ಅಣ್ಣಾವ್ರ ಸಹಾಯ ಪಡೆದು ಭಾರೀ ಸಾಲದಿಂದ ಪಾರಾದ ತುಮಕೂರು ವ್ಯಕ್ತಿ; ಯಾರವರು?

Published : May 03, 2025, 05:01 PM ISTUpdated : May 03, 2025, 05:31 PM IST
ಅಣ್ಣಾವ್ರ ಸಹಾಯ ಪಡೆದು ಭಾರೀ ಸಾಲದಿಂದ ಪಾರಾದ ತುಮಕೂರು ವ್ಯಕ್ತಿ; ಯಾರವರು?

ಸಾರಾಂಶ

ಡಾ. ರಾಜ್‌ಕುಮಾರ್ ತುಮಕೂರಿನಲ್ಲಿ ನಷ್ಟದಲ್ಲಿದ್ದ ನಾಟಕ ಕಂಪನಿಯೊಂದಕ್ಕೆ ಮೂರು ನಾಟಕಗಳಲ್ಲಿ ಅಭಿನಯಿಸಿ, ಬಂದ ಹಣವನ್ನು ನೀಡಿದ್ದರು. ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ನಟಿಸುವ ಮುನ್ನ ಮಂತ್ರಾಲಯದಲ್ಲಿ ರಾತ್ರಿ ಕಳೆದಿದ್ದರು. ನಂತರ ನಿರ್ದೇಶಕರಿಗೆ ಚಿತ್ರ ನಿರ್ಮಿಸಲು ಪ್ರೇರೇಪಿಸಿದರು. ಚಿತ್ರೀಕರಣದ दौरान ಮಾಂಸಾಹಾರ ತ್ಯಜಿಸಿದ್ದರು. ಇವೆಲ್ಲವೂ ಅವರ ಮಾನವೀಯತೆ ಮತ್ತು ಸರಳತೆಗೆ ಸಾಕ್ಷಿ.

ಡಾ ರಾಜ್‌ಕುಮಾರ್ (Dr Rajkumar) ಅವರು ತಮ್ಮ ಜೀವಿತದ ಅವಧಿಯಲ್ಲಿ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದರು. ಆದರೆ, ಯಾವುದನ್ನೂ ಅವರಾಗಿಯೇ ಹೇಳಿಕೊಂಡಿಲ್ಲ. ಸಹಾಯ ಪಡೆದವರು ಎಲ್ಲೋ ಯಾವತ್ತೂ ಸಮಯ ಬಂದಾಗ ಹೇಳಿಕೊಂಡಿದ್ದಾರೆ. ಅದು ಇಂದಿನ ಸೋಷಿಯಲ್ ಮೀಡಿಯಾ ಕಾಲದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಣ್ಣಾವ್ರಿಗೆ ಸಂಬಂಧಪಟ್ಟು ಇಲ್ಲೊಂದು ಸ್ಟೋರಿಯಿದೆ. ಸಂಕಷ್ಟದಲ್ಲಿರೋ ಒಬ್ಬರಿಗೆ ಡಾ ರಾಜ್‌ಕುಮಾರ್ ಅವರು ಸಹಾಯ ಮಾಡಿದ್ದರು, ಅದೇನು ಅಂತ ನೋಡಿ..

