20 ವರ್ಷಗಳ ಹಿಂದೆ ಮೊದಲ ಬಾರಿ ಅಪ್ಲೋಡ್ ಆಗಿತ್ತು ಈ ಯುಟ್ಯೂಬ್ ವಿಡಿಯೋ

Published : Apr 24, 2025, 11:12 AM ISTUpdated : Apr 24, 2025, 12:16 PM IST
20  ವರ್ಷಗಳ ಹಿಂದೆ ಮೊದಲ ಬಾರಿ ಅಪ್ಲೋಡ್  ಆಗಿತ್ತು ಈ ಯುಟ್ಯೂಬ್ ವಿಡಿಯೋ

ಸಾರಾಂಶ

2005 ಏಪ್ರಿಲ್ 23ರಂದು ಜಾವೇದ್ ಕರೀಮ್ ಮೃಗಾಲಯದ ಆನೆಗಳ ಕುರಿತ "ಮಿ ಅಟ್ ದಿ ಝೂ" ಎಂಬ 19 ಸೆಕೆಂಡುಗಳ ಮೊದಲ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದರು. ಇಂದು ಯೂಟ್ಯೂಬ್ ಜಾಗತಿಕ ಮನರಂಜನೆ, ಕಲಿಕೆ ಮತ್ತು ಗಳಿಕೆಯ ವೇದಿಕೆಯಾಗಿ ಬೆಳೆದಿದೆ. ಗೂಗಲ್ ಸ್ವಾಧೀನದ ನಂತರ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಈ ಸರಳ ವಿಡಿಯೋ ಹೊಸ ಡಿಜಿಟಲ್ ಯುಗಕ್ಕೆ ನಾಂದಿ ಹಾಡಿತು.

ಈಗ ಯೂಟ್ಯೂಬ್ (YouTube) ನೋಡದ ಜನರಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಯೂಟ್ಯೂಬ್ ನೋಡ್ತಾರೆ. ಯೂಟ್ಯೂಬ್ ನಲ್ಲಿ ಸಿಗದ ವಿಷ್ಯವಿಲ್ಲ. ಅನ್ನ ಮಾಡೋದು ಹೇಗೆ ಅನ್ನೋದ್ರಿಂದ ಹಿಡಿದು ಸ್ನಾನ ಮಾಡೋವರೆಗೂ ಜನರು ತೋರಿಸೋದಲ್ದೆ, ಟಿಪ್ಸ್ ಕೂಡ ನೀಡ್ತಾರೆ. ಈಗಿನ ದಿನಗಳಲ್ಲಿ ಜನರಿಗೆ ಅತಿ ಹೆಚ್ಚು ಮನರಂಜನೆ ನೀಡ್ತಿರೋದು ಯೂಟ್ಯೂಬ್. ಯೂಟ್ಯೂಬ್ ಮೂಲಕವೇ ಜನರು ತಮ್ಮ ಕಲಿಕೆ ನಡೆಸಿದ್ದಾರೆ. ಜೀವನದ ಒಂದು ಮುಖ್ಯ ಭಾಗವಾಗಿರುವ ಯೂಟ್ಯೂಬ್ ಶುರುವಾಗಿ  20 ವರ್ಷ ಕಳೆದಿದೆ.  20 ವರ್ಷಗಳ ಹಿಂದೆ ಎಂದು ಯೂಟ್ಯೂಬ್ ಶುರುವಾಯ್ತು, ಯಾರು ಯೂಟ್ಯೂಬ್ ಶುರು ಮಾಡಿದ್ರು, ಮೊದಲ ವಿಡಿಯೋ ಯಾವ್ದು ಎನ್ನುವ ವಿವರ ಇಲ್ಲಿದೆ. 

ಯುಟ್ಯೂಬ್ ಶುರುವಾಗಿದ್ದು ಎಂದು? : ಏಪ್ರಿಲ್ 23, 2005 ರಂದು  ಮೊದಲ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. 19 ಸೆಕೆಂಡುಗಳ ವೀಡಿಯೊ ಇಂಟರ್ನೆಟ್ನಲ್ಲಿ ವೀಡಿಯೊ  ಯುಗವನ್ನು ಪ್ರಾರಂಭಿಸಿತು. ಯೂಟ್ಯೂಬ್ ಸಹ-ಸಂಸ್ಥಾಪಕ ಜಾವೇದ್ ಕರೀಮ್ (Jawed Karim) ಏಪ್ರಿಲ್ 23, 2005 ರಂದು ಮಿ ಅಟ್ ದಿ ಮೃಗಾಲಯ (Me at the zoo) ಎಂಬ ಶೀರ್ಷಿಕೆಯ ಮೊದಲ ವೀಡಿಯೊವನ್ನು ಅಪ್ಲೋಡ್ ಮಾಡಿದ್ದರು. ಈ ವೀಡಿಯೊದಲ್ಲಿ ಅವರು ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ ಆನೆಗಳ ಮುಂದೆ ನಿಂತು ಅವುಗಳ ಉದ್ದನೆಯ ಸೊಂಡಿಲುಗಳ ಬಗ್ಗೆ ವಿವರ ನೀಡಿದ್ದರು. ಆ ವಿಡಿಯೋವನ್ನು ಅವರ ಪ್ರೌಢಶಾಲಾ ಸ್ನೇಹಿತ ಯಾಕೋವ್ ಲ್ಯಾಪಿಟ್ಸ್ಕಿ ಚಿತ್ರೀಕರಿಸಿದ್ದರು. ಬಹುಶಃ ಅವರಿಗೂ ಈ ಸರಳ ವೀಡಿಯೊ ಒಂದು ದಿನ ಹೊಸ ಶಕೆ ಶುರು ಮಾಡುತ್ತೆ ಅನ್ನೋದು ತಿಳಿದಿರಲಿಕ್ಕಿಲ್ಲ.

