ಇಂಡೋ ಫ್ರೆಂಚ್‌ ಜೋಡಿಯ ಹಿಂದಿ ಹಾಡು... ವಿಡಿಯೋ ವೈರಲ್‌

Suvarna News   | Asianet News
Published : Jan 20, 2022, 10:25 PM IST
ಇಂಡೋ ಫ್ರೆಂಚ್‌ ಜೋಡಿಯ ಹಿಂದಿ ಹಾಡು... ವಿಡಿಯೋ ವೈರಲ್‌

ಸಾರಾಂಶ

  ಇಂಡೋ ಫ್ರೆಂಚ್‌ ಜೋಡಿಯ ಹಾಡಿಗೆ ನೆಟ್ಟಿಗರು ಫಿದಾ ಸಾಮ್ನೆ ಯೇ ಕೌನ್‌ ಆಯಾ ಹಾಡು ಹಾಡಿದ ಜೋಡಿ

ಇಂಡೋ-ಫ್ರೆಂಚ್‌ ಜೋಡಿಯೊಂದು ಕಿಶೋರ್‌ ಕುಮಾರ್‌ ಅವರ ಫೇಮಸ್ ಹಾಡು 'ಸಾಮ್ನೆ ಯೇ ಕೌನ್‌ ಆಯಾ' ಹಾಡನ್ನು ಹಾಡಿದ್ದು, ಇದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಇಂಡೋ ಫ್ರೆಂಚ್‌ ಜೋಡಿಯಾದ ಮೇಘದತ್ ರಾಯ್ (Meghdut Roy Chowdhury) ಚೌಧರಿ ಮತ್ತು ಪಾಲಿನ್ ಲಾರಾವೊಯಿರ್ (Pauline Laravoire) ಅವರು ಕಿಶೋರ್‌ ಕುಮಾರ್ ಅವರ  'ಸಾಮ್ನೆ ಯೇ ಕೌನ್‌ ಆಯಾ' ಹಾಡನ್ನು ಸಖತ್‌ ಆಗಿ ಹಾಡಿದ್ದು, ನೆಟ್ಟಿಗರು ಈ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಈ ವಿಡಿಯೋವನ್ನು 31,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಕೋಲ್ಕತ್ತಾದ ಮೇಘದತ್ ರಾಯ್ ಚೌಧುರಿ ಮತ್ತು ಫ್ರಾನ್ಸ್‌ನ ಪಾಲಿನ್ ಲಾರಾವೊಯಿರ್ ತಮ್ಮ ಜೀವನವನ್ನು ಒಟ್ಟಿಗೆ ನಡೆಸುತ್ತಿದ್ದು,  ಇವರಿಬ್ಬರು ಈ ಹಿಂದೆಯೂ ಹೀಗೆ ಹಲವು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್‌ ಮಾಡಿದ್ದರು. ಹಾಗೆಯೇ ಈ ಬಾರಿಯೂ ಕೂಡ ಜನವರಿ 9 ರಂದು ಮೇಘದತ್ ಮತ್ತು ಪಾಲಿನ್ ಇಬ್ಬರೂ 1972 ರ ಚಲನಚಿತ್ರ 'ಜವಾನಿ ದಿವಾನಿ'ಯಿಂದ ಎವರ್‌ಗ್ರೀನ್‌ ಹಾಡು ಕಿಶೋರ್ ಕುಮಾರ್ ಹಾಡಿದ ಸಾಮ್ನೆ ಯೇ ಕೌನ್ ಆಯಾ ಹಾಡನ್ನು ಹಾಡಿದ್ದಾರೆ.

ಟೀಚರ್‌ ಬೆಲ್ಲಿ ಡಾನ್ಸ್‌ ವೈರಲ್‌... ಮನೆಗೆ ಕಳುಹಿಸಿದ ಶಾಲೆ : ಡಿವೋರ್ಸ್‌ ನೀಡಿದ ಗಂಡ

ಈ ಸಿನಿಮಾದಲ್ಲಿ ರಣಧೀರ್ ಕಪೂರ್ ಮತ್ತು ಜಯಾ ಬಚ್ಚನ್ ಅವರು ನಟಿಸಿದ್ದಾರೆ. ಪಾಲಿನ್ ತನ್ನ ಇನ್ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.  ಈ ವಾರದ ಇಂಡೋ ಫ್ರೆಂಚ್‌ ಸಿಂಗಿಂಗ್‌ ಸಂಡೇ (indofrenchsingingsundays) ಭಾಗವಾಗಿ @paulinelaravoire ಅವರೊಂದಿಗೆ ಸಾಮ್ನೆ ಯೇ ಕೌನ್ ಆಯಾ ಹಾಡು ಇಲ್ಲಿದೆ. ನಾವು ಈ ಹಿಂದೆ ಕಿಶೋರ್‌ಕುಮಾರ್ ಅವರ ಹಾಡನ್ನು ಪ್ರಯತ್ನಿಸಿದ್ದೇವೆ ಎಂದು ಭಾವಿಸಬೇಡಿ. ಈ ಹೋಮ್ ಕ್ವಾರಂಟೈನ್ ಹೆಚ್ಚು ಕಾಲ ಮುಂದುವರಿದರೆ, ನೀವು ಬಹುಶಃ ಪ್ರತಿ ವಾರಾಂತ್ಯದಲ್ಲಿ ನಿಮಗಾಗಿ ಹೊಸ ಹಾಡನ್ನು ನಾವು ಆರಿಸಿಕೊಳ್ಳುವುದನ್ನು ನೀವು ನೋಡಬಹುದು. ಅಲ್ಲದೆ, ನಮ್ಮ ಕೊನೆಯ ವೀಡಿಯೊವನ್ನು ನೋಡಿದ ಎಲ್ಲಾ 7,50,000 ಜನರಿಗೆ ಧನ್ಯವಾದಗಳು. ಅದು ಸಂಪೂರ್ಣ ಹುಚ್ಚುತನವಾಗಿತ್ತು. ಅಲ್ಲದೇ ಎಲ್ಲರೂ ಅದನ್ನು ಇಷ್ಟಪಟ್ಟಿದ್ದಾರೆ  ಎಂದು ಬರೆದುಕೊಂಡಿದ್ದಾರೆ. 

ಐಫೋನ್‌ ರಿಂಗ್‌ಟೋನ್‌ ಉಲಿಯುವ ಗಿಳಿ... ವಿಡಿಯೋ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?