
ಇಂದು ಮೂರ್ಖರ ದಿನ. ಒಂದಿಷ್ಟು ತಮಾಷೆ, ತಂಟೆ, ತುಂಟತನ ಎಲ್ಲವೂ ಇರುತ್ತದೆ. ಪರಸ್ಪರರು ನಕ್ಕು ಹಗುರಾಗಲು ಇರುವ ದಿನ. ಒಂದಿಷ್ಟು ಜನರನ್ನು ಮೂರ್ಖರನ್ನಾಗಿ ಮಾಡುತ್ತಾ, ನಾವೂ ಕೆಲವೊಬ್ಬರಿಂದ ಮೂರ್ಖರಾಗುವ ಮಜವೇ ಬೇರೆ. ಇಲ್ಲಿರುವ ತಮಾಷೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದೆಂದು ವಿನಂತಿ.
ತೂಕದ ಮಾತು!
ಕಳೆದ ವರ್ಷ ಬಟ್ಟೆಯ ತೂಕ ಇಳಿಸಿಕೊಂಡು ಬೇಡಿಕೆ ಏರಿಸಿಕೊಂಡ ನಟಿಯರ ಪೈಕಿ ಮುಂಚೂಣಿಯಲ್ಲಿ ಇರುವವರು ಇವರು. ಅನೇಕ ಬಾರಿ ತೂಕ ಇಳಿದಿದೆ ಎಂದು ಇವರು ಘೋಷಿಸಿದ್ದರು. ಅದನ್ನೇ ನಿಜವೆಂದು ನಂಬಿದ ಅನೇಕ
ಅಭಿಮಾನಿಗಳು ಕೂಲಂಕಷವಾಗಿ ಗಮನಿಸಿದಾಗ ತೂಕ ಇಳಿದದ್ದು ನಿಜವೆಂದೂ ಅವರ ಬಟ್ಟೆಯ ತೂಕ ಗಣನೀಯವಾಗಿ ಇಳಿದಿದೆ ಎಂದೂ ತೀರ್ಮಾನಕ್ಕೆ ಬರಲಾಗಿದೆ.
ಮುತ್ತಿಕ್ಕಲು ಅವಕಾಶ!
ಚುಂಬನ ದೃಶ್ಯಗಳಲ್ಲಿ ಭಾಗವಹಿಸಲು ಇಚ್ಚಿಸುವ ನಟಿಯರಿಗೆ ತಾವು ಅವಕಾಶ ಕೊಡುವುದಾಗಿ ತೆಲುಗು ಚಿತ್ರರಂಗ ಕರೆನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಂಧ್ರ ಚುಂಬನ ಪ್ರೇಮಿಗಳ ಸಂಘದ ಅಧ್ಯಕ್ಷ ತುಟಿ ನಾಯ್ಡು, ಕನ್ನಡ ಚಿತ್ರರಂಗದಲ್ಲಿ ಚುಂಬನಕ್ಕೆ ಅವಕಾಶ ಇಲ್ಲವೆಂದು ಗೊತ್ತಾಗಿದೆ. ಆ ಕಾರಣಕ್ಕೆ ಹೊಸ ನಟಿಯರಿಗೆ ಅನ್ಯಾಯವಾಗುವುದನ್ನು ತಾವು ಖಂಡಿತಾ ಸಹಿಸುವುದಿಲ್ಲ. ಚುಂಬನಪ್ರಿಯರು ಯಾವುದೇ ಮುಜುಗರವಿಲ್ಲದೇ ತೆಲುಗು ಚಿತ್ರರಂಗಕ್ಕೆ ಬಂದು ಚುಂಬಿಸುವ ದೃಶ್ಯಗಳಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದ್ದಾರೆ.
ಒಬ್ಬರು ಎರಡು ಚಿತ್ರಗಳಲ್ಲಿ ಮಾತ್ರ ಚುಂಬಿಸಲು ಸದ್ಯಕ್ಕೆ ಅವಕಾಶ ಇದೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಎಲ್ಲಾ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಶ್ರದ್ಧಾ ಶ್ರೀನಾಥ್ ಅವರಿಗೆ ಇನ್ನೊಂದು ಅವಕಾಶ ಉಳಿದಿದೆ.
ಎಲ್ಲವೂ ಡಿಫರೆಂಟ್!
ನಮ್ಮ ಹತ್ರ ಎಲ್ಲ ಢಿಪರೆಂಟೇ. ಕತೆ ಡಿಫರೆಂಟ್, ಚಿತ್ರಕತೆ ಡಿಫರೆಂಟ್. ಕೊನೆಗೆ ಆರ್ಟಿಸ್ಟ್ ಕೂಡ ಡಿಫರೆಂಟ್. ಅಷ್ಟೇ ಯಾಕೆ ಇಡೀ ಸಿನಿಮಾವೇ ಡಿಫರೆಂಟ್. ಅರ್ಧಗಂಟೆಯಲ್ಲಿ ಮುನ್ನೂರಿಪ್ಪತ್ತನಾಲ್ಕು ಡಿಫರೆಂಟುಗಳನ್ನು ಎಸೆದು ಕಾಲರ್
ಮೇಲೆತ್ತಿಕೊಂಡು ಪತ್ರಕರ್ತರ ಮುಖ ನೋಡಿದರು ನಿರ್ದೇಶಕರು. ಆ ಸಿನಿಮಾ ತೆರೆ ಕಂಡಿತು. ಒಂದೇ ಷೋಗೆ ಥೇಟರ್ ಬಿಟ್ಟು ಓಡಿತು.
ಯಾಕ್ರೀ ಡಿಫರೆಂಟ್ ಅಂದ್ರಲ್ಲ, ಜನ ನೋಡ್ಲಿಲ್ವಾ?
ಕೇಳಲಾಯಿತು. ಒಂಚೂರು ಜಾಸ್ತಿನೇ ಡಿಫರೆಂಟ್ ಆಗಿಬಿಡ್ತು ಸಾರ್. ಹೀಗಾಗಿ ರೆಂಟ್ ಕಟ್ಟೋದಕ್ಕೂ ಕಾಸು ಹುಟ್ಟಲಿಲ್ಲ ಅಂತ ನಿರ್ದೇಶಕರು ಮುಗುಳುನಕ್ಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.