ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಎಡಿಟರ್‌ ಶವವಾಗಿ ಪತ್ತೆ!

By Santosh NaikFirst Published Oct 30, 2024, 9:52 AM IST
Highlights


ಸೂರ್ಯ ಅಭಿನಯದ ಕಂಗುವಾ ಹಾಗೂ ಟೊವಿನೋ ಥಾಮಸ್‌ ಅಭಿನಯದ ತಲ್ಲುಮಾಲಾ ಸಿನಿಮಾದ ಸಂಕಲನಕಾರ, ಮಲಯಾಳಂ ಸಿನಿಮಾದ ಪ್ರಸಿದ್ಧ ಎಡಿಟರ್‌ ನಿಶಾದದ ಯೂಸೂಪ್‌ ಶವವಾಗಿ ಪತ್ತೆಯಾಗಿದ್ದಾರೆ.

ಕೊಚ್ಚಿ (ಅ.30): ದೀಪಾವಳಿ ಸಂಭ್ರಮದಲ್ಲಿರುವ ಮಲಯಾಳಂ ಸಿನಿಮಾ ಜಗತ್ತಿಗೆ ಬುಧವಾರ ಅಘಾತಕಾರಿ ಸುದ್ದಿ ಅಪ್ಪಳಿಸಿದೆ. ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದ ಪ್ರಖ್ಯಾತ ಸಿನಿಮಾ ಎಡಿಟರ್‌ ನಿಶಾದ್‌ ಯೂಸುಫ್‌ ವಿಧಿವಶರಾಗಿದ್ದಾರೆ. ಭಾರತೀಯ ಸಿನಿಮಾ ಕಾತರದಿಂದ ಎದುರು ನೋಡುತ್ತಿರುವ ಕಂಗುವಾ ಸಿನಿಮಾಗೆ ಇವರೇ ಸಂಕಲನಕಾರರಾಗಿದ್ದರು. ಇತ್ತೀಚೆಗೆ ಸೂರ್ಯ ನಾಯಕರಾಗಿ ನಟಿಸಿದ್ದ ಚಿತ್ರದ ಚೆನ್ನೈ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸೂರ್ಯ ಜೊತೆಗೆ ಇದ್ದ ಚಿತ್ರಗಳನ್ನು ನಿಷಾದ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹಂಚಿಕೊಂಡಿದ್ದರು.ಇವರು ಕೆಲಸ ಮಾಡಿದ ಕಂಗುವಾ ಸಿನಿಮಾ ನವೆಂಬರ್‌ 14 ರಂದು ರಿಲೀಸ್‌ ಆಗಲಿದೆ.

ಬದಲಾಗುತ್ತಿರುವ ಮಲಯಾಳಂ ಸಿನಿಮಾದ ಸಮಕಾಲೀನ ಭಾವನೆಗಳನ್ನು ನಿರ್ಧರಿಸುವ ಹಲವು ಚಿತ್ರಗಳ ಸಂಕಲನವನ್ನು ನಿಶಾದ್‌ ಯೂಸೂಪ್‌ ಮಾಡಿದ್ದಾರೆ. ಉಂಡ, ಸೌದಿ ವೆಳ್ಳಕ್ಕ, ತಲ್ಲುಮಾಲ, ಆಪರೇಷನ್ ಜಾವಾ, ಒನ್, ಚಾವೇರ್, ರಾಮಚಂದ್ರ ಬಾಸ್ & ಕೋ, ಉಡಲ್, ಆಳಂಕಂ, ಆಯಿರತ್ತೊಂದು ನುಣುಗಳು, ಅಡಿಯೋಸ್ ಅಮಿಗೋ, ಎಕ್ಸಿಟ್ ಹೀಗೆ ದೊಡ್ಡ ಪಟ್ಟಿಯೇ ಇದೆ. ಇತ್ತೀಚಿನ ಸಿನಿಮಾರಂಗದಲ್ಲಿ ಪ್ರಖ್ಯಾತಿ ಪಡೆದಮಥ ಎಡಿಟರ್‌ ಇವರಾಗಿದ್ದರು.

Latest Videos

ಇವರು ಸಂಕಲನ ಮಾಡಿರುವ ಬಜೂಕ, ಆಲಪ್ಪುಳ ಜಿಮ್ಖಾನ ಮುಂತಾದ ಚಿತ್ರಗಳು ಬಿಡುಗಡೆಯಾಗಬೇಕಿವೆ. ಈಗ ಚಿತ್ರೀಕರಣ ನಡೆಯುತ್ತಿರುವ ತರುಣ್ ಮೂರ್ತಿ-ಮೋಹನ್‌ಲಾಲ್ ಚಿತ್ರಕ್ಕೂ ಇವರರೇ ಎಡಿಟರ್‌ ಆಗಿದ್ದರು. 2022 ರಲ್ಲಿ  ಬಿಡುಗಡೆಯಾದ ತಲ್ಲುಮಾಲ ಚಿತ್ರದ ಸಂಕಲನಕ್ಕಾಗಿ ಆ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನಿಶಾದ್ ಯೂಸೂಫ್‌ ಪಡೆದಿದ್ದರು. 

ಅಮ್ಮ ಮಾಡಿದ್ದ ಸಾಲ ತೀರಿಸೋದಕ್ಕಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದ ನಟ ಸೂರ್ಯ

ಹರಿಪ್ಪಾಡ್ ಮೂಲದ ನಿಷಾದ್ ಯೂಸಫ್ ಕೊಚ್ಚಿಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಚ್ಚಿ ಪನಂಪಳ್ಳಿ ನಗರದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಏಷ್ಯಾನೆಟ್ ನ್ಯೂಸ್‌ನಲ್ಲಿ ವೀಡಿಯೊ ಎಡಿಟರ್‌ ಆಗಿ  ಕೆಲಸ ಮಾಡಿದ ನಂತರ ನಿಷಾದ್ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದರು.  ಮಲಯಾಳಂ ಚಲನಚಿತ್ರ ರಂಗದ ಪ್ರಮುಖರು ನಿಶಾದ್ ಯೂಸೂಫ್‌ ಅವರ ಅಕಾಲ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತದೇಹವನ್ನು ಪೊಲೀಸ್ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯಾಗಿರಬಹುದು ಎಂದು ಶಂಕಿಸಿದ್ದಾರೆ. 

ಸೂರ್ಯ-ದಿಶಾ ಪಟಾಣಿ ಹೆಜ್ಜೆಗೆ ಫಿದಾ ಆದ ಫ್ಯಾನ್ಸ್: ಕಂಗುವಾ ರೊಮ್ಯಾಂಟಿಕ್ ಸಾಂಗ್ ರಿಲೀಸ್
 

 

click me!