ದಿನಕ್ಕೆ 20 ಸಾವಿರ ಖರ್ಚು ಮಾಡ್ತಾಳೆ ಈ ಜಪಾನ್ ಹುಡುಗಿ!

ಯೂಟ್ಯೂಬ್ ಸರಳ ವೀಡಿಯೊ ಷೇರಿಂಗ್ ವೇದಿಕೆಯಾಗಿ ಪ್ರಾರಂಭವಾಯಿತು. ಆದಾಗ್ಯೂ, ಕಾಲಾನಂತರದಲ್ಲಿ ಇದು ವಿಶ್ವದ ಅತಿದೊಡ್ಡ ವೀಡಿಯೊ ಪ್ಲಾಟ್ ಫಾರ್ಮ್ ಆಗಿದೆ.  2006 ರಲ್ಲಿ ಗೂಗಲ್ ಸ್ವಾಧೀನಪಡಿಸಿಕೊಂಡಾಗಿನಿಂದ, ಯೂಟ್ಯೂಬ್ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದೆ. ಒಂದೇ ದಿನದಲ್ಲಿ ಒಂದು ಶತಕೋಟಿ ಗಂಟೆಗಳ ವೀಕ್ಷಣೆಯನ್ನು ಯೂಟ್ಯೂಬ್ ಪಡೆಯುತ್ತಿದೆ. ಈ ವೇದಿಕೆಯು ಮೊಬೈಲ್ ಬಳಕೆದಾರರಿಗೆ ರೂಪಾಂತರಗಳು, ವಿಷಯ ID ವ್ಯವಸ್ಥೆ ಮತ್ತು ಕಿರುಚಿತ್ರಗಳಂತಹ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ಯೂಟ್ಯೂಬ್ ತನ್ನ 20 ನೇ ವಾರ್ಷಿಕೋತ್ಸವದ ಸಮಯದಲ್ಲಿ   ಮಿ ಅಟ್ ದಿ ಮೃಗಾಲಯ ವೀಡಿಯೊಗೆ ಸಣ್ಣ ಕೇಕ್ ಸ್ಲೈಡರ್ ಮತ್ತು ಆನೆಯ ಐಕಾನ್ ಹಾಕಿ ಸೆಲಬ್ರೇಟ್ ಮಾಡಿದೆ. ಜನರು ಜಾವೇದ್ ಕರೀಮ್ ಏನೆಲ್ಲ ವಿಡಿಯೋ ಹಂಚಿಕೊಂಡಿದ್ದಾರೆ, ಅವರ ಮೊದಲ ವಿಡಿಯೋ ಹೇಗಿದೆ ಎಂಬುದನ್ನು ತಿಳಿಯುವ ಕುತೂಹಲದಲ್ಲಿ ಅವರ ಚಾನೆಲ್ ಇಣುಕಿ ನೋಡಿದ್ದಾರೆ. ವಿಚಿತ್ರ ಅಂದ್ರರೆ  ಜಾವೇದ್   ಚಾನೆಲ್ನಲ್ಲಿರುವ ಏಕೈಕ ವೀಡಿಯೊ ಇದಾಗಿದೆ. ಆದರೆ ಅವರು 5.34 ಮಿಲಿಯನ್ಗಿಂತಲೂ ಹೆಚ್ಚು ಸಬ್ ಸ್ಕ್ರೈಬರ್ ಹೊಂದಿದ್ದಾರೆ.

ಯೂಟ್ಯೂಬಲ್ಲಿ ನೀವು ನೋಡಬಹುದಾದ ಜಬರ್​ದಸ್ತ್​ ಕ್ರೈಂ ಥ್ರಿಲ್ಲರ್

ಯುಟ್ಯೂಬ್ ಮೂಲಕ ಜನರು ತಮ್ಮ ಗಳಿಕೆ ಶುರು ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಹಣವನ್ನು ತಿಂಗಳಿಗೆ ದುಡಿಯುವ ಯೂಟ್ಯೂಬರ್ ಸಂಖ್ಯೆ ಸಾಕಷ್ಟಿದೆ. ಬಳಕೆದಾರರು ಹೆಚ್ಚಾಗ್ತಿದ್ದಂತೆ ಯೂಟ್ಯೂಬ್ ತನ್ನ ಸೇವೆಯಲ್ಲೂ ಸಾಕಷ್ಟು ಬದಲಾವಣೆ ಮಾಡಿದೆ. ಸಾಕಷ್ಟು ಹೊಸ ತಂತ್ರಜ್ಞಾನಗಳನ್ನು ಇದ್ರಲ್ಲಿ ಅಳವಡಿಸಲಾಗಿದೆ. 

ಮಿ ಅಟ್ ದಿ ಮೃಗಾಲಯ, ಯೂಟ್ಯೂಬ್ನ ಮೊದಲ ವೀಡಿಯೊ ಮಾತ್ರವಲ್ಲ, ಇದು ಹೊಸ ಡಿಜಿಟಲ್ ಯುಗದ ಆರಂಭವನ್ನೂ ಗುರುತಿಸಿದೆ. ಒಂದು ಸರಳ ಉಪಾಯವು ಜಗತ್ತನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಅದು ತೋರಿಸಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