ಹೌದು, ಕಲಾಶ್ರೀ ಡಾ. ಲಕ್ಷ್ಮಣ ದಾಸ್ (Dr Lakshman Das) ಎಂಬವರು ಆಡಿದ್ದ ಮಾತೊಂದು ವಿಡಿಯೋ ತುಣುಕು ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಅಗುತ್ತಿದೆ. '1963ರ ಮಾರ್ಚ್ ತಿಂಗಳಲ್ಲಿ ತುಮಕೂರಿನಲ್ಲಿ ನಾಟಕದ ಕ್ಯಾಂಪ್ ಇತ್ತು. ಓಬಳೇಶ್ ಎಂಬವರು ನಾಟಕದ ಕಂಪನಿ ನಡೆಸುತ್ತಿದ್ದರು. ಆ ನಾಟಕ ಕಂಪನಿಗೆ ನಷ್ಟವಾಗಿ ಮುಚ್ಚು ಹಂತಕ್ಕೆ ಬಂದಿತ್ತು. ಆಗ ಅಣ್ಣಾವ್ರ ಬಳಿ ಹೋಗಿ ಸಹಾಯ ಮಾಡಲು ಮನವಿ ಮಾಡಿದ್ದರು. ತಕ್ಷಣವೇ ಅದಕ್ಕೆ ಸ್ಪಂದಿಸಿದ ಅಣ್ಣಾವ್ರು 3 ನಾಟಕಗಳನ್ನು ಮಾಡಿಕೊಟ್ಟರು. 

 

ತಾವು ನಾಟಕದಲ್ಲಿ ಅಭಿನಯಿಸಿ, ಅದರಿಂದ ಬಂದ ಹಣವನ್ನು ಓಬಳೇಶ ಅವರಿಗೇ ನೀಡಿದರು. ಈ ಘಟನೆಯನ್ನು ನೆನದು ಕಲಾಶ್ರೀ ಡಾ. ಲಕ್ಷ್ಮಣ ದಾಸ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಅದೀಗ, ಸಾಮಾಜಿಕ ಮಾಧ್ಯಮದ ಮೂಲಕ ಭಾರೀ ವೈರಲ್ ಆಗುತ್ತಿದೆ. ಅವರು ಈ ಬಗ್ಗೆ 'ಅಣ್ಣಾವ್ರಂಥವರು ಮತ್ತಷ್ಟು ಜನರನ್ನು ನೋಡಲು ಇನ್ನೂ ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ. ಯುಗಯುಗಗಳು ಕಳೆದರೂ ಡಾ ರಾಜ್‌ಕುಮಾರ್ ಅಂಥವರು ಸಿಗುವುದು ಅಪರೂಪ. ಅಣ್ಣಾವ್ರ ನಾಟಕಗಳನ್ನು ನೋಡಿ ನಾನು ಬಹಳಷ್ಟು ಪ್ರಭಾವಿತನಾಗಿದ್ದೇನೆ' ಎಂದದ್ದಾರೆ. ಅವರನ್ನು ನೋಡಿಯೇ ನಾನು ನಾಟಕಗಳಲ್ಲಿ ಪಾತ್ರ ಮಾಡಲು ತೊಡಗಿಸಿಕೊಂಡೆ' ಎಂದಿದ್ದಾರೆ. 

ಡಾ ರಾಜ್‌ಕುಮಾರ್ ಅವರು ಕನ್ನಡದ ವರನಟ ಮಾತ್ರವಲ್ಲ, ಸರಳ ಹಾಗೂ ಮಾನವೀಯತೆ ಮೈವೆತ್ತ ಅಪರೂಪದ ವ್ಯಕ್ತಿ. ಅಣ್ಣಾವ್ರು ಎಂದೇ ಖ್ಯಾತಿ ಪಡೆದಿರುವ ಡಾ ರಾಜ್‌ಕುಮಾರ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಡಾ ರಾಜ್‌ಕುಮಾರ್ ಅವರು ನಟನೆಯಲ್ಲಿ ಮಾತ್ರವಲ್ಲ, ತಮ್ಮ ಗಾಯನದ ಮೂಲಕ ಕೂಡ ಕನ್ನಡಿಗರು ಮನ ಗೆದ್ದಿದ್ದಾರೆ. 

ರಾಜವರ್ಧನ್ ಜೊತೆ ಅಲ್ಲಿ ಕಾಣಿಸಿಕೊಂಡ ನಟಿ ರಾಗಿಣಿ ದ್ವಿವೇದಿ, 'ಸಂತೆ' ಬಗ್ಗೆ ಹೇಳಿದ್ಯಾಕೆ?

