
ಅಡಿಯಿಂದ ಮುಡಿಯವರೆಗೂ ದೇಹದ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡೇ ಫೇಮಸ್ ಆಗ್ತಿರೋ ಒಂದಿಷ್ಟು ನಟಿಯರು ಇದ್ದಾರೆ. ಸದ್ಯ ಬಾಲಿವುಡ್ನಲ್ಲಿ ಬ್ಯೂಟಿಗಳು ಎಂದುಕರೆಸಿಕೊಳ್ಳುತ್ತಿರುವ ಬಹುತೇಕ ನಟಿಮಣಿಗಳದ್ದೂ ಇದೇ ಸ್ಥಿತಿ. ದೇಹದ ಒಂದಲ್ಲೊಂದು ಭಾಗಗಳಿಗೆ ಇವರು ಕತ್ತರಿ ಹಾಕಿಸಿಕೊಂಡವರೇ. ನಟಿ ಶ್ರೀದೇವಿಯ ಮೂಗಿನ ಸರ್ಜರಿಯಿಂದ ಹಿಡಿದು ನಟಿ ಶೆರ್ಲಿನ್ ಚೋಪ್ರಾ, ರಾಖಿ ಸಾವಂತ್ ರಂಥ ನಟಿಯರು ದೇಹದ ಭಾಗಕ್ಕೇ ಕತ್ತರಿ ಹಾಕಿಸಿಕೊಂಡವರೇ. ಆದರೆ ಪ್ರತಿಸಲವೂ ಎಲ್ಲವೂ ಸರಿಯಾಗತ್ತದೆ ಎಂದು ಹೇಳಲು ಆಗುವುದಿಲ್ಲವಲ್ಲ. ಹಾಗೆ ನೋಡಿದ್ರೆ, ಬಾಲಿವುಡ್ ಅಷ್ಟೇ ಅಲ್ಲದೇ ಎಲ್ಲಾ ಭಾಷೆಗಳ ಬಹುತೇಕ ನಟಿಯರು ಪ್ಲಾಸ್ಟಿಕ್ ರಾಣಿಯರೇ. ನಟಿಯರ ಸೌಂದರ್ಯ ನೋಡಿ ರಂಭೆ, ಊರ್ವಶಿ ಎಂದೆಲ್ಲಾ ಹಾಡಿ ಹೊಗಳುವವರೇ ಎಲ್ಲಾ. ಆದರೆ ರಿಯಲ್ ಆಗಿಯೂ ಅವರದ್ದು ರಿಯಲ್ ಸೌಂದರ್ಯ ಅಲ್ಲ, ಬದಲಿಗೆ ಪ್ಲಾಸ್ಟಿಕ್ ಸೌಂದರ್ಯ.
ಬಾಲಿವುಡ್ ಬ್ಯೂಟಿ ಎಂದೇ 2-3 ದಶಕಗಳವರೆಗೆ ಆಳಿದ ಶ್ರೀದೇವಿಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಆದರೆ ನಟಿ ಮೂಗಿನ ಪ್ಲಾಸ್ಟಿಕ್ ಸರ್ಜರಿ (Plastic surery) ಮಾಡಿಸಿಕೊಂಡ ಬಳಿಕ ಈ ಸೌಂದರ್ಯ ಪಡೆದವರು. ಆಗಿನ ಕಾಲದಲ್ಲಿಯೇ ಇವರು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋದವರು. ಇದೀಗ ಅವರ ಮಗಳ ಜಾಹ್ನವಿ ಕಪೂರ್, ಬಾಲಿವುಡ್ ಬ್ಯೂಟಿ ಎಂದೇ ಫೇಮಸ್ಸು. ಆದರೆ ಅಮ್ಮ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರೆ, ಜಾಹ್ನವಿ ಕಪೂರ್ ಯಾವ್ಯಾವ ಭಾಗಕ್ಕೆ ಕತ್ತರಿ ಹಾಕಿಸಿಕೊಂಡಿದ್ದಾರೋ ಆ ದೇವರೇ ಬಲ್ಲ.
ಏಕೆಂದರೆ, ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗ್ತಿದೆ. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಸುಂದರವಾಗಿದ್ದು, ವಯಸ್ಸಾದಂತೆ ಸೌಂದರ್ಯ ಮಾಸುವುದು ಮಾನವ ಸಹಜ ಪ್ರಕ್ರಿಯೆ. ಆದರೆ ಚಿತ್ರ ತಾರೆಯರನ್ನು ನೋಡಿ, ಅವರು ನಟಿಯೇ ಆಗಿರಲಿ, ನಟರೇ ಆಗಿರಲಿ ವಯಸ್ಸಾದಂತೆ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಅದರಲ್ಲಿಯೂ ಹೆಚ್ಚಿನ ನಟಿಯರಂತೂ ವಯಸ್ಸಾಗುತ್ತಿದ್ದಂತೆಯೇ ಹೆಚ್ಚೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ. ಕೆಲವು ನಟಿಯರು ಯೋಗ, ಧ್ಯಾನ ಎಂದುಕೊಂಡು ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದರೆ, ಮತ್ತೆ ಹಲವರದ್ದು ಪ್ಲಾಸ್ಟಿಕ್ ಸೌಂದರ್ಯವೇ ಆಗಿದೆ.
ಇಲ್ಲಿ ಕೆಳಗೆ ದಂತದ ಗೊಂಬೆ ಎಂದೇ ಕರೆಸಿಕೊಳ್ಳುವ ನಟಿ ಜಾಹ್ನವಿ ಕಪೂರ್ (Janhvi Kapoor) ಸೌಂದರ್ಯವನ್ನು ಒಮ್ಮೆ ನೋಡಿಬಿಡಿ. ಪ್ಲಾಸ್ಟಿಕ್ ಸರ್ಜರಿಗೂ ಮುನ್ನ ಆಕೆ ಹೇಗಿದ್ದಳು, ಈಗ ಹೇಗಿದ್ದಾಳೆ ಎನ್ನುವುದು ತಿಳಿಯುತ್ತದೆ. ಮುಖದ ಕೆಲವೊಂದು ಪಾರ್ಟ್ ಅಷ್ಟೇ ಅಲ್ಲದೇ ಎಲ್ಲಾ ಭಾಗಗಳಿಗೂ ಈಕೆ ಕತ್ತರಿ ಹಾಕಿಸಿಕೊಂಡಿದ್ದಾರೆ ಎಂದೇ ಹೇಳಲಾಗುತ್ತದೆ. ಹಿಂದೊಮ್ಮೆ ದೇಹದ ಭಾಗದಲ್ಲಿ ಇದ್ದ ಗುರುತು ನೋಡಿ, ನಟಿ ಆ ಭಾಗಕ್ಕೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದೇ ಸುದ್ದಿಯಾಗಿತ್ತು. ಅಷ್ಟಕ್ಕೂ ಆ ಭಾಗಕ್ಕೆ ಬಹುತೇಕ ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡವರೇ. ಬಳಕುವ ಬಳ್ಳಿಯಂತೆ ಇದ್ದರೂ ಆ ಭಾಗ ಮಾತ್ರ ಭಾರಿ ಗಾತ್ರದಲ್ಲಿ ಕಾಣಿಸಲು ಕಾರಣವೇ ಈ ಸರ್ಜರಿ. ಹಳೆಯ ವಿಡಿಯೋ ನೋಡಿ ನೀವೇ ಡಿಸೈಡ್ ಮಾಡಿ, ದಂತದ ಬೊಂಬೆಯೋ... ಪ್ಲಾಸ್ಟಿಕ್ ಗೊಂಬೆಯೋ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.