ಡಾ ರಾಜ್‌ಕುಮಾರ್ 19ನೇ ಪುಣ್ಯ ತಿಥಿ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

Published : Apr 12, 2025, 12:59 PM ISTUpdated : Apr 12, 2025, 01:17 PM IST
ಡಾ ರಾಜ್‌ಕುಮಾರ್ 19ನೇ ಪುಣ್ಯ ತಿಥಿ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ಸಾರಾಂಶ

ಕಂಠೀರವ ಸ್ಟೂಡಿಯೋದಲ್ಲಿರುವ ಡಾ.ರಾಜ್ ಸಮಾಧಿಗೆ ಇಂದು ಅವರ ಕುಟುಂಬ ಬಂದು ನಮನ ಸಲ್ಲಿಸಿದೆ. ರಾಘವೇಂದ್ರ ರಾಜ್ ಕುಮಾರ್ ಕುಟುಂಬ, ಅಶ್ವಿನಿ ಪುನೀತ್ ರಾಜ್ ಕುಮಾರ್ ಕುಟುಂಬ, ನಟ ವಿನಯ್ ರಾಜ್ ಕುಮಾರ್ ಸೇರಿದಂತೆ..

ಇಂದು ವರನಟ ಡಾ ರಾಜ್ ಕುಮಾರ್ ಅವರ 19 ವರ್ಷದ ಪುಣ್ಯ ಸ್ಮರಣೆ. ಕನ್ನಡಿಗರು ವರನಟ ಅಣ್ಣಾವ್ರನ್ನು ಕಳೆದುಕೊಂಡು ಇಂದಿಗೆ 19 ವರ್ಷಗಳು ಕಳೆದಿವೆ.
12 ಏಪ್ರಿಲ್ 2006 ರಂದು ಡಾ ರಾಜ್‌ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು, ಅವರ ಸ್ಮರಣಾರ್ಥ ಕಂಠೀರವ ಸ್ಟೂಡಿಯೋದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಡಾ ರಾಜ್‌ಕುಮಾರ್ ಕುಟುಂಬ, ಇಂದು ಸಮಾಧಿಗೆ ಪೂಜೆ ಸಲ್ಲಿಸುವ ಕಾಯಕ ನೆರವೇರಿಸಿದೆ.

ಕಂಠೀರವ ಸ್ಟೂಡಿಯೋದಲ್ಲಿರುವ ಡಾ.ರಾಜ್ ಸಮಾಧಿಗೆ ಇಂದು ಅವರ ಕುಟುಂಬ ಬಂದು ನಮನ ಸಲ್ಲಿಸಿದೆ. ರಾಘವೇಂದ್ರ ರಾಜ್ ಕುಮಾರ್ ಕುಟುಂಬ, ಅಶ್ವಿನಿ ಪುನೀತ್ ರಾಜ್ ಕುಮಾರ್ ಕುಟುಂಬ, ನಟ ವಿನಯ್ ರಾಜ್ ಕುಮಾರ್ ಸೇರಿದಂತೆ ಕುಟುಂಬ ಹಾಗೂ ಆಪ್ತರು ಬಂದು ಮೊದಲಿಗೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ, ಪಾರ್ವತಮ್ಮನ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ನಂತರ, ಡಾ ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದೆ ಅಣ್ಣಾವ್ರ ಕುಟುಂಬ. ಅಣ್ಣಾವ್ರ ಪುಣ್ಯ ಸ್ಮರಣೆ ಹಿನ್ನೆಲೆ ಅಣ್ಣಾವ್ರ ಸಮಾಧಿ ಬಳಿ ಅಭಿಮಾನಿಗಳಿಂದಲೂ  ಪೂಜೆ ಸಲ್ಲಿಕೆ ಆಗಿದೆ.