ಇಂಥ ಡಾ ರಾಜ್‌ಕುಮಾರ್ ಅವರು ಹಲವಾರು ಭಕ್ತಿ ಪ್ರಧಾನ ಹಾಗೂ ಐತಿಹಾಸಿಕ ಪಾತ್ರಗಳ ಸಿನಿಮಾಗಳಲ್ಲಿ ನಟಿಸಿ ಆದರ್ಶ ಪುರುಷ ಎನ್ನಿಸಿಕೊಂಡಿದ್ದಾರೆ. ಅದರಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಿರುವ 'ಮಂತ್ರಾಲಯ ಮಹಾತ್ಮೆ' ಕೂಡ ಒಂದು. ಹೌದು, ಡಾ ರಾಜ್‌ಕುಮಾರ್ ಅವರು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳ ಪಾತ್ರ ಮಾಡುವಲ್ಲಿ ಎತ್ತಿದ ಕೈ ಎನ್ನಲೇಬೇಕು. ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಶುರುವಾದ ಅವರ ಸಿನಿಮಾ ಯಾನದಲ್ಲಿ ಬಹಳಷ್ಟು ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡುವ ಮೂಲಕ ಮೇರನಟ ಎನ್ನಿಸಿಕೊಂಡಿದ್ದಾರೆ. 

ಭಕ್ತ ಕನಸಕದಾಸ, ಭಕ್ತ ಕುಂಬಾರ, ಮಯೂರ ಸೇರಿದಂತೆ ಸಾಲು ಸಾಲು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಡಾ ರಾಜ್‌ಕುಮಾರ್. ಅದೇ ರೀತಿ ಡಾ ರಾಜ್ಅವರು 'ಮಂತ್ರಾಲಯ ಮಹಾತ್ಮೆ' ಎಂಬ ಸಿನಿಮಾದಲ್ಲಿ ಸಹ ನಟಿಸಿ ಖ್ಯಾತಿ ಗಳಿಸಿದ್ದಾರೆ. ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ನಟಿಸುವ ಮೊದಲು, ಪೂರ್ವಭಾವಿಯಾಗಿ ಅಣ್ಣಾವ್ರು ಅದೊಂದು ಕೆಲಸ ಮಾಡಿದ್ದರು. ಅದನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ.

ಕಮಲ್ ಹಾಸನ್ ನೋಡಲು ಬುರ್ಖಾ ಧರಿಸಿ ಹೋಗಿದ್ದರಂತೆ ಶ್ರೀದೇವಿ: ಅಲ್ಲಿ ಆಗಿದ್ದೇನು 'ಹೇ ರಾಮ್'..!
 
ಆದರೆ, ಆ ಕೆಲಸವನ್ನು ಡಾ ರಾಜ್‌ಕುಮಾರ್ ಅವರು ಯಾಕಾಗಿ ಮಾಡಿದ್ದರು? ಅದರ ಹಿಂದಿನ ಉದ್ದೇಶೇನಿರಬಹುದು? ಅದಕ್ಕೆ ಉತ್ತರ ಅವರೇ ಹೇಳಬೇಕಷ್ಟೇ. ಆದರೆ, ಅವರೀಗ ನಮ್ಮೊಂದಿಗಿಲ್ಲ. ಹೀಗಾಗಿ ಅಣ್ಣಾವ್ರು ಯಾರಿಗಾದರೂ ಹೇಳಿದ್ದರೆ, ಅವರು ಈಗ ಹೇಳಿದರೆ ಜಗತ್ತಿಗೆ ಗೊತ್ತಾಗಬೇಕಷ್ಟೇ. ಹಾಗಿದ್ದರೆ, ಡಾ ರಾಜ್‌ ಅವರು ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ನಟಿಸುವ ಮೊದಲು ಅದೇನು ಮಾಡಿದ್ದರು ಗೊತ್ತಾ? ಇಲ್ಲಿದೆ ನೋಡಿ ಆ ಸ್ಟೋರಿ..

