'ಸಂಗಾತಿ ಮರಳಿ ಬಾ': Deep Sidhu ಸಾವಿನ ಬಳಿಕ ಗೆಳತಿ ರೀನಾ ರಾಯ್ ಮೊದಲ ಪೋಸ್ಟ್‌!

Published : Feb 17, 2022, 01:00 PM ISTUpdated : Feb 17, 2022, 01:02 PM IST
'ಸಂಗಾತಿ ಮರಳಿ ಬಾ': Deep Sidhu ಸಾವಿನ ಬಳಿಕ ಗೆಳತಿ ರೀನಾ ರಾಯ್ ಮೊದಲ ಪೋಸ್ಟ್‌!

ಸಾರಾಂಶ

* ಅಪಘಾತದಲ್ಲಿ ನಟ ದೀಪ್‌ ಸಿಧು ನಿಧನ * ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ದೀಪ್ ಸಿಧು ಗೆಳತಿ ರೀನಾ * ಗೆಳೆಯನ ಸಾವಿನ ಬೆನ್ನಲ್ಲೇ ರೀನಾ ರಾಯ್ ಮೊದಲ ಪೋಸ್ಟ್‌

ನವದೆಹಲಿ(ಫೆ.17): ದಿವಂಗತ ನಟ ದೀಪ್ ಸಿಧು ಅವರ ಹಠಾತ್ ಸಾವಿನಿಂದ ಅನೇಕರು ಅಘಾತಕ್ಕೀಡಾಗಿದ್ದಾರೆ. ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ನಟನ ಜೊತೆಗೆ ಅವರ ಗೆಳತಿ ರೀನಾ ರಾಯ್ ಕೂಡ ಕಾರಿನಲ್ಲಿದ್ದರು. ಅವರು ಈ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರಾದರೂ, ದೀಪ್‌ ಸಾವು ಅವರನ್ನು ಆಘಾತಕ್ಕೀಡು ಮಾಡಿದೆ. ತನ್ನ ಸ್ನೇಹಿತನ ಸಾವಿನ ಬಳಿ ರೀನಾ ಮೊದಲ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ. ಮರಳಿ ಬಾ ಗೆಳೆಯ ಎಂದಿರುವ ರೀನಾ, ತಾನು ಒಳಗೊಳಗೇ ಸತ್ತಿದ್ದೇನೆಂದೂ ಹೇಳಿದ್ದಾರೆ. ಅವರ ಈ ಪೋಸ್ಟ್‌ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. 

ನಟ ದೀಪ್ ಸಿಧು ಅಪಘಾತದಲ್ಲಿ ನಿಧನ, ಜೊತೆಗಿದ್ದ ಯುವತಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ನಟ ದೀಪ್ ಅವರೊಂದಿಗಿನ ಕೆಲವು ಹಳೆಯ ಫೋಟೋಗಳನ್ನು ರೀನಾ ಹಂಚಿಕೊಂಡಿದ್ದು, 'ನಾನು ಚದುರಿ ಹೋಗಿದ್ದೇನೆ. ನಾನು ಒಳಗೇ ಸತ್ತಿದ್ದೇನೆ. ದಯವಿಟ್ಟು ಹಿಂತಿರುಗಿ ಬಾ ನನ್ನ ಆತ್ಮ ಸಂಗಾತಿ. ನನ್ನನ್ನು ಎಂದಿಗೂ ಬಿಡುವುದಿಲ್ಲ ಎಂದು ನೀನು ನನಗೆ ಭರವಸೆ ನೀಡಿದ್ದೀಯ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಐ ಲವ್‌ ಯೂ ಮೇರಿ ಜಾನ್. ನನ್ನ ಆತ್ಮ ಸಂಗಾತಿ ನೀನು ನನ್ನ ಹೃದಯ ಬಡಿತದಂತಿರುವಿ ಎಂದಿದ್ದಾರೆ.

