ನಿಶ್ಚಿತಾರ್ಥ ರಿಂಗ್ ಹಾಸ್ಯ ಮಾಡಿ ಎಡವಟ್ಟು, ವಿರೋಧದ ಬಳಿಕ ಅಮೇಜಾನ್ ಪ್ರೈಮ್ ಇಂಡಿಯಾ ಕ್ಷಮೆ

Published : Oct 23, 2025, 08:53 PM IST
Amazon Prime Video India

ಸಾರಾಂಶ

ನಿಶ್ಚಿತಾರ್ಥ ರಿಂಗ್ ಹಾಸ್ಯ ಮಾಡಿ ಎಡವಟ್ಟು, ವಿರೋಧದ ಬಳಿಕ ಅಮೇಜಾನ್ ಪ್ರೈಮ್ ಇಂಡಿಯಾ ಕ್ಷಮೆ ಕೇಳಿದೆ. ಅಷ್ಟಕ್ಕೂ ಏನಿದು ಘಟನೆ, ಅಮೆಜಾನ್ ಇಂಡಿಯಾ ಕೈಸುಟ್ಟುಕೊಂಡಿದ್ದು ಯಾಕೆ? ಕ್ಷಮೆ ಕೇಳುವ ಪರಿಸ್ಥಿತಿ ಯಾಕೆ ಬಂತು?

ನವದೆಹಲಿ (ಅ.23) ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರವಲ್ಲ, ಭೇಷರತ್ ಕ್ಷಮೆ ಕೇಳಿದೆ. ಮಹಿಳೆಯ ಎಂಗೇಜ್‌ಮೆಂಟ್ ರಿಂಗ್ ಕುರಿತು ಹಾಸ್ಯ ಮಾಡಲು ಹೋಗಿ ಅಮೇಜಾನ ಪ್ರೈಮ್ ವಿಡಿಯೋ ಇಂಡಿಯಾ ಎಡವಟ್ಟು ಮಾಡಿಕೊಂಡಿದೆ. ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ, ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದೆ. ನಮ್ಮ ಮೌಲ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ನೀಡಿದೆ.

ಏನಿದು ಘಟನೆ?

ಅಕ್ಟೋಬರ್ 15ರಂದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾವನ್ಹ ಮೊನ್ರೊ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಇದು ಆಕೆಯ ನಿಶ್ಚಿತಾರ್ಥದ ಕುರಿತು ಘೋಷಣೆಯಾಗಿತ್ತು. ಬಾಯ್‌ಫ್ರೆಂಡ್ ತೊಡಿಸಿದ ಎಂಗೇಜ್‌ಮೆಂಟ್ ರಿಂಗ್ ಬೆರಳಿಗೆ ಹಾಕಿಕೊಂಡ ಫೋಟೋ ಇದಾಗಿತ್ತು. ಚಿನ್ನದ ಉಂಗುರದಲ್ಲಿ ಹಸಿರು ಜೆಮ್‌ಸ್ಟೋನ್‌ನಿಂದ ತಯಾರಿಸಿದ ಉಂಗುರ ಇದಾಗಿತ್ತು. ಮತ್ತೊಂದು ಟ್ವೀಟ್‌ನಲ್ಲಿ ಇದೇ ಸಾವನ್ಹ ಮೊನ್ರೋ ನನ್ನ ಬಾಯ್‌ಫ್ರೆಂಡ್ ಮನೆಯ ಬೆಡ್‌ರೂಂ ಗೋಡೆಯಲ್ಲಿ ಐರಿಶ್ ಸಿಂಗರ್ ನಿಯಾಲ್ ಹೂರನ್ ಅವರ ಭಾವಚಿತ್ರವಿರುವ ಡಾಗ್ ಟ್ಯಾಗ್ ಇದೆ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಸಾವನ್ಹ ತನ್ನ ಖುಷಿಯನ್ನು ಹೇಳಿಕೊಂಡಿದ್ದಳು.

