ಬಿಹಾರ ಸರ್ಕಾರದ ವಿರುದ್ಧವೇ ಸುಪ್ರೀಂನಲ್ಲಿ ರಿಯಾ ಆರೋಪ!

By Kannadaprabha NewsFirst Published Aug 11, 2020, 9:01 AM IST
Highlights

ಬಿಹಾರ ಸರ್ಕಾರದ ವಿರುದ್ಧವೇ ಸುಪ್ರೀಂನಲ್ಲಿ ರಿಯಾ ಆರೋಪ| ಚುನಾವಣೆ ಕಾರಣ ನಿತೀಶ್‌ರಿಂದ ಕೇಸ್‌| ಸುಶಾಂತ್‌ ರಜಪೂತ್‌ ಪ್ರಕರಣಕ್ಕೆ ತಿರುವು

ಮುಂಬೈ(ಜು.11): ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ರಾಜಕೀಯ ಅಜೆಂಡಾಗಳಿಗಾಗಿ ನನ್ನನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಅಲವತ್ತುಕೊಂಡಿದ್ದಾರೆ.

ರೋಚಕತೆ ಕಾರಣದಿಂದ ಮಾಧ್ಯಮಗಳಲ್ಲಿ ತಮ್ಮನ್ನು ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಈ ಹಿಂದೆ 2ಜಿ ಸ್ಪೆಕ್ಟ್ರಂ, ಆರುಷಿ ತಲ್ವಾರ್‌ ಪ್ರಕರಣದಲ್ಲೂ ಆರೋಪಿಗಳನ್ನು ಮಾಧ್ಯಮ ದೋಷಿ ಎಂದು ಕರೆದಿತ್ತು. ಆದರೆ ನ್ಯಾಯಾಲಯಗಳು ಆರೋಪಿಗಳನ್ನು ಖುಲಾಸೆಗೊಳಿಸಿದ್ದವು ಎಂದು ವಾದಿಸಿದ್ದಾರೆ.

ಸುಶಾಂತ್ ಸಾವಿನ ನೋವಲ್ಲಿದ್ದ ಮಾಜಿ ಪ್ರೇಯಸಿಗೆ ಅವಳಿ ಮಕ್ಕಳ ಖುಷಿ..!

ಸುಶಾಂತ್‌ ಪ್ರಕರಣ ಸಂಬಂಧ ಬಿಹಾರದಲ್ಲಿ ಎಫ್‌ಐಆರ್‌ ದಾಖಲಾಗಲು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೇ ಕಾರಣ ಎಂದು ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ 12 ಪುಟಗಳ ಹೆಚ್ಚುವರಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಬಿಹಾರ ಸರ್ಕಾರ ಸುಶಾಂತ್‌ ಸಿಂಗ್‌ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಬಾಲಿವುಡ್ ಸ್ಟಾರ್ಸ್ ಮ್ಯಾನೇಜರ್ ಆಗಿದ್ದ ಕನ್ನಡತಿ ಸಾವು: ಆತ್ಮಹತ್ಯೆ ಬಗ್ಗೆ ದಿಶಾ ಗೆಳತಿ ಹೇಳಿದ್ದಿಷ್ಟು

ಈ ನಡುವೆ, ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಾ ಹಾಗೂ ಅವರ ಕುಟುಂಬ ಸದಸ್ಯರನ್ನು ಬೆಳಗ್ಗೆಯಿಂದ ರಾತ್ರಿವರೆಗೂ ವಿಚಾರಣೆಗೆ ಗುರಿಪಡಿಸಿದ್ದಾರೆ.

click me!