀಸ್‌ ಠಾಣೆಯಲ್ಲಿ ಸಖತ್ ಆಗಿ ಹಾಡು ಹಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.


ಸಂಗೀತಾದ ಗಂಧ ಗಾಳಿಯೇ ಇಲ್ಲದ ಕೆಲ ಪುಟ್ಟ ಮಕ್ಕಳು ಸೊಗಸಾಗಿ ಹಾಡುವ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ಪುಟ್ಟ ಬಾಲಕನೋರ್ವ ಪೊಲೀಸ್‌ ಠಾಣೆಯಲ್ಲಿ ಸಖತ್ ಆಗಿ ಹಾಡು ಹಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮಲೆಯಾಳಂ ಜಾನಪದ ಹಾಡನ್ನು ಬಾಲಕ ಸಂಗೀತ ಮಾಂತ್ರಿಕನಂತೆ ಸಖತ್ ಆಗಿ ಹಾಡುತ್ತಿದ್ದಾನೆ. ಪುಟ್ಟ ಬಾಲಕನ ಕಂಠಸಿರಿಗೆ ಕೇಳುಗರು ಫಿದಾ ಆಗಿದ್ದಾರೆ. ಕೇರಳದ ಪಲಕಾಡ್‌ ಜಿಲ್ಲೆಯ ಪೊಲೀಸ್ ಠಾಣೆಯೊಂದರ ವಿಡಿಯೋ ಇದಾಗಿದೆ.

ಪೊಲೀಸ್ ಠಾಣೆಯಲ್ಲಿ ಸಂಗೀತದಂತಹ ಮನೋರಂಜನೆ ಕಾಣ ಸಿಗುವುದು ಅತೀ ವಿರಳ. ಯಾವಾಗಲೂ ಕೋರ್ಟ್ ಕೇಸ್‌ ಅಂತ ಗಲಾಟೆ ಹೊಡೆದಾಟ ಮುಂತಾದ ಗಂಭೀರ ವಿಚಾರಗಳ ಬಗ್ಗೆಯೇ ಇಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಆದರೆ ಪೊಲೀಸ್ ಠಾಣೆಯ ಈ ವಿಡಿಯೋ ಈಗ ನೋಡುಗರ ಮೊಗದಲ್ಲಿ ಆಹ್ಲಾದ ಮೂಡಿಸುತ್ತಿದೆ. ಪುಟ್ಟ ಬಾಲಕನೋರ್ವ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿ ಮಲೆಯಾಳಂನ ಜಾನಪದ ಹಾಡನ್ನು ಸಖತ್ ಆಗಿ ಹಾಡುತ್ತಿದ್ದಾನೆ. ಬಾಲಕನ ಹಾಡಿಗೆ ಪೊಲೀಸರು ಕೂಡ ದನಿಗೂಡಿಸುತ್ತಿದ್ದಾರೆ.  

 
 
 
 
 
 
 
 
 
 
 
 
 
 
 

Tap to resize

Latest Videos

A post shared by Kerala Police (@kerala_police)

 

ವಿಡಿಯೋದಲ್ಲಿ ಕಾಣಿಸುವಂತೆ ಬಾಲಕ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯ ಪಕ್ಕದಲ್ಲಿ ಕುಳಿತುಕೊಂಡಿದ್ದು, ಪೊಲೀಸ್ ಅಧಿಕಾರಿ 1,2,3 ಎಂದು ಹೇಳುತ್ತಿದ್ದಂತೆ ಬಾಲಕ ಹಾಡಲು ಶುರು ಮಾಡುತ್ತಾನೆ. ಹಾಡಿನ ಜೊತೆ ಸಂಗೀತವನ್ನು ಸೃಷ್ಟಿಸಲು ಈತ ಕುಳಿತ ಕುರ್ಚಿಗೆ ಬಡಿಯುತ್ತಾ ಹಾಡಲು ಶುರು ಮಾಡಿದ್ದಾನೆ. ಸಂಗೀತದ ಕಲಾವಿದನಂತೆ ಈ ಬಾಲಕ ಹಾಡುತ್ತಿದ್ದರೆ, ಠಾಣೆಯಲ್ಲಿರುವ ಇತರ ಪೊಲೀಸ್ ಸಿಬ್ಬಂದಿ ನಿಂತುಕೊಂಡು ಈತನ ಹಾಡನ್ನು ಕೇಳುತ್ತಿದ್ದಾರೆ. ಈ ಬಾಲಕನ ಹೆಸರು ಯಾದವ್ ಎಂದಾಗಿದ್ದು, ನಾಟ್ಟುಕಲ್ ಪೊಲೀಸ್ ಠಾಣೆಯ ಭೇಟಿಗೆ ಬಂದ ಈತ ಅಲ್ಲಿ ಪೊಲೀಸರಿಗೆ ಮನೋರಂಜನೆ ನೀಡಿದ್ದಾನೆ. 

ಮಲೆಯಾಳಂ ಸಿನಿಮಾ ಪ್ರಜಾದ ಖ್ಯಾತ ಡೈಲಾಗ್ ಒಂದನ್ನು ಈ ವಿಡಿಯೋಗೆ ಪೊಲೀಸರು ಶೀರ್ಷಿಕೆ ನೀಡಿದ್ದಾರೆ. ಜಾಕೀರ್ ಬಾಯ್‌ ಪೊಲೀಸ್ ಠಾಣೆಗೆ ಆಗಮಿಸಿ ಹಾಡು ಹಾಡಿದರು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೇರಳ ಪೊಲೀಸರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದ್ದು, ಬಾಲಕನನ್ನು ನೋಡುಗರು ಆಕ್ಷನ್ ಹೀರೋ ಬಿಜುಗೆ ಹೋಲಿಕೆ ಮಾಡಿದ್ದಾರೆ. ಮಲೆಯಾಳಂ ಸಿನಿಮಾವೊಂದರಲ್ಲಿ ನಟ ನಿವಿನ್ ಪೌಳಿ ನಟಿಸಿದ ಬಿಜು ಪೌಲೊಸ್ ಅವರ ಪಾತ್ರಕ್ಕೆ ಈ ಬಾಲಕನನ್ನು ಹೋಲಿಕೆ ಮಾಡಿದ್ದಾರೆ.  
 

click me!