 

 

ಮಧ್ಯಪ್ರವೇಶಿಸಿ ಎಡವಟ್ಟು ಮಾಡಿದ ಅಮೇಜಾನ್ ಪ್ರೈಮ್ ಇಂಡಿಯಾ

ಈ ಪೋಸ್ಟ್‌ಗೆ ಆಕೆಯ ಫಾಲೋವರ್ಸ್, ಅಭಿಮಾನಿಗಳು ಆಪ್ತರು ಕಮೆಂಟ್ ಮಾಡಿದ್ದರು. ಆದರೆ ಅಮೇಜಾನ್ ಪ್ರೈಮ್ ವಿಡಿಯೋ ಇಂಡಿಯಾ, ಈಕೆಯ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುತ್ತಾ ಹಾಸ್ಯ ಮಾಡಿತ್ತು. ಪ್ರಮುಖವಾಗಿ ಬಾಯ್‌ಫ್ರೆಂಡ್ ಹಾಕಿದ ಎಂಗೇಜ್‌ಮೆಂಟ್ ರಿಂಗ್ ಸೈಝ್ ಕುರಿತು ಹಾಸ್ಯ ಮಾಡಿತ್ತು. ನೋಡಲು ಸಣ್ಣದಾಗಿದ್ದರೂ ಸಾವನ್ಹ ಮೊನ್ರೋಗೆ ಈ ರಿಂಗ್ ಅಮೂಲ್ಯವಾಗಿತ್ತು. ಆದರೆ ಇದರ ಮೌಲ್ಯ ಅರಿಯದ ಅಮೇಜಾನ್ ಪ್ರೈಮ್ ಇಂಡಿಯಾ, ಸಮ್ಮರ್ ಟರ್ನ್ಡ್ ಪ್ರೆಟಿ ಎಸ್3 ಸೀರಿಸ್ ಡೈಲಾಗ್ ಹಾಗೂ ಫೋಟೋ ಹಾಕಿ ಪೋಸ್ಟ್ ಮಾಡಿತ್ತು. ಹುಡುಗಿ ನಿನ್ನ ಹುಡುಗ ಏನಾದರೂ ನೋಡಲು ರೀತಿ ಕಾಣುತ್ತಿದ್ದಾನ ಎಂದು ತಮಾಷೆ ಮಾಡಿತ್ತು. ಮುಖ್ಯವಾಗಿ ರಿಂಗ್ ಸೈಝ್ ಕುರಿತು ಈ ಹಾಸ್ಯ ಮಾಡಲಾಗಿತ್ತು.

ಅಮೇಜಾನ್ ಪ್ರೈಮ್ ಇಂಡಿಯಾ ವಿರುದ್ದ ಭಾರಿ ಆಕ್ರೋಶ

ಅಮೇಜಾನ್ ಪ್ರೈಮ್ ವಿಡಿಯೋ ಇಂಡಿಯಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆಕೆಯ ಎಂಗೇಜ್‌ಮೆಂಟ್ ರಿಂಗ್ ಯಾವ ಸೈಝ‌್‌ನಲ್ಲಾದರೂ ಇರಲಿ, ಅದು ತಮಾಷೆ ಮಾಡುವ ವಸ್ತುವಲ್ಲ, ಅದು ಪ್ರೀತಿಯಿಂದ ತೊಡಿಸಿದ ರಿಂಗ್. ಹೀಗಾಗಿ ಅದರ ಮೌಲ್ಯ ಹೆಣ್ಣಿಗೆ ಮಾತ್ರ ಗೊತ್ತು ಎಂದು ಹಲವರು ಕಿಡಿ ಕಾರಿದ್ದರು. ಅಮೇಜಾನ್ ಪ್ರೈಮ್ ಕೀಳು ಅಭಿರುಚಿ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇತ್ತ ಮೊನ್ರೊ ಕೂಡ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದರು. ಅತೀ ದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನನ್ನ ಖುಷಿಯ ಸಂದರ್ಭವನ್ನು ಈ ರೀತಿ ಕೀಳು ಮಟ್ಟದ ಹಾಸ್ಯ ಮಾಡಿ ಬಳಸಿಕೊಂಡಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಭಾರಿ ವಿರೋಧದ ಬೆನ್ನಲ್ಲೇ ಕ್ಷಮೆ

ವಿರೋಧಗಳು ಹೆಚ್ಚಾಗುತ್ತಿದ್ದಂತೆ ಅಮೇಜಾನ್ ಪ್ರೈಮ್ ಇಂಡಿಯಾ ವಿಡಿಯೋ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದೆ. ನಾವು ಮಾಡಿದ ಟ್ವೀಟ್ ಪೋಸ್ಟ್ ನೋವುಂಟು ಮಾಡಿದೆ. ಈ ಟ್ವೀಟ್ ಸರಿಯಲ್ಲ. ಹೀಗಾಗಿ ಟ್ವೀಟ್ ಡಿಲೀಟ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಮೌಲ್ಯಗಳನ್ನು ಒಳಗೊಳ್ಳುವಂತೆ ನಡೆದುಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