
ಚೆನ್ನೈ (ಸೆ.24) ಹಲವು ಟಿವಿ ಕಾರ್ಯಕ್ರಮಗಳು, ಧಾರಾವಾಹಿಗಳಲ್ಲಿ ಸಣ್ಣ ಪಾತ್ರ ಮಾಡಿ ಜನಪ್ರಿಯವಾಗಿದ್ದ ನಟಿ ವರ್ಷಿಣಿ ವೆಂಕಟ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿದ್ದ ನಟಿ ವರ್ಷಿಣಿ ನೇರವಾಗಿ ಸ್ನೇಹಿತನಿಗೆ ಹಲ್ಲೆ ಮಾಡಿ ಬೆದರಿಕೆ ಮಾಡಿದ ಆರೋಪದಡಿ ಅರೆಸ್ಟ್ ಮಾಡಲಾಗಿದೆ. ಶಾರ್ಟ್ ಫಿಲ್ಮ್‌ಗೆ ರೂಪಾಯಿ ಹೂಡಿಕೆ ಮಾಡುವಂತೆ ಸ್ನೇಹಿತ ಹಾಗೂ ಷೇರುಮಾರುಕಟ್ಟೆ ಹೂಡಿಕೆದಾರ ತರುಣ್‌ಗೆ ಒತ್ತಾಯಿಸಿದ್ದಾರೆ. ಹೂಡಿಕೆಗೆ ನಿರಾಕರಿಸಿದ ಪರಿಣಾಮ ವರ್ಷಿಣಿ ಹಾಗೂ ಆಕೆಯ ಕೆಲ ಆಪ್ತರು ಆಗಮಿಸಿ ತರುಣ್ ಮೇಲೆ ಹಲ್ಲೆ ನಡೆಸಿ ಆತನಿಂದ 5.5 ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾದ ಗ್ಯಾಂಗ್‌ನ್ನು ಅರೆಸ್ಟ್ ಮಾಡಲಾಗಿದೆ.
ಚೆನ್ನೈ ಮೂಲಕ ನಟಿ ವರ್ಷಿಣಿ ವೆಂಕಟ್ ಹಾಗೂ ಆಪ್ತರು ಶಾರ್ಟ್ ಫಿಲ್ಮ್ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ವರ್ಷಿಣಿಯ ಸ್ನೇಹಿತ ತರುಣ್‌ಗೆ ಕರೆ ಮಾಡಿ ಹೂಡಿಕೆ ಮಾಡಲು ಸೂಚಿಸಿದ್ದಾರೆ. ಈ ಕುರಿತು ಮಾತುಕತೆಗಾಗಿ ತರುಣ್ ಆಗಮಿಸಿದ್ದಾರೆ. ಚೆನ್ನೈ ನಗರದಲ್ಲಿ ವರ್ಷಿಣಿ ಹಾಗೂ ಆಪ್ತರು, ಜೊತೆಗೆ ಹೂಡಿಕೆದಾರ ತರುಣ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ತಾನು ಹೂಡಿಕೆ ಮಾಡುವುದಿಲ್ಲ ಎಂದು ತರುಣ್ ಸ್ಪಷ್ಟಪಡಿಸಿದ್ದಾರೆ.
ಹೊಟೆಲ್‌ಗೆ ಆಹ್ವಾನಿಸಿದ ಮಾತುಕತೆಯಲ್ಲಿ ತರುಣ್ ತಮ್ಮ ನಿರ್ಧಾರ ತಿಳಿಸಿದ್ದಾರೆ. ಆದರೆ ಹೂಡಿಕೆ ಮಾಡದಿದ್ದರೆ ವರ್ಷಿಣಿಯನ್ನು ತರುಣ್ ಬಳಸಿಕೊಂಡು ವಂಚಿಸಿದ್ದಾರೆ ಎಂದು ದೂರು ನೀಡುವುದಾಗಿ ಬೆದರಿಸಿದ್ದಾರೆ. ಕಿರುಕುಳ ಸೇರಿದಂತೆ ಹಲವು ದೂರು ನೀಡಿ ಟ್ರಾಪ್ ಮಾಡುವುದಾಗಿ ಬೆದರಿಸಿದ್ದಾರೆ. ಇಷ್ಟೇ ಅಲ್ಲ ತರುಣ್ ಕೈಯಲ್ಲಿದ್ದ 50 ಸಾವಿರ ರೂಪಾಯಿ ಕಿತ್ತುಕೊಂಡು ವರ್ಷಿಣಿ ಆ್ಯಂಡ್ ಗ್ಯಾಂಗ್ ತೆರಳಿದೆ.
ಘಟನೆಯಿಂದ ಬೆಚ್ಚಿ ಬಿದ್ದ ತರುಣ್ ತಾವು ತಂಗಿದ್ದ ಹೊಟೆಲ್‌ಗೆ ಮರಳಿದ್ದಾರೆ . ಆದರೆ ವರ್ಷಿಣಿ ಹಾಗೂ ಆಕೆಯ ಆಪ್ತರಿಂದ ನಿರಂತರ ಬೆದರಿಕೆ ಕರೆಗಳಿಂದ ತರುಣ್ ಕಂಗಾಲಾಗಿದ್ದಾನೆ. ಪರಿಣಾಮ ವರ್ಷಿಣಿ ವೆಂಕಟ್ ಖಾತೆಗೆ 3 ಲಕ್ಷ ರೂಪಾಯಿ ಹಾಗೂ ವರ್ಷಿಣಿ ಆಪ್ತ ಸಂಜಯ್‌ಗೆ 2 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾನೆ. ಹಣ ವರ್ಗಾವಣೆ ಮಾಡಿದ ಬೆನ್ನಲ್ಲೇ 27 ಲಕ್ಷ ರೂಪಾಯಿ ವರ್ಗಾವಣೆ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹೆಚ್ಚಾಗುತ್ತಿದ್ದಂತೆ ತರುಣ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಣ ವರ್ಗಾವಣೆ ದಾಖಲೆ ಪರೀಶೀಲನೆ ವೇಳೆ 5 ಲಕ್ಷ ರೂಪಾಯಿ ಟ್ರಾನ್ಸಾಕ್ಷನ್ ಪತ್ತೆಯಾಗಿದೆ. ಇನ್ನು ಹೊಟೆಲ್ ಬಳಿ ವರ್ಷಿಣಿ ಹಾಗೂ ಆಪ್ತರು ಆಗಮಿಸಿ ಪ್ಲಾನ್ ಮಾಡುವುತ್ತಿರುವುದು ಪತ್ತೆಯಾಗಿದೆ. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಪೊಲೀಸರು ನಟಿ ವರ್ಷಿಣಿ ವೆಂಕಟ್ ಅವರನ್ನು ಬಂಧಿಸಿದ್ದಾರೆ. ವರ್ಷಿಣಿ ಫೋನ್ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಬಳಿಕ ನಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.