
ಬೆಂಗಳೂರು, [ಜ.19]: ಭಜರಂಗಿ-2 ಚಿತ್ರದ ಮುಹೂರ್ತ ಅದ್ಯಾಕೋ ಚೆನ್ನಾಗಿದಂಗಿಲ್ಲ ಅನ್ಸುತೆ. ಚಿತ್ರೀಕರಣದ ವೇಳೆ ಒಂದರ ಮೇಲೊಂದಂತೆ ಮೂರು ಅವಘಡಗಳು ನಡೆದಿವೆ.
ಮೊದಲು ಚಿತ್ರೀಕರಣದ ವೇಳೆ ಅಗ್ನಿ ಅವಘಡ ಸಂಭವಿಸಿತ್ತು. ಇದಾದ ಬಳಿಕ ಭಜರಂಗಿ-2 ಚಿತ್ರದ ಕಲಾವಿದರ ತಂಡ ತೆರಳುತ್ತಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕೆ ಹೊಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಇದೀಗ ಇಂದು [ಭಾನುವಾರ] ಮತ್ತೆ ಅಗ್ನಿ ದುರಂತ ಸಂಭವಿಸಿದೆ.
ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ; ಭಜರಂಗಿ ಚಿತ್ರದ 60 ಕಲಾವಿದರು ಪಾರು!
ಚಿತ್ರೀಕರಣಕ್ಕಾಗಿ ನೆಲಮಂಗಲ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರತಂಡ ಬೃಹತ್ ಸೆಟ್ ನಿರ್ಮಿಸಿದೆ. ಈ ಸೆಟ್ಗೆ ಇಂದು [ಭಾನುವಾರ] ಮತ್ತೆ ಬೆಂಕಿ ಬಿದ್ದಿದ್ದು, ಇದರಿಂದ ಸೆಟ್ ಸಂಪೂರ್ಣ ಭಸ್ಮವಾಗಿದೆ. ಆದ್ರೆ ಬಾರಿಯು ಚಿತ್ರತಂಡ ಅವಘಡದಿಂದ ಪಾರಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಚಿತ್ರ ತಂಡ ಸುವರ್ಣನ್ಯೂಸ್ ಗೆ ಮಾಹಿತಿ ನೀಡಿದೆ. ಈ ಅವಘಡದ ವೇಳೆ ಶಿವರಾಜಕುಮಾರ್ ಸಹ ಸೆಟ್ ನಲ್ಲಿ ಇದ್ದರು.
ಶಿವಣ್ಣನ ಸೆಟ್‌ನಲ್ಲಿ ಬೆಂಕಿ; ಪ್ರಾಣಾಪಾಯದಿಂದ 'ಭಜರಂಗಿ' ಪಾರು!
3 ದಿನಗಳ ಹಿಂದಷ್ಟೇ ಇದೇ ಬೃಹತ್ ಸೆಟ್ಗೆ ಬೆಂಕಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಏನೂ ಆಗಿರಲಿಲ್ಲ. ಇದಾದ ಬಳಿಕ ಮೋಹನ್ ಬಿ ಕೆರೆ ಸ್ಟುಡಿಯೋಗೆ ಬೆಂಗಳೂರಿನಿಂದ ಕಲಾವಿದರು ಸಂಚರಿಸುತ್ತಿದ್ದ ಬಸ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ನಿಂತಿತ್ತು.
ಬಸ್ ಅಪ್ಪಳಿಸಿದ ರಭಸಕ್ಕೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿ ತುಂಡಾಗಿ ಬಸ್ ಮೇಲೆ ಬಿದ್ದಿತ್ತು. ಎರಡನೇ ಬಾರಿಯೂ ಪ್ರಾಣಾಪಾಯದಿಂದ ಕಲಾವಿದರು ಪಾರಾಗಿದ್ದರು.
ಇದೀಗ ಚಿತ್ರತಂಡ ಮತ್ತೊಮ್ಮೆ ಅವಘಡವನ್ನು ಎದುರಿಸಿದೆ. ಒಟ್ಟಿನಲ್ಲಿ ಭಜರಂಗಿ-2 ಚಿತ್ರ ತಂಡ ಒಂದೇ ವಾರದಲ್ಲಿ 3 ಕಂಟಕಗಳನ್ನು ಎದುರಿಸಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.