ಅಪ್ಪಾಜಿ ಜೊತೆ ಮನೆಯವ್ರೆಲ್ಲಾ ಒಂದೇ ರೂಮಿನಲ್ಲಿ ಮಲಗ್ತಿದ್ವಿ: ರಾಘವೇಂದ್ರ ರಾಜ್‌ಕುಮಾರ್

ಕರ್ನಾಟಕದಲ್ಲಿ 5ಸಾವಿರಕ್ಕೂ ಹೆಚ್ಚು ಅಣ್ಣಾವ್ರ ಪುತ್ಥಳಿಗಳಿದ್ದು, ಎಲ್ಲದಕ್ಕೂ ಇಂದು ಪೂಜೆ ಮಾಡಲಾಗುವುದು. ಅಣ್ಣಾವ್ರು ನಮ್ಮನಗಲಿ 19 ವರ್ಷಗಳಾದರೂ ಕೂಡ ನೆಚ್ಚಿನ ನಟನನ್ನು ಅಭಿಮಾನಿಗಳು ಇಂದಿಗೂ ಕೂಡ ನೆನಯುತ್ತಲೇ ಇದ್ದಾರೆ. ಮುಂದೆ ಎಂದೆಂದಿಗೂ ಕೂಡ ಅದು ಅಭಿಮಾನಿ ದೇವರುಗಳ ಪೂಜೆ ತಮ್ಮ ಮೆಚ್ಚಿನ ನಟನಿಗೆ ನಡೆಯುತ್ತಲೇ ಇರುತ್ತದೆ ಎನ್ನಬಹುದು.

ಅಂದಹಾಗೆ, ಡಾ ರಾಜ್‌ಕುಮಾರ್ ಅವರು 24 ಏಪ್ರಿಲ್ 1929ರಂದು ಜನಿಸಿದ್ದಾರೆ. 76 ವರ್ಷ ಬದುಕಿದ್ದ ಡಾ ರಾಜ್‌ಕುಮಾರ್ ಅವರು 200 ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಡಾ ರಾಜ್‌ಕುಮಾರ್ ನಟನೆಯ ಸಾಕಷ್ಟು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿದೆ. ಸ್ವತಃ ಡಾ ರಾಜ್‌ಕುಮಾರ್ ಅವರಿಗೆ 'ಶವ್ಧವೇದಿ' ಚಿತ್ರದ 'ನಾದಮಯ..' ಹಾಡಿಗೆ ಶ್ರೇಷ್ಠ ಗಾಯಕ ಪ್ರಶಸ್ತಿ ಕೂಡ ಪಡೆದಿದ್ದಾರೆ. 17 ವರ್ಷದ ತಮ್ಮ ಬದುಕಿನುದ್ದಕ್ಕೂ ಅವರು ಬಹಳಷ್ಟು ಶಿಸ್ತು ಹಾಗೂ ಶ್ರದ್ಧೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ನಾಟಕದ ಸ್ಟೇಜಲ್ಲಿ ಡಾ ರಾಜ್‌ಕುಮಾರ್ ನಡುಗ್ತಾ ಇದ್ರಂತೆ.. ಹಾಗಂತ ಹೇಳಿದ್ದು ಯಾರು ನೋಡಿ!

ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿ ಮೆರೆದಿದ್ದು ಮಾತ್ರವಲ್ಲ, ಕನ್ನಡನಾಡಿನಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಸಹ ಗುರುತಿಸಿಕೊಂಡಿದ್ದಾರೆ. ಅವರ ಮನೆಯನ್ನು ಕರ್ನಾಟಕದ 'ದೊಡ್ಮನೆ' ಎಂದೇ ಕರೆಯಲಾಗುತ್ತದೆ. ಆಕಾರದಲ್ಲಿಯೂ ಮೊದಲು ಸಾಕಷ್ಟು ದೊಡ್ಡದಿತ್ತು, ಆದರೆ 'ದೊಡ್ಮನೆ' ಎನ್ನುವುದನ್ನು ವ್ಯಕ್ತಿತ್ವದ ಸೂಚಕವಾಗಿ, ದ್ಯೋತಕವಾಗಿ ಕರೆಯಲಾಗುತ್ತಿದೆ. ಒಟ್ಟಿನಲ್ಲಿ, ಇಂದು ಅಣ್ಣಾವ್ರ ಅಭಿಮಾನಿ ದೇವರುಗಳಿಗೆ ಮಹಾ ದೊಡ್ಡ ಹಬ್ಬವಾಗಿದೆ.

