ಈ ಸಾರಿ ಭಾರೀ ಬದಲಾವಣೆಯೊಂದಿಗೆ ಬಿಗ್ ಬಾಸ್/ ಸೂಪರ್ ವಾಹಿನಿ ಬದಲಾಗಿ ಕಲರ್ಸ್ ಕನ್ನಡದಲ್ಲಿಯೆ ಪ್ರಸಾರ/ ನಂಬರ್ 1 ಸ್ಥಾನ ಗಿಟ್ಟಿಸಿಕೊಳ್ಳಲು ಬಿಗ್ ಬಾಸ್ ಶೋ ಸಹಾಯ
ಬೆಂಗಳೂರು[ಸೆ. 01] ಕನ್ನಡದ ಬಿಗ್ ಬಾಸ್ ಯಾವಾಗ ಶುರುವಾಗಲಿದೆ? ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಇದಕ್ಕೆ ಸದ್ಯದಲ್ಲಿ ಉತ್ತರವೂ ಸಿಗಲಿದೆ.
ಕಳೆದ ಎರಡು ಆವೃತ್ತಿಯ ಬಿಗ್ ಬಾಸ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆದರೆ ಈ ಸಾರಿ ಬಿಗ್ ಬಾಸ್ ಕಲರ್ಸ್ ವಾಹಿನಿಗೆ ಶಿಫ್ಟ್ ಆಗಲಿದೆ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆ ಕಾರಣ ನಂಬರ್ 1 ಸ್ಥಾನ!
ಬಿಗ್ ಬಾಸ್ ನಟಿ ಎದೆ ಮೇಲೆ 'ಪವರ್ ಸ್ಟಾರ್' ಟ್ಯಾಟೂ ಸಿಕ್ಕಾಪಟ್ಟೆ ವೈರಲ್!
ಎಂದಿನಂತೆ ಕನ್ನಡದ ಬಿಗ್ ಬಾಸ್ ನ್ನು ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಬಿಗ್ ಬಾಸ್ ಆರಂಭವಾಗಿದ್ದು ಕನ್ನಡದಲ್ಲಿಯೂ ಶುರುವಾಗಬೇಕಿತ್ತು. ಇನ್ನು ಕೆಲವೇ ದಿನದಲ್ಲಿ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಹವಾ ಕೇಳಿಬರಲಿದೆ.