ಡಾ ರಾಜ್‌ಕುಮಾರ್ ಅವರ ಒಮ್ಮೆ ಮಂತ್ರಾಲಯಕ್ಕೆ ಹೋಗಿದ್ದರು. ಅಲ್ಲಿ ಅವರು ಆಡಳಿತ ಮಂಡಳಿ ಜೊತೆ ಮಾತನ್ನಾಡುತ್ತ ತಮಗೆ ಅಲ್ಲಿ ಅವಕಾಶ ನೀಡಬೇಕೆಂದು ಕೋರಿಕೆ ಇಟ್ಟರು. ಡಾ ರಾಜ್‌ಕುಮಾರ್ ವನಂತಿ ಮನ್ನಿಸಿ ಅವರಿಗೆ ಗರ್ಭಗುಡಿಯಲ್ಲೇ ಮಲಗಲು ಅವಕಾಶ ನೀಡಲಾಯಿತು. ಮರುದಿನ ಮುಂಜಾನೆ ಎದ್ದವರೇ ಅವರು ನೇರವಾಗಿ ಮನೆಗೆ ಬಂದರು. ಅಷ್ಟೇ ಅಲ್ಲ, ನಿರ್ದೇಶಕರಾದ ದೊರೈ-ಭಗವಾನ್ ಬಳಿ ಹೋಗಿ 'ನೀವು ರಾಘವೇಂದ್ರ ಸ್ವಾಮಿಗಳ ಸಿನಿಮಾದಲ್ಲಿ ನಟಿಸ್ಥಿನಿ, ನೀವು ಸಿನಿಮಾ ಮಾಡಿ' ಎಂದರು. ಅದಾದ ಬಳಿಕ ಈ ಮಂತ್ರಾಲಯ ಮಹಾತ್ಮೆ ಸಿನಿಮಾ ಅಗಿ ತೆರೆಗೆ ಬಂದಿದೆ. 

ಕಮಲ್ ಹಾಸನ್ ನೋಡಲು ಬುರ್ಖಾ ಧರಿಸಿ ಹೋಗಿದ್ದರಂತೆ ಶ್ರೀದೇವಿ: ಅಲ್ಲಿ ಆಗಿದ್ದೇನು 'ಹೇ ರಾಮ್'..!

ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಅವರು ಪಾತ್ರ ಮಾಡಿದ್ದಾರೆ ಎನ್ನುವುದಕ್ಕಿಂತ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ಜೀವಿಸದ್ದಾರೆ ಎನ್ನುವಷ್ಟು ಅಮೋಘವಾಗಿ ನಟಿಸಿದ್ದಾರೆ. ಆ ಪಾತ್ರ ಮಾಡಲು ಮನಸ್ಸು ಮಾಡಿದ ಡಾ ರಾಜ್‌ ಅವರು ಮೊಟ್ಟಮೊದಲು ನಾನ್‌ವೆಜ್ ಸೇವಿಸುವುದನ್ನು ಬಿಟ್ಟಿದ್ದರು ಎನ್ನಲಾಗಿದೆ. ಆ ಸಿನಿಮಾ ಮುಗಿಯುವವರೆಗೂ ಅಣ್ಣಾವ್ರು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು ಎನ್ನಲಾಗಿದೆ. ಜೊತೆಗೆ, ಆ ಸಿನಿಮಾದ ಬಳಿಕ ಡಾ ರಾಜ್‌ಕುಮಾರ್ ಅವರ ವ್ಯಕ್ತಿತ್ವದಲ್ಲಿ ಇನ್ನೂ ಹೆಚ್ಚಿನ ಸಾತ್ವಿಕತೆ ಮೂಡಿದೆ ಎನ್ನಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!