ಮುಂದುವರೆಸಿ ಬರೆದಿರುವ ನಟಿ ರೀನಾ ರಾಯ್  'ಇಂದು ನಾನು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಗ, ನೀನೇ ಬಂದು ನನ್ನ ಕಿವಿಯಲ್ಲಿ ಐ ಲವ್‌ ಮೇರಿ ಜಾನ್‌ ಎಂದು ಉಸುರಿದಂತಾಯ್ತು. ನೀವು ಯಾವಾಗಲೂ ನನ್ನೊಂದಿಗೆ ಇರುತ್ತೀರಿ ಎಂದು ನನಗೆ ತಿಳಿದಿದೆ. ನಾಳಿನ ನಮ್ಮ ಭವಿಷ್ಯದ ಕನಸನ್ನು ನಾವಿಬ್ಬರೂ ಒಟ್ಟಾಗಿ ಕಂಡಿದ್ದೆವು.ಈಗ ನೀವು ಹೋಗಿದ್ದೀರಿ. ಆತ್ಮ ಸಂಗಾತಿಗಳು ಎಂದಿಗೂ ದೂರವಾಗುವುದಿಲ್ಲ. ಮುಂದೊಂದು ದಿನ ಮತ್ತೆ ಇಬ್ಬರೂ ಭೇಟಿಯಾಗೋಣ ಎಂದು ಬರೆದಿದ್ದಾರೆ.

Deep Sidhu Death : ಮೃತ ದೀಪ್‌ ಸಿಧು ಕಾರಲ್ಲಿ ಮದ್ಯದ ಬಾಟಲಿ, ನಶೆಯೇ ಕುತ್ತು ತಂತಾ?

ದೀಪ್ ಸಿಧು ಪಂಜಾಬಿ ನಟ. ಅವರು ಮಂಗಳವಾರ (ಫೆಬ್ರವರಿ 15) ರಸ್ತೆ ಅಪಘಾತದಲ್ಲಿ ನಿಧನರಾದರು. ಅವರು ದೆಹಲಿಯಿಂದ ಬಟಿಂಡಾಗೆ ಹೋಗುತ್ತಿದ್ದಾಗ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಅವರ ಕಾರು ಟ್ರಾಲಿಗೆ ಡಿಕ್ಕಿ ಹೊಡೆದಿದೆ. ರೈತರ ಚಳವಳಿಯ ಸಂದರ್ಭದಲ್ಲಿ ದೀಪ್ ಸಿದ್ದು ಗಮನ ಸೆಳೆದಿದ್ದರು. 26 ಜನವರಿ 2021 ರಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿಯಾಗಿದ್ದರು. 

ಮೃತ ದೀಪ್‌ ಸಿಧು ಕಾರಲ್ಲಿ ಮದ್ಯ ಬಾಟಲಿ ಪತ್ತೆ

 

ರೈತ ಹೋರಾಟಕ್ಕೆ ಬೆಂಬಲಿಸಿದ್ದ ಪಂಜಾಬಿ ನಟ, ಗಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್‌ ಸಿಧು ಅವರ ಸಾವಿಗೆ ಕಾರಣವಾದ ರಸ್ತೆ ಅಪಘಾತ ಪ್ರಕರಣವು ಇದೀಗ ತಿರುವು ಪಡೆದುಕೊಂಡಿದೆ. ಅವರು ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ಸಿಧು ಮದ್ಯ ಸೇವನೆ ಮಾಡಿದ್ದರಿಂದಲೇ ಈ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ನಟನ ಜತೆ ಕಾರಿನಲ್ಲಿದ್ದ ಆತನ ಸ್ನೇಹಿತೆ ಅನಿವಾಸಿ ಭಾರತೀಯಳಾದ ರೀನಾ ರಾಯ್‌ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ನಡುವೆ ಈ ಪ್ರಕರಣ ಸಂಬಂಧ ದೀಪ್‌ ಅವರ ಸೋದರ ಸರ್ಜೀತ್‌ ಅವರು ಟ್ರಕ್‌ ಚಾಲಕನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ‘ಈ ರಸ್ತೆ ದುರಂತ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ. ಬದಲಿಗೆ ಅವರನ್ನು ಕೊಲೆಗೈಯ್ಯುವ ಉದ್ದೇಶದ ಪೂರ್ವ ನಿಯೋಜಿತ ಕೃತ್ಯ’ ಎಂದು ದೀಪ್‌ ಸಿಧು ಅವರ ಸ್ನೇಹಿತರು ಆರೋಪಿಸಿದ್ದಾರೆ.

ಮಂಗಳವಾರ ರಾತ್ರಿ ಕುಂಡ್ಲಿ-ಮಾನೆಸರ್‌-ಪಲ್ವಾಲ್‌(ಕೆಎಂಪಿ) ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ದೀಪ್‌ ಸಿಧು ಅವರ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ದೀಪ್‌ ಸಿಧು ಅವರು ಸಾವಿಗೀಡಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!