
ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ಸೆನ್ಸೇಷನಲ್ ಸ್ಟಾರ್ ಚಂದನ್ ಶೆಟ್ಟಿ (Chandan Shetty) ಧ್ವನಿಯಲ್ಲಿ ಶ್ರೀರಾಮನವಮಿ ಪ್ರಯುಕ್ತ 'ಹನುಮಾನ್ ಚಾಲೀಸ' ಮ್ಯೂಸಿಕ್ ಆಲ್ಬಂ ಬಿಡುಗಡೆ ಮಾಡಲಾಗಿದೆ. ಅದನ್ಜು ಆನ್‌ಲೈನ್‌ನಲ್ಲಿ ಆಕ್ಷನ್ ಪ್ರಿನ್ಸ್ ಧ್ರವ ಸರ್ಜಾ ಅವರು ಇಂದು, ಅಂದರೆ 05 ಏಪ್ರಿಲ್ 2025ರಂದು ಬಿಡುಗಡೆ ಮಾಡಿದ್ದಾರೆ. ಈ ಆಲ್ಬಂ ಸೂಪರ್ ಎನ್ನಬಹುದಾದ ಎನರ್ಜಿಟೆಕ್ ಬೀಟ್ಸ್ ಜೊತೆ ರಾಪರ್ ಚಂದನ್ ಶೆಟ್ಟಿಯವರ ಹೈ ವೋಲ್ಟೇಜ್ ವೈಸ್ ಒಳಗೊಂಡಿದೆ. ಹಿಂದೂಗಳ ಮಹತ್ವದ ಹಬ್ಬ ಶ್ರೀರಾಮನವಮಿಗೆ ಈ ಆಲ್ಬಂ ಬಿಡುಗಡೆ ಆಗಿದ್ದು, ಇದನ್ನು ಆಂಜನೇಯನ ಪರಮ ಭಕ್ತ ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ.
ನಟ, ಸಿಂಗರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯವರು ಇತ್ತೀಚೆಗಷ್ಟೇ ಲಂಡನ್ ಸೇರಿದಂತೆ ವಿದೇಶಗಳಲ್ಲಿ ನಾಲ್ಕೈದು ಕಡೆ ಸಂಗೀತ ಸುಧೆ ಹರಿಸಿ ಬಂದಿದ್ದಾರೆ. ಭಾರತಕ್ಕೆ ಬಂದ ತಕ್ಷಣ, ಶ್ರೀರಾಮನ ಗುಣಗಾನ ಮಾಡುವ 'ಹನುಮಾನ್ ಚಾಲೀಸ್'ಗೆ ತಮ್ಮ ಅಭೂತಪೂರ್ವ ಧ್ವನಿ ನೀಡಿ, ಅದನ್ನು ಹನುಮನ ಭಕ್ತನಿಂದ ರಿಲೀಸ್ ಮಾಡಿಸಿ ತಮ್ಮ ಭಕ್ತಿ ಮೆರೆದಿದ್ದಾರೆ ಚಂದನ್ ಶೆಟ್ಟಿಯವರು. ಯೂಟ್ಯೂಬ್‌ನಲ್ಲಿ ಇದನ್ನು ನೀವು ಚಂದನ್ ಶೆಟ್ಟಿ ಧ್ವನಿಯಲ್ಲಿ 'ನಾಡಯೋಗಿ' ಚಾನೆಲ್‌ನಲ್ಲಿ ಕೇಳಿಸಿಕೊಳ್ಳಬಹುದು.
ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?
ಅಂದಹಾಗೆ, ಶ್ರೀ ರಾಮನವಮಿ ಹಿಂದೂಗಳು ದೇವರೆಂದು ಪೂಜಿಸುವ ಶ್ರೀರಾಮನ ಹುಟ್ಟಿದ ದಿನ. ಶ್ರೀರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ.
ಈ ದಿನವನ್ನು ರಾಮನ ಕಥಾ ವಾಚನಗೋಷ್ಠಿಗಳು, ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಓದಿ ಅನುಸರಿಸಲಾಗಿದೆ. ಈ ದಿನದಂದು ಕೆಲವು ವೈಷ್ಣವ ಹಿಂದೂಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಇತರರು ತಮ್ಮ ಮನೆಯಲ್ಲಿಯೇ ಪ್ರಾರ್ಥಿಸುತ್ತಾರೆ ಮತ್ತು ಕೆಲವರು ಪೂಜೆ ಮತ್ತು ಆರತಿಯ ಭಾಗವಾಗಿ ಸಂಗೀತದೊಂದಿಗೆ ಭಜನೆ ಅಥವಾ ಕೀರ್ತನೆಯಲ್ಲಿ ಭಾಗವಹಿಸುತ್ತಾರೆ.
ಏನಾಯ್ತು ಸಿಕಂದರ್ ಗತಿ..?! ಮಂಕಾದ ಓಟ: 6ನೇ ದಿನವೂ ಗಳಿಕೆ ಇಳಿಕೆ, 100 ಕೋಟಿ ಕ್ಲಬ್ ಸೇರೋದೂ ಡೌಟ್..!?
ಕೆಲವು ಭಕ್ತರು ಶಿಶು ರಾಮನ ಸಣ್ಣ ಪ್ರತಿಮೆಗಳನ್ನು ತೆಗೆದುಕೊಂಡು ಅದಕ್ಕೆ ಅಭಿಷೇಕವನ್ನು ಮಾಡಿ, ವಸ್ತ್ರವನ್ನು ತೊಡಿಸಿ ನಂತರ ಅದನ್ನು ತೊಟ್ಟಿಲಲ್ಲಿ ಇರಿಸುವ ಮೂಲಕ ಪೂಜಿಸುತ್ತಾರೆ. ದತ್ತಿ ಕಾರ್ಯಕ್ರಮಗಳು ಮತ್ತು ಹಲವು ಸಮುದಾಯಗಳಲ್ಲಿ ಭೋಜವನ್ನೂ ಆಯೋಜಿಸಲಾಗುತ್ತದೆ. ಈ ಹಬ್ಬವು ಅನೇಕ ಹಿಂದೂಗಳಿಗೆ ನೈತಿಕ ಪ್ರತಿಬಿಂಬದ ಒಂದು ಸಂದರ್ಭವಾಗಿದೆ. ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಈ ಹಬ್ಬವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.