‘ವೀರಪ್ಪನ್‌-ಹಂಗರ್‌ ಫಾರ್‌ ಕಿಲ್ಲಿಂಗ್‌’ ವೆಬ್‌ಸೀರಿಸ್‌ಗೆ ಹೈಕೋರ್ಟ್‌ ತಡೆ

By Kannadaprabha NewsFirst Published Jan 13, 2021, 9:46 AM IST
Highlights

ವೆಬ್‌ ಸೀರಿಸ್‌ ಬಿಡುಗಡೆಗೆ ತಡೆ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮೀ| ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌| ಚಿತ್ರೀಕರಣ ನಡೆಸಲು ತಮ್ಮಿಂದ ಲಿಖಿತವಾಗಿ ಅನುಮತಿ ಅಥವಾ ಒಪ್ಪಿಗೆ ಪಡೆದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ ಮುತ್ತುಲಕ್ಷ್ಮೀ| 

ಬೆಂಗಳೂರು(ಜ.13):  ಕಾಡುಗಳ್ಳ ವೀರಪ್ಪನ್‌ ಜೀವನ ಚರಿತ್ರೆ ಆಧರಿಸಿ ನಿರ್ಮಾಣ ಮಾಡಿರುವ ‘ವೀರಪ್ಪನ್‌-ಹಂಗರ್‌ ಫಾರ್‌ ಕಿಲ್ಲಿಂಗ್‌’ ಎಂಬ ವೆಬ್‌ಸೀರಿಸ್‌ ಅನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿ ನಗರದ ಸಿಟಿ ಸಿವಿಲ್‌ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. 

ವೆಬ್‌ ಸೀರಿಸ್‌ ಬಿಡುಗಡೆಗೆ ತಡೆ ನೀಡಲು ಕೋರಿ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಈ ಆದೇಶ ಮಾಡಿದೆ. ಮೆರ್ಸೆಸ್‌ ಎಎಂಆರ್‌ ಪಿಕ್ಚ​ರ್‍ಸ್ರ್‍ ಬ್ಯಾನರ್‌ ಅಡಿಯಲ್ಲಿ ನಿರ್ದೇಶಕ ಎ.ಎಂ.ಆರ್‌. ರಮೇಶ್‌ ಅವರು ತಮ್ಮ ಪತಿ ವೀರಪ್ಪನ್‌ ಜೀವನ ಚರಿತ್ರೆ ಆಧರಿಸಿ ‘ವೀರಪ್ಪನ್‌-ಹಂಗರ್‌ ಫಾರ್‌ ಕಿಲ್ಲಿಂಗ್‌’ ಎಂಬ ವೆಬ್‌ ಸೀರಿಸ್‌ ನಿರ್ಮಾಣ ಮಾಡಿದ್ದಾರೆ. 

ವೀರಪ್ಪನ್‌ ಪುತ್ರಿಗೆ ಬಿಜೆಪಿಯಿಂದ ಹೊಸ ಹುದ್ದೆ!

2020ರ ಆ.21ರಂದು ಮುಹೂರ್ತ ನಡೆದಿತ್ತು. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಶೀಘ್ರವೇ ಒಟಿಟಿ ವೇದಿಕೆಯಲ್ಲಿ ವೆಬ್‌ ಸೀರಿಸ್‌ ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ. ಆದರೆ, ಚಿತ್ರೀಕರಣ ನಡೆಸಲು ತಮ್ಮಿಂದ ಲಿಖಿತವಾಗಿ ಅನುಮತಿ ಅಥವಾ ಒಪ್ಪಿಗೆ ಪಡೆದಿಲ್ಲ ಎಂದು ಅರ್ಜಿಯಲ್ಲಿ ಮುತ್ತುಲಕ್ಷ್ಮೀ ತಿಳಿಸಿದ್ದಾರೆ.

ವೀರಪ್ಪನ್‌ ಒಬ್ಬ ನರಹಂತಕ ಮತ್ತು ಕಾಡುಗಳ್ಳ ಎಂಬುದಾಗಿ ಚಿತ್ರದಲ್ಲಿ ಬಿಂಬಿಸಲು ನಿರ್ದೇಶಕ ಎ.ಎಂ.ಆರ್‌. ರಮೇಶ್‌ ಉದ್ದೇಶಿಸಿದ್ದಾರೆ. ಇದರಿಂದ ತಮ್ಮ ವೈಯಕ್ತಿಕ ಮತ್ತು ಗೌಪ್ಯತೆ ಹಕ್ಕು ಹರಣವಾಗಲಿದೆ. ಆದ್ದರಿಂದ ಯೂಟ್ಯೂಬ್‌ ಹಾಗೂ ಒಟಿಟಿ ವೇದಿಕೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ವೆಬ್‌ ಸೀರಿಸ್‌ ಬಿಡುಗಡೆ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಅರ್ಜಿಯಲ್ಲಿ ಮುತ್ತುಲಕ್ಷ್ಮಿ ಅರ್ಜಿಯಲ್ಲಿ ಕೋರಿದ್ದಾರೆ.
 

click me!