ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಂಡಿಸಿದ 'ಕ್ರಿಯಾಲೋಪ'  ಅಂದರೆ ಏನು?

By Web DeskFirst Published Jul 18, 2019, 4:30 PM IST
Highlights

ಗುರುವಾರ ಬೆಳಗ್ಗೆಯಿಂದ ಆರಂಭವಾದ ವಿಧಾನಸಭೆ ಕಲಾಪ ಕಾನೂನುಗಳ ಚರ್ಚೆ ಮತ್ತು ವಿಮರ್ಶೆಯ ಗೂಡಾಗಿ ಬದಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಉಲ್ಲೇಖ ಮಾಡಿದ ಕ್ರಿಯಾಲೋಪ ಎಂಬ ಶಬ್ದ ಎಲ್ಲದಕ್ಕಿಂತ ಇಲ್ಲಿ ಮುಖ್ಯ. ಹಾಗಾದದರೆ ಸಿದ್ದರಾಮಯ್ಯ ಮಂಡಿಸಿದ ವಾದ ಏನು?

ಬೆಂಗಳೂರು(ಜು. 18)  ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಗುರುವಾರದ ವಿಧಾನಸಭೆ ಕಲಾಪ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವತ್ತ ಹೆಜ್ಜೆ ಇಡುತ್ತಿಲ್ಲ. ಕಲಾಪದಲ್ಲಿ ಮಾತನಾಡುತ್ತ ಸಿದ್ದರಾಮಮಯ್ಯ ಕ್ರಿಯಾ ಲೋಪ ಎಂಬ ಶಬ್ದ ಬಳಕೆ ಮಾಡಿದ್ದಾರೆ. ಹಾಗೆ ಒಂದಿಷ್ಟು ಪ್ರಶ್ನೆ ಮುಂದಿಟ್ಟಿದ್ದಾರೆ.

ವಿಶ್ವಾಸಮತಯಾಚನೆಗೆ ಸಿಎಂ ಮುಂದಾಗುತ್ತಾರೆ. ಅದಾದ ಮೇಲೆ ಹೊಸ ರಾಜಕೀಯ ಬದಲಾವಣೆ ಆಗಲಿದೆ ಎಂದು ಭಾವಿಸಿದ್ದವರೆಲ್ಲ ಈಗ ಕಾನೂನುನ ಬಗ್ಗೆ ಚರ್ಚೆ ಮಾಡುವಂತೆ ಆಗಿದೆ. ಹಾಗಾದರೆ ಸಿದ್ದರಾಮಯ್ಯೆ ಎತ್ತಿದ ಪ್ರಶ್ನೆಗಳು ಯಾವುವು? 

ಮುಂಬೈಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮಂತ್ ಪಾಟೀಲ್! ಏನಿದು ತಂತ್ರ?

* ಅತೃಪ್ತ ಶಾಸಕರ ಪ್ರಕರಣ ಇತ್ಯರ್ಥವಾಗುವವರೆಗೂ ವಿಶ್ವಾಸಮತ ಗೊತ್ತುವಳಿ ತಡೆಹಿಡಿಯಬೇಕು

* ಸುಪ್ರೀಂ ಕೋರ್ಟ್ ಸ್ಪೀಕರ್, ಅತೃಪ್ತ ಶಾಸಕರು ಮತ್ತು ಸಿಎಂ ವಿಚಾರದಲ್ಲಿ ಮಾತನಾಡಿದೆ. ಸ್ಪೀಕರ್ ಅತೃಪ್ತ ಶಾಸಕರ ಮೇಲೆ ಒತ್ತಡ ಹಾಕುವಂತೆ ಇಲ್ಲ ಎಂದಿದೆ. ಆದರೆ ಶಾಸಕಾಂಗ ಪಕ್ಷದ ನಾಯಕನಿಗೆ ಅಥವಾ ಪಕ್ಷಕ್ಕೆ ಆ ಕುರಿತಾಗಿ ಏನೂ ಹೇಳಿಲ್ಲ. ಅಂದರೆ ನಮಗೆ ವಿಪ್ ನೀಡುವ ಹಕ್ಕು ಇಲ್ಲವೆ?

* ರಾಜೀನಾಮೆ ಕೊಟ್ಟು ಸದನಕ್ಕೆ ಬಾರದ ಶಾಸಕರು ಈಗ ಸದನದ ಶಾಸಕರು ಹೌದೋ? ಅಲ್ಲವೋ? ಈ ಬಗ್ಗೆಯೂ ಸ್ಪಷ್ಟನೆ ಇಲ್ಲ. ಇದು ಮೊದಲು ಇತ್ಯರ್ಥವಾದ ಮೇಲೆ ವಿಶ್ವಾಸಮತ ಗೊತ್ತುವಳಿಗೆ ಹೋಗೋಣ.

ಓಡಿ ಹೋಗಲು ಯತ್ನಿಸಿದ ಕೈ ಶಾಸಕನನ್ನು ಹಿಡಿದು ತಂದ ಮುಖಂಡರು

* ಎಲ್ಲ ಶಾಸಕರು ಒಟ್ಟಾಗಿ ಬಂದು ರಾಜೀನಾಮೆ ನೀಡಿದ್ದಾರೆ. ಒಂದೇ ಕಡೆ ಉಳಿದುಕೊಂಡಿದ್ದಾರೆ. ಸರ್ಕಾರಕ್ಕೆ ಆತಂಕ ತರುವ ಹಿನ್ನೆಲೆ ಇಲ್ಲಿ ಕಂಡುಬಂದಿದ್ದು ಅವರ ವರ್ತನೆಗೆ ಅಸಲಿ ಕಾರಣ ಪತ್ತೆಯಾಗಬೇಕು. 

*ಸುಪ್ರೀಂ ಕೋರ್ಟ್ ನಮ್ಮನ್ನು ಅಂದರೆ ಪಕ್ಷ ಅಥವಾ ಶಾಸಕಾಂಗ ಪಕ್ಷ ನಾಯಕನನ್ನು ಪ್ರತಿವಾದಿಯನ್ನಾಗಿ ಪರಿಗಣಿಸಿಲ್ಲ. ನಮಗೆ ವಿಪ್ ಕೊಡುವ ಅಧಿಕಾರ ಇಲ್ಲ ಎಂದಾದರೆ ಸಂವಿಧಾನಬದ್ಧವಾಗಿರುವ ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಂತೆ ಅಲ್ಲವೆ?

click me!