ಡಾ ರಾಜ್‌ಕುಮಾರ್ ಸಿನಿಮಾ ಜೀವನ ಹೇಗಿತ್ತು ಅಂತ ಎಲ್ಲರಿಗೂ ಗೊತ್ತು.. ಆದರೆ, ರಿಯಲ್ ಲೈಫ್‌ನಲ್ಲಿ ಡಾ ರಾಜ್‌ಕುಮಾರ್ ಹೇಗಿದ್ರು ಅನ್ನೋದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ. ಈ ವಿಷಯವನ್ನು ಮಾಧ್ಯಮದ ಎದುರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಡಾ ರಾಜ್‌ಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್. ಹಾಗಿದ್ದರೆ ಅವರೇನು ಹೇಳಿದ್ದಾರೆ ಗೊತ್ತಾ? ನೋಡಿ ಮುಂದೆ..

ಕಾಮನ ಬಿಲ್ಲು ಚಿತ್ರದಲ್ಲಿ ಅಣ್ಣಾವ್ರು-ಎಸ್‌ಪಿಬಿ ಒಟ್ಟಿಗೇ ಹಾಡಿದ ಹಾಡು ಮಾಯವಾಗಿದ್ದು ಯಾಕೆ?

ನಮಗೆ ಮಕ್ಕಳಿಗೆ ಮದುವೆ ಆದ್ಮೇಲೆ ಕೂಡ ನಾವೆಲ್ಲಾ ಅಂದ್ರೆ, ನಮ್ಮ ತಂದೆ, ನಮ್ಮ ತಾಯಿ, ತಮ್ಮ, ನಾನು-ನನ್ ಹೆಂಡ್ತಿ, ನನ್ ದೊಡ್ಡ ಮಗ ಎಲ್ಲರೂ ಒಂದೇ ರೂಮಲ್ಲಿ ಮಲಗ್ತಿದ್ವಿ.. ಕಾರಣ, ಕುಟುಂಬ ಅಂದ್ಮೇಲೆ ನಮ್ಮ ಮನೆಯವ್ರು ಎಲ್ರೂ ಮಲಗಿದಾಗ ಕೂಡ ಕೂಗಳತೆ ದೂರದಲ್ಲಿ ಇರ್ಬೇಕು ಅಂತ.. ಅಷ್ಟೇ ಅಲ್ಲ, ಕರೆಂಟ್ ಖರ್ಚು ಕಡಿಮೆ ಆಗುತ್ತೆ ಅಂತ.. ಅಲ್ಲೇ ಇರೋದ್ರಿಂದ ಯಾರೇ ಕರೆದ್ರೂ ಸಿಗ್ತಾರೆ ಅನ್ನೋದ್ರಿಂದ ನಮ್ಮಲ್ಲಿ ಬಾಂಡಿಂಗ್ ಕೂಡ ತುಂಬಾ ಜಾಸ್ತಿನೇ ಇತ್ತು.

ನಾವು ಎಷ್ಟು ಅನ್ಯೋನ್ಯವಾಗಿ ಇದ್ವಿ ಅಂದ್ರೆ, ಸತ್ತು ಸ್ವರ್ಗ ನೋಡ್ಬೇಕಾಗಿಲ್ಲ, ಬದುಕಿದ್ದಾಗ್ಲೇ ನೋಡ್ಬಹುದು ಅಂತ ನಮ್ಮ ಅಪ್ಪಾಜಿ ತೋರಿಸಿಕೊಟ್ಟು ಹೋಗಿದಾರೆ. ಅಷ್ಟೇ ಅಲ್ಲ, ಕುಟುಂಬದ ಜೊತೆ ಬಾಂಧವ್ಯ ಹೇಗೆ ಇರ್ಬೇಕು ಅನ್ನೋದನ್ನ ಕೂಡ ನಾವು ನಮ್ಮ ಅಪ್ಪಾಜಿನ ನೋಡಿನೇ ಕಲಿತ್ಕೊಂಡಿದ್ದು..' ಎಂದಿದ್ದಾರೆ ಡಾ ರಾಜ್‌ಕುಮಾರ್ ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್.

ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ ನಟ ಎಂಟರ್‌ಟೇನರ್‌ ಅಲ್ಲ, ವಿಷಕಾರಿ ಹಾವು? ಖಾಸಗಿ ಕಂಪೆನಿ HR ಹೇಳುತ್ತಿರೋದೇನು?
ದಕ್ಷಿಣ ಭಾರತದ ಕಲೆಕ್ಷನ್ ಕಿಂಗ್ ಯಾರು? 2025ರ ಬಾಕ್ಸ್ ಆಫೀಸ್ ಶೇಕ್ ಮಾಡಿದ ಟಾಪ್ 10 ಸಿನಿಮಾ