Anchor Anushree's Post: ಅನುಶ್ರೀ ಮದ್ವೆ ಸುದ್ದಿನೇ ಸುಳ್ಳಾ? ಇನ್​ಸ್ಟಾದಲ್ಲಿ ಪೋಸ್ಟ್​ ಹಾಕಿ ಶಾಕ್​ ಕೊಟ್ಟ ನಟಿ!

Published : Jul 22, 2025, 01:08 PM ISTUpdated : Jul 22, 2025, 01:23 PM IST
Anchor Anushree's Post

ಸಾರಾಂಶ

ಆ್ಯಂಕರ್​ ಅನುಶ್ರೀ ಅವರ ಮದುವೆಯ ಸುದ್ದಿ ಹರಿದಾಡ್ತಿರೋ ಬೆನ್ನಲ್ಲೇ ಕುತೂಹಲದ ಪೋಸ್ಟ್​ ಒಂದನ್ನು ಶೇರ್​ ಮಾಡಿ ಶಾಕ್​ ಕೊಟ್ಟಿದ್ದಾರೆ. ಅದರಲ್ಲಿ ಇರೋದೇನು? 

ಈಗ ಎಲ್ಲೆಲ್ಲೂ ಆ್ಯಂಕರ್​ ಅನುಶ್ರೀ ಅವರ ಮದುವೆಯ ಸುದ್ದಿಯೇ ಹರಿದಾಡುತ್ತಿದೆ. ಇದುವರೆಗೆ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದು ನಿಜವೇ ಆಗಿದ್ದಲ್ಲಿ, ಸದ್ಯ ಆ್ಯಂಕರ್​ ಅನುಶ್ರೀ ಅವರು ಸದ್ಯ ಮದುವೆಯ ಮೂಡ್​ನಲ್ಲಿ ಇದ್ದಾರೆ. ಅಷ್ಟಕ್ಕೂ ಆ್ಯಂಕರ್​ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು. ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡಿದ್ದರು ಅವರ ಫ್ಯಾನ್ಸ್​. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು ನಟಿ. ಕಾರ್ಯಕ್ರಮವೊಂದರಲ್ಲಿ ನಟಿ ಮಲೈಕಾ ವಸುಪಾಲ್​ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದರು. ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದೂ ಹೇಳಿದ್ದರು. ಅದೇ ರೀತಿ ಅನುಶ್ರೀ ಅವರ ಮದುವೆ ಆಗಸ್ಟ್​ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್​ ಆಗಿದೆ.

ಆದರೆ, ಅನುಶ್ರೀ ಅವರು ಇದುವರೆಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ವಿಸಿಟ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಗೊತ್ತಿದ್ದೇ ಅನುಶ್ರೀ ಅವರು ಇದೀಗ ಡಾ.ರಾಜ್​ಕುಮಾರ್​ ಅವರ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಅದರಲ್ಲಿ, ಡಾ.ರಾಜ್​ಕುಮಾರ್​ ಅವರು ಸಿನಿಮಾದ ಡೈಲಾಗ್​ ಒಂದಿದೆ. ಹಿನ್ನೆಲೆಯಲ್ಲಿ ನಟಿ ಅಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು. ಆಗ ರಾಜ್​ ಅವರು, ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಅನುಶ್ರೀ ಹೀಗೆ ಹೇಳಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ.

ಅನುಶ್ರೀ ಅವರು ಈ ವರ್ಷವೇ ಮದುವೆಯಾಗುತ್ತೇನೆ ಎಂದಿದ್ದು ಸುಳ್ಳಲ್ಲ. ಪುನೀತ್​ ರಾಜ್​ಕುಮಾರ್​ ತೋರಿಸಿದ ಹುಡುಗನ ಜೊತೆ ಅವರ ಮದುವೆ ಎಂದು ಹೇಳಲಾಗುತ್ತಿದೆ. ಕೈಗೆ ಬ್ಯಾಂಡೇಜ್​ ಮಾಡಿಕೊಂಡ ಯುವಕ, ಅನುಶ್ರೀ ಅವರ ಭಾವಿ ಪತಿ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಅನುಶ್ರೀಯಾಗಲೀ, ಅವರ ಕುಟುಂಬಸ್ಥರಾಗಲೀ ಎಲ್ಲಿಯೂ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಈ ಸುದ್ದಿಯ ಮೂಲ ಕೂಡ ಗೊತ್ತಿಲ್ಲ. ಒಂದು ವೇಳೆ ಇದು ಸುಳ್ಳೇ ಆಗಿದ್ದರೆ, ಇದು ಸುಳ್ಳು ಸುದ್ದಿ ಎಂದು ಅನುಶ್ರೀ ನೇರವಾಗಿ ಹೇಳಬಹುದಿತ್ತು. ಆದರೆ ಹಾಗೆ ಮಾಡದೇ ಮದುವೆಯ ಸುದ್ದಿ ನಿಜ ಇರಬಹುದೇ ಎಂದು ಅನಿಸುವ ಹಾಗೆ ಮಾಡುತ್ತಿದ್ದಾರೆ. ಅದೇ ಇನ್ನೊಂದೆಡೆ ಇಂಥ ಡೈಲಾಗ್​ ಹಾಕಿ ಈಗ ಹರಿದಾಡ್ತಿರೋ ಮದುವೆ ಸುದ್ದಿ ಸುಳ್ಳು ಎನ್ನುವಂತೆ ಬಿಂಬಿಸುತ್ತಿದ್ದಾರೆ.

ಒಟ್ಟಿನಲ್ಲಿ ಆ್ಯಂಕರ್​ ಅನುಶ್ರೀ ಮಜಾ ನೋಡ್ತಾ ಇದ್ದಾರಾ ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ. ಇನ್ನು ಕೆಲವರು ಅವರ ಮದುವೆ ಆಗ್ತಿರೋದು ನಿಜ. ಆದರೆ ಭಾವಿ ಪತಿ ಕೈಮುರಿದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಥಹರೇವಾರಿ ಕಮೆಂಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದ್ದು, ಅದರಿಂದ ನೊಂದು ಅವರು ಈ ರೀತಿ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ ಅಷ್ಟೇ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಮದುವೆಯ ವಿಷಯವನ್ನು ಅನುಶ್ರೀ ಗೌಪ್ಯವಾಗಿಯೇ ಇಟ್ಟಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!